Tharagupet Blast :ನಿಗೂಢ ಸ್ಪೋಟ : FSL, ಬಾಂಬ್‌ ಸ್ಕ್ವಾಡ್ ಭೇಟಿ

ಬೆಂಗಳೂರು : ಚಾಮರಾಜಪೇಟೆ ಸಮೀಪದ ನ್ಯೂ ತರಗುಪೇಟೆ ಬಳಿಯ ಪಂಚರ್‌ ಶಾಪ್‌ ಬಳಿಯಲ್ಲಿ ನಡೆದಿರುವ ನಿಗೂಢ ಸ್ಪೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಇದೀಗ ಸ್ಪೋಟದ ಸ್ಥಳಕ್ಕೆ ಎಫ್‌ಎಸ್‌ಎಲ್‌ ತಂಡ ಭೇಟಿಯನ್ನು ನೀಡಿದ್ದು, ಬಾಂಬ್‌ ನಿಷ್ಕ್ರೀಯ ದಳ ಹಾಗೂ ಶ್ವಾನದಳದಿಂದಲೂ ಪರಿಶೀಲನೆ ಮುಂದುವರಿದಿದೆ.

ಇಂದು ಬೆಳಗ್ಗೆ 11:40 ರ ಸುಮಾರಿಗೆ ಚಾಮರಾಜಪೇಟೆ ಸಮೀಪದ ನ್ಯೂ ತರಗುಪೇಟೆಯಲ್ಲಿ ನಿಗೂಢ ಸ್ಪೋಟ ಸಂಭವಿಸಿತ್ತು. ಸೊಫಟದಲ್ಲಿ ಪಂಕ್ಟರ್‌ ಅಂಗಡಿ ಮಾಲೀಕ ಅಶ್ಲಾಂ ಪಾಷಾ ಹಾಗೂ ಮನೋಹರ್‌ ಎಂಬವರು ಸಾವನ್ನಪ್ಪಿದ್ದು, ಮೂವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಗಾಯಗೊಂಡಿರುವ ಸ್ಥಿತಿ ಗಂಭೀರವಾಗಿದೆ. ಆರಂಭ‌ ದಲ್ಲಿ ಸಿಲಿಂಡರ್‌ ಸ್ಪೋಟ ಅಥವಾ ಪಂಚರ್‌ ಅಂಗಡಿಯಲ್ಲಿರುವ ಏರ್‌ ಕಂಪ್ರೆಸರ್‌ ಸ್ಪೋಟಗೊಂಡಿರಬಹುದು ಎಂದು ಶಂಕಿಸಲಾಗಿತ್ತು. ಆದ್ರೆ ಅವು ಬ್ಲಾಸ್ಟ್‌ ಆಗಿರಲಿಲ್ಲ. ಹೀಗಾಗಿ ಪಕ್ಕದಲ್ಲಿಯೇ ದೊಡ್ಡಮಟ್ಟದಲ್ಲಿ ಪಟಾಕಿಯನ್ನು ಸಂಗ್ರಹಿಸಿ ಇಡಲಾಗಿದ್ದು, ಪವರ್‌ ಪಾಟ್‌ ರೀತಿಯ ಪಟಾಕಿ ಸಿಡಿದಿರಬಹುದು ಎಂದು ಶಂಕಿಸಲಾಗುತ್ತಿದೆ. ಘಟನೆಯಿಂದಾಗಿ ಅಕ್ಕ ಪಕ್ಕದಲ್ಲಿರುವ ಮನೆ, ಅಂಗಡಿಗಳಿಗೆ ಹಾನಿಯುಂಟಾಗಿದೆ. ಜನರು ಘಟನೆಯಿಂದಾಗಿ ಬೆಚ್ಚಿಬಿದ್ದಿದ್ದಾರೆ.

