Virat Kohli dance : ಆರ್‌ಸಿಬಿ ತಂಡದ ಹೊಸ ರ್ಯಾಪ್ ಸಾಂಗ್‌ನಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಡ್ಯಾನ್ಸ್

ಬೆಂಗಳೂರು: ಕ್ರಿಕೆಟ್ ಜಗತ್ತಿನ ರನ್ ಮಷಿನ್, ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಅದ್ಭುತ ಬ್ಯಾಟ್ಸ್’ಮನ್ ಅಷ್ಟೇ ಅಲ್ಲ, ಒಳ್ಳೆಯ ಡ್ಯಾನ್ಸರ್ (Virat Kohli dance) ಕೂಡ ಹೌದು. ಕೊಹ್ಲಿಯವರ ಡ್ಯಾನ್ಸಿಂಗ್ ಸ್ಕಿಲ್ ಆಗಾಗ ಅನಾವರಣವಾಗುತ್ತಲೇ ಇರುತ್ತದೆ. ಇದೀಗ ಕಿಂಗ್ ಕೊಹ್ಲಿ ತಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore – RCB) ತಂಡದ ರ್ಯಾ ಪ್ ಸಾಂಗ್ (Rap Song) ಒಂದಕ್ಕೆ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

RCB ತಂಡದ ರ್ಯಾ ಪ್ ಸಾಂಗ್ ಒಂದರಲ್ಲಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು, ಸಖತ್ ಸ್ಟೆಪ್ಸ್ ಹಾಕಿದ್ದಾರೆ. ಮುಂದಿನ ಐಪಿಎಲ್ ಟೂರ್ನಿಗೂ ಮುನ್ನ ರಾಯಲ್ ಜಾಲೆಂಜರ್ಸ್ ತಂಡದ ಈ ರ್ಯಾ ಪ್ ಸಾಂಗ್ ರಿಲೀಸ್ ಆಗುವ ಸಾಧ್ಯತೆಯಿದೆ. ಈ ಹಾಡಿಗೆ “ನಯಾ ಶೇರ್” (RCB rap song Naya Sher) ಎಂದು ಹೆಸರಿಡಲಾಗಿದೆ.

https://www.instagram.com/reel/CnD3UwEJdsF/?utm_source=ig_web_copy_link

ರ್ಯಾ ಪ್ ಸಾಂಗ್ ಆಲ್ಬಮ್’ನ ಟೀಸರ್ ಅನ್ನು ರಾಯಲ್ ಚಾಲೆಂಜ್ ಚೂಸ್ ಬೋಲ್ಟ್ ಎಂಬ ಇನ್’ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ರ್ಯಾ ಪ್ ಸಾಂಗ್’ನಲ್ಲಿ ವಿರಾಟ್ ಕೊಹ್ಲಿ ಹಾಕಿರುವ ಸ್ಪೆಪ್ಸ್ ನೋಡಿ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ.

34 ವರ್ಷದ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಆಧಾರಸ್ಥಂಭ. ಐಪಿಎಲ್ ಆರಂಭವಾದ ದಿನದಿಂದ ಇಲ್ಲಿಯವರೆಗೆ ಒಂದೇ ತಂಡದ ಪರ ಆಡುತ್ತಿರುವ ಕಿಂಗ್ ಕೊಹ್ಲಿ, 9 ವರ್ಷಗಳ ಕಾಲ RCB ತಂಡವನ್ನು ಮುನ್ನಡೆಸಿದ್ದರು. 2016ರಲ್ಲಿ ರಾಯಲ್ ಚಾಲೆಂಜರ್ಸ್ ತಂಡ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಫೈನಲ್ ತಲುಪಿತ್ತು. ಆದರೆ ಫೈನಲ್’ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಸೋತು ನಿರಾಸೆ ಅನುಭವಿಸಿತ್ತು.

ಇದನ್ನೂ ಓದಿ : ನಿಟ್ಟೆ ಕ್ರಿಕೆಟ್‌ ಹಬ್ಬ: ರಾಯಲ್‌ ಇಂಡಿಯನ್ಸ್‌ಗೆ ಜಯ

ಇದನ್ನೂ ಓದಿ : VRR ಟಿ20 ಕರಿಯರ್ ಕ್ಲೋಸ್? ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೂ ಇಲ್ಲ ಟೀಮ್ ಇಂಡಿಯಾ ತ್ರಿಮೂರ್ತಿಗಳು

ಇದನ್ನೂ ಓದಿ : Ranji Trophy 2022-23 : ಛತ್ತೀಸ್‌ಗಢ ವಿರುದ್ಧ ತವರು ನೆಲದಲ್ಲಿ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಕರ್ನಾಟಕ

2008ರಿಂದ 2022ರವರೆಗೆ 15 ವರ್ಷಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 223 ಪಂದ್ಯಗಳನ್ನಾಡಿರುವ ವಿರಾಟ್ ಕೊಹ್ಲಿ 36.20ರ ಉತ್ತಮ ಸರಾಸರಿಯಲ್ಲಿ 129.15ರ ಸ್ಟ್ರೈಕ್’ರೇಟ್’ನಲ್ಲಿ 5 ಶತಕ ಹಾಗೂ 44 ಅರ್ಧಶತಕಗಳ ಸಹಿತ 6624 ರನ್ ಕಲೆ ಹಾಕಿದ್ದಾರೆ. ಐಪಿಎಲ್’ನಲ್ಲಿ ಒಟ್ಟು 578 ಬೌಂಡರಿಗಳನ್ನು ಬಾರಿಸಿರುವ ಕಿಂಗ್ ಕೊಹ್ಲಿ, 218 ಸಿಕ್ಸರ್’ಗಳನ್ನೂ ಸಿಡಿಸಿದ್ದಾರೆ.

Virat Kohli dance: King Kohli dances in RCB’s new rap song

Comments are closed.