ಕೊರೊನಾ ಲಸಿಕೆ ಪಡೆದವರಿಗೆ ಬಿಗ್‌ ಶಾಕ್‌ : 13,768 ಮಂದಿಗೆ ಮತ್ತೆ ಸೋಂಕು

ಬೆಂಗಳೂರು : ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಮಹಾಮಾರಿ ಬಿಗ್‌ಶಾಕ್‌ ಕೊಟ್ಟಿದೆ. ಕರ್ನಾಟಕದಲ್ಲಿ ಕೊರೊನಾ ಲಸಿಕೆ ತೆಗೆದುಕೊಂಡಿದ್ದ 13,768 ಮಂದಿಯಲ್ಲಿ ಕೊರೊನಾ ಮತ್ತೆ ಕಾಣಿಸಿಕೊಂಡಿದೆ.

ಕೊರೊನಾ ಲಸಿಕೆ ಪಡೆದುಕೊಂಡ್ರೆ ಕೊರೊನಾ ಸೋಂಕಿನಿಂದ ರಕ್ಷಣೆ ಪಡೆಯಬಹುದು ಅಂತಾ ಹೇಳಲಾಗುತ್ತಿದೆ. ಆದರೆ ಕೊರೊನಾ ಲಸಿಕೆ ತೆಗೆದುಕೊಂಡವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ನೆರೆಯ ಕೇರಳದಲ್ಲಿ ಸುಮಾರು ನಲವತ್ತು ಸಾವಿರು ಮಂದಿಗೆ ಕೊರೊನಾ ಸೋಂಕು ಮತ್ತೆ ದೃಢಪಟ್ಟಿತ್ತು. ಇದೀಗ ಕರ್ನಾಟಕದಲ್ಲಿ ಕರ್ನಾಟಕದಲ್ಲಿ ಕೊವಿಡ್ ಲಸಿಕೆ ಪಡೆದ ಒಟ್ಟು 13,768 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

ರಾಜ್ಯದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿರುವ 13,768 ಮಂದಿಯ ಪೈಕಿ, 11,150 ಕೊವಿಶೀಲ್ಡ್‌ ಹಾಗೂ 2,618 ಕೋವ್ಯಾಕ್ಸಿನ್‌ ಲಸಿಕೆಯನ್ನು ಪಡೆದುಕೊಂಡವರಾಗಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಇದರಲ್ಲಿ ಬಹುತೇಕರು ಮೊದಲ ಲಸಿಕೆಯನ್ನು ಮಾತ್ರವೇ ತೆಗೆದುಕೊಂಡಿದ್ದರು. ಎರಡೂ ಡೋಸ್ ಲಸಿಕೆ ಕೊವಿಶೀಲ್ಡ್ ಲಸಿಕೆ ಪಡೆದ 2,120 ಮಂದಿ ಹಾಗೂ ಮೊದಲ ಡೋಸ್ ಕೊವ್ಯಾಕ್ಸಿನ್ ಲಸಿಕೆ ಪಡೆದಿರುವ 2,216 ಜನರಿಗೆ ಮತ್ತೆ ಸೋಂಕು ಕಾಣಿಸಿಕೊಂಡಿದ್ರೆ ಕೊವ್ಯಾಕ್ಸಿನ್ ಎರಡು ಡೋಸ್‌ ಲಸಿಕೆ ಪಡೆದ 402 ಜನರಿಗೆ ಸೋಂಕು ದೃಢಪಟ್ಟಿದೆ.

ಆದರೆ ಕೊರೊನಾ ಲಸಿಕೆಯನ್ನು ತೆಗೆದುಕೊಂಡ ನಂತರದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ್ರೆ ಸಾವನ್ನಪ್ಪು ಪ್ರಮಾಣ ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಕರ್ನಾಟಕ ಮಾತ್ರವಲ್ಲದೇ ನೆರೆಯ ಕೇರಳ, ಮಹಾರಾಷ್ಟ್ರ ಅಲ್ಲದೇ ಅಮೇರಿಕಾ, ಇಂಗ್ಲೆಂಡ್‌ ಸೇರಿದಂತೆ ಹಲವು ದೇಶಗಳಲ್ಲಿಯೂ ಕೊರೊನಾ ಲಸಿಕೆ ಪಡೆದುಕೊಂಡವರಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಕುರಿತು ತಜ್ಞರು ಸಂಶೋಧನೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ : ರಾಜ್ಯದ 8 ಜಿಲ್ಲೆಗಳಲ್ಲಿ ವೀಕೆಂಡ್‌ ಲಾಕ್‌ಡೌನ್‌ : ಗಡಿ ಜಿಲ್ಲೆಗಳಲ್ಲಿ ರೂಲ್ಸ್‌ ಇನ್ನಷ್ಟು ಟೈಟ್

ಇದನ್ನೂ ಓದಿ : ಕಣ್ಣೀರಿನಿಂದಲೂ ಹರಡುತ್ತೆ ಕೊರೊನಾ : ಬೆಚ್ಚಿಬೀಳಿಸಿದೆ ತಜ್ಞರ ಸಂಶೋಧನಾ ವರದಿ

Comments are closed.