Income Tax Payers : ತೆರಿಗೆ ಪಾವತಿದಾರರಿಗೆ ಗುಡ್‌ ನ್ಯೂಸ್‌ : ಈ 10 ರೀತಿಯಲ್ಲಿ ತೆರಿಗೆ ವಿನಾಯಿತಿ

ನವದೆಹಲಿ : 2023ರ ಬಜೆಟ್‌ ಮಂಡನೆಗೆ ದಿನಾಂಕ ಬರುತ್ತಿದ್ದಂತೆ ತೆರಿಗೆ ವಿನಾಯಿತಿಯ ಬೇಡಿಕೆ ಹೆಚ್ಚುತ್ತಿದೆ. ಅದರಲ್ಲಿ ವೃತ್ತಿ ತೆರಿಗೆ ಪಾವತಿಸುವವರು (Income Tax Payers) ಈ ಬಾರಿ ವಿನಾಯಿತಿ ಮಿತಿಯಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಈ ನಡುವೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತೆರಿಗೆ ವಿಯಾಯಿತಿ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ. ಹಳೆಯ ತೆರಿಗೆ ಪದ್ಧತಿಯಲ್ಲಿ ಪ್ರತಿಯೊಬ್ಬ ತೆರಿಗೆದಾರರು ಸುಮಾರು ಏಳರಿಂದ ಹತ್ತು ವಿಧಗಳಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು ಎಂದು ನಿರ್ಮಲ ಸೀತಾರಾಮನ್ ಸಚಿವೆ ತಿಳಿಸಿದ್ದಾರೆ.

ಹಳೆಯ ತೆರಿಗೆ ಪದ್ಧತಿಯಲ್ಲಿ ಆದಾಯದ ಮಿತಿಯನ್ನು ಅವಲಂಬಿಸಿ ಆದಾಯ ತೆರಿಗೆ ದರಗಳು 10, 20 ಮತ್ತು 30 ಪ್ರತಿಶತದ ನಡುವೆ ಇರುತ್ತದೆ. ಹಳೆ ತೆರಿಗೆ ಪದ್ಧತಿಯ ಜೊತೆಯಲಿ ಸರಕಾರ ಮತ್ತೊಂದು ವ್ಯವಸ್ಥೆ ತಂದಿದ್ದು, ಇದರಲ್ಲಿ ವಿನಾಯಿತಿ ಇಲ್ಲದಿದ್ದರೂ ಸರಳವಾಗಿದ್ದು ತೆರಿಗೆ ಕಡಿಮೆಯಾಗಿದೆ ಎಂದು ನಿರ್ಮಲ ಸೀತಾರಾಮನ್‌ ತಿಳಿಸಿದರು. ಕಡಿಮೆ ಆದಾಯದ ಗುಂಪಿನ ಜನರಿಗೆ ಕಡಿಮೆ ಆದಾಯ ಗುಂಪಿನ ಜನರಿಗೆ ಕಡಿಮೆ ದರಗಳು ಇರುವಂತೆ ನಾನು ಏಳು ಸ್ಲ್ಯಾಬ್‌ಗಳನ್ನು ಮಾಡುವ ಯೋಜನೆಯಿದೆ” ಎಂದು ಹೇಳಿದರು.

2020-21ರ ಬಜೆಟ್‌ನಲ್ಲಿ ಪರ್ಯಾಯ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಲಾಗಿದೆ. ಶುಕ್ರವಾರ ಅಬ್ಸರ್ವರ್ ರಿಸರ್ಚ್ ಫೌಂಡೇಶನ್‌ನ ಉಪಾಧ್ಯಕ್ಷ ಗೌತಮ್ ಚಿಕ್ರಮನೆ ಅವರ ‘ರಿಫಾರ್ಮ್ ನೇಷನ್’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಹಣಕಾಸು ಸಚಿವರು ಮಾತನಾಡಿದರು. ಈ ಸಮಯದಲ್ಲಿ, ಸರಕಾರವು 2020-21 ರ ಸಾಮಾನ್ಯ ಬಜೆಟ್‌ನಲ್ಲಿ ಪರ್ಯಾಯ ಆದಾಯ ತೆರಿಗೆ ಪದ್ಧತಿಯನ್ನು ಪರಿಚಯಿಸಿದೆ. ಅದರ ಅಡಿಯಲ್ಲಿ ವ್ಯಕ್ತಿಗಳು ಮತ್ತು ಹಿಂದೂ ಅವಿಭಜಿತ ಕುಟುಂಬಗಳಿಗೆ (HUFs) ಕಡಿಮೆ ದರಗಳೊಂದಿಗೆ ತೆರಿಗೆ ವಿಧಿಸಲಾಯಿತು. ಆದರೂ ಬಾಡಿಗೆ ಭತ್ಯೆ, ವಸತಿ ಸಾಲದ ಬಡ್ಡಿ ಮತ್ತು 80ಸಿ ಅಡಿಯಲ್ಲಿ ಹೂಡಿಕೆಯಂತಹ ಇತರ ತೆರಿಗೆ ವಿನಾಯಿತಿಗಳನ್ನು ಈ ವ್ಯವಸ್ಥೆಯಲ್ಲಿ ನೀಡಲಾಗುವುದಿಲ್ಲ ಎಂದು ಹೇಳಿದರು.

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರಿಗೆ ಸಿಹಿ ಸುದ್ಧಿ : 3 ವರ್ಷಗಳ ನಂತರ ಏರಿಕೆಯಾಯ್ತು ಸ್ಥಿರ ಠೇವಣಿ ದರ

ಇದನ್ನೂ ಓದಿ : ಗುಡ್‌ನ್ಯೂಸ್‌ : ಈ ರಾಜ್ಯಗಳ ಸರಕಾರಿ ನೌಕರರಿಗೆ ಡಿಎ ಹೆಚ್ಚಳ

ಇದನ್ನೂ ಓದಿ : Twitter hacked : ಟ್ವಿಟರ್ ಹ್ಯಾಕ್, 200 ಮಿಲಿಯನ್ ಬಳಕೆದಾರರ ಇಮೇಲ್ ವಿಳಾಸ ಸೋರಿಕೆ

ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಹೆಚ್ಚಿಸುವಂತೆ ತೆರಿಗೆ ಪಾವತಿದಾರರು ಬಹಳ ಸಮಯದಿಂದ ಸರಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ಇದರೊಂದಿಗೆ 80ಸಿ ಅಡಿಯಲ್ಲಿ ಹೂಡಿಕೆ ಮಿತಿಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಇದೆ. ಯಾವ ಬೇಡಿಕೆಗಳನ್ನು ಸರಕಾರ ಪರಿಗಣಿಸುತ್ತದೆ ಎಂಬುದನ್ನು ಕಾದು ನೋಡಬೇಕು ಮತ್ತು ಫೆಬ್ರವರಿ 1 ರಂದು ಬಜೆಟ್‌ನಲ್ಲಿ ಘೋಷಿಸಬಹುದು ಎಂಬ ನಿರೀಕ್ಷೆಯಿದೆ.

Income Tax Payers: Good news for tax payers: Tax exemption in these 10 ways

Comments are closed.