ಸ್ಥಳಕ್ಕೆ ಎಫ್‌ಎಸ್‌ಎಲ್‌, ಬಾಂಬ್‌ ನಿಷ್ಕ್ರೀಯ ದಳ ದೌಡು

ಮೇಲ್ನೋಟಕ್ಕೆ ಪಟಾಕಿ ಸ್ಪೋಟದಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಆದರೆ ಪೊಲೀಸರು ಪಟಾಕಿ ಸ್ಪೋಟದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಬೇರೆ ಯಾವುದಾದರೂ ಸ್ಪೋಟಕ ಸಂಗ್ರಹಿಸಡಲಾಗಿದೆಯೇ ಅನ್ನೋ ಬಗ್ಗೆ ತನಿಖೆ ಮುಂದುವರಿದಿದೆ. ಸ್ಪೋಟದ ಹಿಂದಿನ ಕಾರಣವನ್ನು ತಿಳಿಯುವ ಸಲುವಾಗಿ ಇದೀಗ ಘಟನಾ ಸ್ಥಳಕ್ಕೆ ವಿದಿವಿಜ್ಞಾನ ಪ್ರಯೋಗಾಲಯದ ತಜ್ಞರು, ಬಾಂಬ್‌ ನಿಷ್ಕ್ರೀಯ ದಳದ ಅಧಿಕಾರಿಗಳು ಹಾಗೂ ಶ್ವಾನ ದಳ ಕೂಡ ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನಾ ಕಾರ್ಯ ನಡೆಯುತ್ತಿದೆ. ಸ್ಪೋಟ ಯಾವ ಕಾರಣಕ್ಕೆ ನಡೆದಿದೆ ಅನ್ನೋ ಬಗ್ಗೆಯೂ ತನಿಖೆ ಮುಂದುವರಿದಿದೆ.

ಮೃತರಿಗೆ 2 ಲಕ್ಷ ಪರಿಹಾರ : ಶಾಸಕ ಜಮೀರ್‌

ಬಾಂಬ್‌ ಸ್ಪೋಟದಲ್ಲಿ ಇಬ್ಬರು ಮೃತ ಪಟ್ಟಿದ್ದು ಮೂವರು ಗಂಬೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಓರ್ವರ ಸ್ಥಿತಿ ಗಂಭೀರವಾಗಿದೆ. ಮೃತರ ಕುಟುಂಬಕ್ಕೆ ಶಾಸಕ ಜಮೀರ್‌ ಅಹಮದ್‌ ಖಾನ್‌ ತಲಾ ಎರಡು ಲಕ್ಷ ರೂಪಾಯಿ ಪರಿಹಾರವನ್ನು ಘೋಷಣೆ ಮಾಡಿದ್ದಾರೆ. ಅಲ್ಲದೇ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿಯೂ ಭರವಸೆಯನ್ನು ನೀಡಿದ್ದಾರೆ. ಮೃತ ಮನೋಹರ್‌ ಮೃತದೇಹವನ್ನು ತಮಿಳುನಾಡಿಗೆ ಕೊಂಡೊಯ್ಯಲು ಅಂಬ್ಯುಲೆನ್ಸ್‌ ವ್ಯವಸ್ಥೆಯನ್ನೂ ಮಾಡಿರುವುದಾಗಿ ಶಾಸಕ ಜಮೀರ್‌ ಅಹಮದ್‌ ಖಾನ್‌ ತಿಳಿಸಿದ್ದಾರೆ.

ಪಟಾಕಿ ಅಂಗಡಿ ಮಾಲೀಕ ಬಾಬು ಅರೆಸ್ಟ್

ಪಟಾಕಿ ಸ್ಪೋಟದಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಪಟಾಕಿ ಅಂಗಡಿಯ ಮಾಲೀಕ ಗಣೇಶ್‌ ಬಾಬು ಎಂಬಾತನನ್ನು ವಿವಿ ಪುರಂ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಈತ ಪಟಾಕಿ ವ್ಯವಹಾರವನ್ನು ನಡೆಸುತ್ತಿದ್ದ ಎನ್ನಲಾಗುತ್ತಿದೆ. ಘಟನೆ ಪಟಾಕಿಯಿಂದಲೇ ನಡೆದಿದೆ ಅನ್ನೋ ಅನುಮಾನದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳ ಭೇಟಿ

ಇನ್ನು ಘಟನೆ ನಡೆದಿರುವ ಎನ್‌ಟಿ ಪೇಟೆಗೆ ಹಿರಿಯ ಪೊಲೀಸ್‌ ಆಧಿಕಾರಿಗಳು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್‌ ಆಯುಕ್ಯ ಸೌಮೆಂದು ಮುಖರ್ಜಿ ಅವರು ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Bangalore Blast : ನಿಗೂಢ ಸ್ಪೋಟಕ್ಕೆ 3 ಬಲಿ : ಪಟಾಕಿ ಅಂಗಡಿ ಮಾಲೀಕ ಬಾಬು ಅರೆಸ್ಟ್‌

ಇದನ್ನೂ ಓದಿ : ಕೌಟುಂಬಿಕ ಕಲಹಕ್ಕೆ 2 ಬಲಿ : ಪುಟ್ಟ ಕಂದಮ್ಮನನ್ನು ಕೊಂದ ಪಾಪಿ ತಂದೆ

( Bangalore : New Tharagupet Blast 2 Death at spot visit FSL, Bomb Squad )

Comments are closed.