DMart:ಡಿ ಮಾರ್ಟ್ ಮಾಲೀಕನ ಸಾಧನೆ: ವಿಶ್ವದ 100 ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ರಾಧಾಕೃಷ್ಣನ್ ದಮಾನಿ!

ಡಿ ಮಾರ್ಟ್ ಗಳ ಮೂಲಕ ವ್ಯಾಪಾರ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ಭಾರತದ ಉದ್ಯಮಿ  ರಾಧಾಕೃಷ್ಣನ್ ದಮಾನಿ ಪ್ರಪಂಚದ 100 ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಲವೇ ಭಾರತೀಯರ ಸಾಲಿನಲ್ಲಿ ಸೇರ್ಪಡೆಗೊಂಡಿದ್ದಾರೆ.

19.2 ಬಿಲಿಯನ್ ಡಾಲರ್ ಅಂದ್ರೇ ಭಾರತೀಯ ಲೆಕ್ಕಾಚಾರದ ಪ್ರಕಾರ 1.42 ಲಕ್ಷ ಕೋಟಿ ರೂಪಾಯಿ ಆಸ್ತಿಯೊಂದಿಗೆ ರಾಧಾಕೃಷ್ಣನ್ ದಮಾನಿ, ಬ್ಲೂಮ್ ಬರ್ಗ್ ಕೋಟ್ಯಾಧಿಪತಿಗಳ ರ್ಯಾಂಕಿಂಗ್ ಪಟ್ಟಿಯಲ್ಲಿ 98 ನೇ ಸ್ಥಾನದಲ್ಲಿದ್ದಾರೆ.

ಬ್ಲೂಮ್ ಬರ್ಗ್ ಪ್ರತಿನಿತ್ಯ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸುತ್ತಿದ್ದು, ಇದರಲ್ಲಿ ರಾಧಾಕೃಷ್ಣನ್ ದಮಾಮಿ  ಸ್ಥಾನಪಡೆದಿದ್ದಾರೆ. ಇದನ್ನು ಹೊರತು ಪಡಿಸಿ ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಅದಾನಿ ಗ್ರೂಪ್ ನ ಗೌತಂ ಅದಾನಿ, ಅಜೀಂ ಪ್ರೇಮ್ ಜೀ, ಪಲ್ಲೋನಜೀ ಮಿಸ್ತ್ರಿ, ಶಿವ ನಾಡಾರ್, ಲಕ್ಷ್ಮೀ ಮಿತ್ತಲ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

2002 ರಲ್ಲಿ ಇಂಡಿಯಾದಲ್ಲಿ ಒಂದು ಶಾಖೆಯೊಂದಿಗೆ ಆರಂಭವಾದ ಡಿ ಮಾರ್ಟ್ ಪ್ರಸ್ತುತ ದೇಶದ ವಿವಿಧ ನಗರಗಳಲ್ಲಿ ಒಟ್ಟು 238 ಡಿ ಮಾರ್ಟ್ ಶಾಖೆಗಳನ್ನು ಹೊಂದಿದೆ.   

Comments are closed.