Mudra loan :ಸ್ವತಃ ವ್ಯವಹಾರ ಆರಂಭಿಸೋ ಮಹಿಳೆಯರಿಗೆ ಸುಲಭವಾಗಿ ಸಿಗುತ್ತೆ ಸಾಲ : ಪಡೆಯೋದು ಹೇಗೆ ಗೊತ್ತಾ ?

ನವದೆಹಲಿ : ಸ್ವಂತ ವ್ಯವಹಾರ ಆರಂಭಿಸಲು ಆರ್ಥಿಕ ಸಮಸ್ಯೆ ಅನೇಕರನ್ನು ಕಾಡುತ್ತದೆ. ಹಣ ಹೊಂದಿಸುವ ಪ್ರಶ್ನೆ ಎದುರಾಗುತ್ತದೆ. ಇಂತಹ ಮಹಿಳೆಯರಿಗಾಗಿಯೇ ಕೇಂದ್ರ ಸರಕಾರ ಮುದ್ರಾ ಯೋಜನೆಯನ್ನು ಜಾರಿಗೆ ತಂದಿದ್ದು, ಬ್ಯಾಂಕುಗಳ ಮೂಲಕ ಸುಲಭವಾಗಿ ಸಾಲ ಸೌಲಭ್ಯವನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾಲವನ್ನು ಹೇಗೆ ಪಡೆಯಬಹುದು ಅನ್ನೋ ಮಾಹಿತಿ ಇಲ್ಲಿದೆ.

ಮುದ್ರಾ ಯೋಜನೆಯಲ್ಲಿ, 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿಗಳ ಸಾಲ ಪಡೆಯಲು ಅವಕಾಶವಿದೆ. ಮುದ್ರಾ ಯೋಜನೆಯಲ್ಲಿ ಒಟ್ಟಿ ಮೂರು ಬಗೆಯಲ್ಲಿ ಸಾಲ ಸಿಗುತ್ತದೆ. ಶಿಶು, ಕಿಶೋರ್ ಮತ್ತು ತರುಣ್ ಹೆಸರಿನಲ್ಲಿ ಸಾಲ ಪಡೆಯಬಹುದಾಗಿದೆ. ಶಿಶು ಸಾಲದಲ್ಲಿ 50,000 ರೂಪಾಯಿವರೆಗೆ, ಕಿಶೋರ್ ಸಾಲದಲ್ಲಿ 50 ಸಾವಿರದಿಂದ 5 ಲಕ್ಷ ರೂಪಾಯಿ ಮತ್ತು ತರುಣ್ ಸಾಲದಲ್ಲಿ 5 ರಿಂದ 10 ಲಕ್ಷ ರೂಪಾಯಿ ಸಾಲ ಸೌಲಭ್ಯ ಲಭ್ಯವಿದೆ.

ಮುದ್ರಾ ಯೋಜನೆಯಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಮುದ್ರಾ ಯೋಜನೆಗೆ ಅರ್ಹವಾಗಿರುವ ಮಹಿಳೆಯರು ತಮ್ಮ ಕಾರ್ಯ ಯೋಜನೆಯ ಜೊತೆಗೆ ಸರ್ಕಾರಿ ಮತ್ತು ಖಾಸಗಿ ಬ್ಯಾಂಕಿನ ಶಾಖೆಯಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

ಇದನ್ನೂ ಓದಿ: GOLD PRICE TODAY : 5 ತಿಂಗಳ ಬಳಿಕ ಭಾರೀ ಇಳಿಕೆ ಕಂಡ ಚಿನ್ನದ ದರ

ಉದ್ಯಮ ಆರಂಭಿಸುವ ವ್ಯಕ್ತಿಯ ವಯಸ್ಸು 18 ವರ್ಷಗಳಿಗಿಂತ ಹೆಚ್ಚಿರಬೇಕು. ಮಾರಾಟಗಾರರು, ವ್ಯಾಪಾರಿಗಳು, ಅಂಗಡಿಯವರು ಮತ್ತು ಇತರ ಕೆಲವು ಸಣ್ಣ ಉದ್ಯಮಿಗಳೂ ಕೂಡ ಈ ಸಾಲವನ್ನು ಪಡೆಯಬಹುದಾಗಿದೆ. ಕೇವಲ ಮಹಿಳೆಯರಿಗಷ್ಟೇ ಅಲ್ಲಾ ಸ್ವ ಉದ್ಯೋಗವನ್ನು ಮಾಡಲು ಮನಸ್ಸಿರುವ ಪುರುಷರು ಕೂಡ ಮುದ್ರಾ ಯೋಜನೆಯ ಮೂಲಕ ಸಾಲ ಪಡೆಯಬಹುದಾಗಿದೆ.

ರಾಷ್ಟ್ರೀಕೃತ ಎಲ್ಲಾ ಬ್ಯಾಂಕುಗಳಲ್ಲಿಯೂ ಈ ಸಾಲ ಸೌಲಭ್ಯವನ್ನು ಪಡೆಯಬಹುದಾಗಿದೆ. ಮಾತ್ರವಲ್ಲ ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಸಿಟಿ ಯೂನಿಯನ್ ಬ್ಯಾಂಕ್, ಡಿಸಿಬಿ ಬ್ಯಾಂಕ್, ಫೆಡರಲ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಕೋಟಕ್ ಮಹೀಂದ್ರ, ನೈನಿತಾಲ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಐಡಿಎಫ್‌ಸಿ ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು.

ಇದನ್ನೂ ಓದಿ: HDFC BANK : ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಗ್ರಾಹಕರಿಗೆ ಭರ್ಜರಿ ಗುಡ್‌ ನ್ಯೂಸ್

ಮುದ್ರಾ ಸಾಲದ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸರಕಾರ ಅಧಿಕೃತ ಸೈಟ್ www.mudra.org.in ಗೆ ಭೇಟಿ ನೀಡುವ ಮೂಲಕ, ಆನ್ಲೈನ್ ನಲ್ಲಿ ಮುದ್ರಾ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಮುದ್ರಾ ಸಾಲದ ಬಗ್ಗೆ https://merisarkarmeredwar.in/ ನಲ್ಲಿ ಮಾಹಿತಿ ಲಭ್ಯವಿದೆ.

( ವಿ.ಸೂ : ಮುದ್ರಾ ಸಾಲದ ಹೆಸರಲ್ಲಿ ವಂಚಿಸುವ ಜಾಲ ಸಕ್ರೀಯವಾಗಿದೆ. ಬ್ಯಾಂಕುಗಳು ಸುಲಭವಾಗಿ ಸಾಲವನ್ನು ನೀಡಲಿದೆ. ಹೀಗಾಗಿ ಯೋಜನೆಯ ಪ್ರಯೋಜನ ಪಡೆಯುವವರು ನೇರವಾಗಿ ಬ್ಯಾಂಕ್‌ ಶಾಖೆಗಳನ್ನೇ ಸಂಪರ್ಕಿಸುವುದು ಒಳಿತು )

(Loan for women to start a business for themselves)

Comments are closed.