Sunil Shetty: ಕೆಸಿಬಿ ಸೀಸನ್ 13: ಬಿಗ್ ಬಿ ಎದುರು ಹಾಟ್ ಸೀಟ್ ಏರಿದ ಕರಾವಳಿ ಮೂಲದ ನಟ

ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡಪತಿ ಕಾರ್ಯಕ್ರಮ ಹಲವು ವಿಶೇಷತೆಗಳಿಂದ ಗಮನ ಸೆಳೆಯುತ್ತಿದೆ. ಸೀಸನ್ 13 ಮತ್ತಷ್ಟು ವಿಶೇಷತೆಗಳೊಂದಿಗೆ ಆರಂಭಗೊಂಡಿದ್ದು, ಈ ವಾರದ ಶಾನ್ದಾರ್ ಶುಕ್ರವಾರದಲ್ಲಿ ಕರಾವಳಿ ಮೂಲಕದ ಕನ್ನಡಿಗ ಬಾಲಿವುಡ್ ನಟ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದಾರೆ.

ಹೌದು ಕೆಸಿಬಿ ಸೀಸನ್ 13 ರ ವಿಶೇಷವಾಗಿರುವ ಶಾನ್ದಾರ್ ಶುಕ್ರವಾರದಲ್ಲಿ ಕರಾವಳಿ ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಅತಿಥಿಯಾಗಿ ಪಾಲ್ಗೊಂಡಿದ್ದಾರೆ. ಫಿಟ್ ನೆಸ್ ಗುರು ಸುನೀಲ್ ಶೆಟ್ಟಿಗೆ  ಜಾಕಿಶ್ರಾಫ್ ಸಾಥ್ ನೀಡಿದ್ದಾರೆ.

ಈ ಇಬ್ಬರೂ ಸ್ಟಾರ್ ಗಳು ವಿಶೇಷ ಶುಕ್ರವಾರದ ಎಪಿಸೋಡ್ ಅತಿಥಿಗಳಾಗಿರುವ ಪ್ರೋಮೋ ಈಗಾಗಲೇ ತೆರೆ ಕಂಡಿದ್ದು, ಜನರನ್ನು ಸೆಳೆಯುತ್ತಿದೆ.  ಬಿಗ್ ಬೀ ಜೊತೆ ಫಿಟನೆಸ್ ಬಗ್ಗೆ ಮಾತನಾಡಿರುವ ಸುನೀಲ್ ಶೆಟ್ಟಿ, ವಾರದ 6 ದಿನಗಳ ಕಾಲ ಕಟ್ಟುನಿಟ್ಟಿನ ವರ್ಕೌಟ್ ಮಾಡುವ ಸಂಗತಿಯನ್ನು ಹೇಳಿಕೊಂಡಿದ್ದಾರೆ.

ಇಬ್ಬರೂ ಹಿರಿಯ ನಟರು ಬಿಗ್ ಬೀ ಎದುರು ವೇದಿಕೆಯಲ್ಲೇ ಯೋಗಾಸನ ಮಾಡಿತೋರಿಸುವ ಮೂಲಕಪ್ರೇಕ್ಷಕರ ಮನಗೆದ್ದಿದ್ದಾರೆ. ಈಗಲೂ ಯುವಕರು ನಾಚುವಂತ ಮೈಮಾಟ ಹೊಂದಿರೋ ನಟ ಸುನೀಲ್ ಶೆಟ್ಟಿ ಸ್ಯಾಂಡಲ್ ವುಡ್ ನ ಪೈಲ್ವಾನ್ ಮೂವಿಯಲ್ಲಿ ತಮ್ಮ ದೇಹಧಾರ್ಡ್ಯ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದಿದ್ದರು.

ಕೆಸಿಬಿ ಸೆಲೆಬ್ರೆಟಿಗಳ ಶೋದಲ್ಲಿ ಈಗಾಗಲೇ ಸೆಹ್ವಾಗ್, ನೀರಜ್ ಚೋಫ್ರಾ,ದೀಪಿಕಾ ಪಡುಕೋಣೆ ಸೇರಿದಂತೆ ಹಲವು ಪಾಲ್ಗೊಂಡು ಗಮನ ಸೆಳೆದಿದ್ದಾರೆ.

(Suniel Shetty And Jackie Shroff in Kaun Banega Crorepati seson 13)

Comments are closed.