ZyCov-D Vaccine: ಕೊನೆಗೂ ಪೋಷಕರಿಗೆ ಸಿಕ್ತು ಸಿಹಿಸುದ್ದಿ: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಿದ್ಧವಾಯ್ತು ಜೈಕೊವ್ –ಡಿ ಲಸಿಕೆ!

ನವದೆಹಲಿ: ಕೊರೋನಾ ಮೂರನೇ ಅಲೆ ಮಕ್ಕಳಿಗೆ ಬಾಧಿಸಲಿದೆ ಎಂಬ ಆತಂಕದ ನಡುವೆ ಪೋಷಕರಿಗೆ ಸಮಾಧಾನ ತರುವಂತ ಸುದ್ದಿಯೊಂದು ಹೊರಬಿದ್ದಿದ್ದು, 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಜೈಕೊವ್ –ಡಿ  ಲಸಿಕೆ ಸಿದ್ಧವಾಗಿದೆ.

ಜಗತ್ತಿನಲ್ಲೇ ಮೊದಲ ಬಾರಿಗೆ ಅಭಿವೃದ್ಧಿ ಪಡಿಸಲಾದ ದೇಶೀಯ ಡಿಎನ್ಎ ಆಧಾರಿತ ಕೋವಿಡ್ 19 ಲಸಿಕೆಗೆ ಭಾರತದ ಡ್ರಗ್ ಕಂಟ್ರೋಲ್ ಜನರಲ್ ಅನುಮೋದನೆ ನೀಡಿದೆ. ಈ ಲಸಿಕೆಯನ್ನು 12 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಹಾಗೂ ವಯಸ್ಕರಿಗೆ ನೀಡಲು ಶುಕ್ರವಾರ ಅನುಮೋದನೆ ನೀಡಲಾಗಿದೆ.

ಜೈಡಸ್ ಕ್ಯಾಡಿಲಾ ಹೆಲ್ತ್ ಕೇರ್ ಕಂಪನಿ ಉತ್ಪಾದಿಸುವ ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡುವ ಜೈಕೊವ್ ಡಿ ಲಸಿಕೆ ಪರಿಣಾಮತ್ವವೂ ಶೇಕಡಾ 66.60 ರಷ್ಟಿದ್ದು, ಲಸಿಕೆಯ ತುರ್ತು ಬಳಕೆಗೆ ಕಂಪನಿ ಜುಲೈ 1 ರಂದೇ ಅನುಮೋದನೆ ಕೋರಿತ್ತು.

ಜೈಡಸ್ ಕ್ಯಾಡಿಲಾ ಕಂಪನಿಯು ಈಗಾಗಲೇ ಜೈಕೊವ್ ಕಂಪನಿಯ ಲಸಿಕೆಯನ್ನು 28 ಸಾವಿರ ಜನರ ಮೇಲೆ ಬಳಸಿದ್ದು 12 ರಿಂದ 18 ವರ್ಷದ 1 ಸಾವಿರ ಮಕ್ಕಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿತ್ತು. ಈ ಪರೀಕ್ಷೆಯಲ್ಲಿ ಜೈಕೊವ್ –ಡಿ ಲಸಿಕೆ ಪರಿಣಾಮಕಾರಿ ಎಂಬುದು ಸಾಬೀತಾಗಿದೆ.

ಕೇಂದ್ರ ಸರ್ಕಾರ ಈ ಲಸಿಕೆ ಬಳಕೆಗೆ ಅನುಮತಿ ನೀಡಿದ್ದು, ಈ ಲಸಿಕೆ ಇನ್ನೆರಡು ತಿಂಗಳಿನಲ್ಲಿ ಬಳಕೆಗೆ ಸಿಗಲಿದೆ ಎಂದು ಕಂಪನಿ ತಿಳಿಸಿದೆ. ಈ ಲಸಿಕೆಯನ್ನು 2 ರಿಂದ -8 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಸಂಗ್ರಹಿಸಲು ಯೋಗ್ಯವಾಗಿದೆ ಎಂದು ಕಂಪನಿ ಹೇಳಿದೆ.

Comments are closed.