SBI Recruitment 2022 : ಪದವೀಧರರಿಗೆ ಸ್ಟೇಟ್ ಬ್ಯಾಂಕ್ ನಲ್ಲಿ 1673 ಹುದ್ದೆಗಳಿಗೆ ಅರ್ಜಿ ಅಹ್ವಾನ

( SBI Recruitment 2022 )ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (SBI) ನಲ್ಲಿ ಖಾಲಿ ಇರುವ 1673 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತಿಯುಳ್ಳ ಅಭ್ಯರ್ಥಿಗಳು ಈ ಕೂಡಲೆ ಎಸ್‌ ಬಿ ಐ ನ ಅಧಿಕೃತ ವೆಬ್‌ ಸೈಟ್‌ ನಲ್ಲಿ ಆನ್ ಲೈನ್‌ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ( SBI Recruitment 2022 ) ಸುವರ್ಣಾವಕಾಶ ಕಲ್ಪಿಸಿದೆ.ಈ ಹುದ್ದೆಗೆ ಕುರಿತಾದ ವಿವರ ಈ ಕೆಳಗಿನಂತಿವೆ.

ಬ್ಯಾಂಕ್‌ ನ ಹೆಸರು: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ
ಖಾಲಿ ಇರುವ ಹುದ್ದೆಗಳು : 1673
ಕೆಲಸ ಮಾಡುವ ಸ್ಥಳ : ಭಾರತದ ಎಲ್ಲೆಡೆ
ಕೆಲಸದ ಹೆಸರು : ಪ್ರೊಬಾಷನರಿ ಆಫಿಸರ್‌ (PO)
ವೇತನ : ತಿಂಗಳಿಗೆ 36000 – 63840 ರೂ.

ಹುದ್ದೆಗಳ ವಿವರ ;
ನಿಯಮಿತ ಖಾಲಿ ಹುದ್ದೆ : 1600 ಹುದ್ದೆ
ಬ್ಯಾಕ್‌ ಲಾಗ್‌ ಖಾಲಿ ಹುದ್ದೆ : 73 ಹುದ್ದೆ

ವಿದ್ಯಾರ್ಹತೆ : ಯಾವುದೇ ಬೋರ್ಡ್‌ ಅಥವಾ ವಿಶ್ವವಿದ್ಯಾಲದಿಂದ ಮಾನ್ಯತೆ ಹೊಂದಿರುವ ಡಿಗ್ರಿ ಮುಗಿದಿರುವ ಅಭ್ಯರ್ಥಿಗಳು ಅರ್ಜಿಯನ್ನು ನೀಡಬಹುದಾಗಿದೆ.

ವಯಸ್ಸಿನ ಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 21 ರಿಂದ 30 ವರ್ಷ ವಯಸ್ಸಾಗಿರಬೇಕು .

ಇದನ್ನೂ ಓದಿ : FSSAI Recruitments : FSSAI ನಲ್ಲಿ ಉದ್ಯೋಗ ಅವಕಾಶ : ಪಿಯುಸಿ, ಪದವಿ, ಸ್ನಾತಕೋತ್ತರ ಪದವೀಧರರಿಗೆ ಅವಕಾಶ

ಇದನ್ನೂ ಓದಿ : Panchayat Recruitment 2022 : ಜಿಲ್ಲಾ ಪಂಚಾಯತ್‌ನಲ್ಲಿ ಖಾಲಿ ಹುದ್ದೆ : ಅರ್ಜಿ ಆಹ್ವಾನ

ಅರ್ಜಿ ಶುಲ್ಕ :
SC/ST/PwBD :ಯಾವುದೇ ಶುಲ್ಕವಿಲ್ಲ
EWS/ OBC /ಜೆನರಲ್‌ : 750 ರೂ.

ಶುಲ್ಕ ಪಾವತಿಯ ವಿಧಾನ : ಆನ್‌ ಲೈನ್‌

ಆಯ್ಕೆ ಪ್ರಕ್ರೀಯೆ :
ಪೂರ್ವಭಾವಿ ಪರೀಕ್ಷೆ , ಮೈನ್‌ ಪರೀಕ್ಷೆ, ಸೈಕೊಮೆಟ್ರಿಕ್‌ ಟೆಸ್ಟ್‌ ಮತ್ತು ಸಂದರ್ಶನ (interview).

ಇದನ್ನೂ ಓದಿ : Job Recruitment : ONGC 2022 ನೇಮಕಾತಿ ಆರಂಭ ; 871 ಹುದ್ದೆಗಳಿಗೆ ಅರ್ಜಿ ಆಹ್ವಾನ

ಅರ್ಜಿ ಸಲ್ಲಿಸುವುದು ಹೇಗೆ ?

ಮೊದಲು ಎಸ್‌ ಬಿ ಐ ನ ಅಧಿಕೃತ ವೆಬ್ ಸೈಟ್‌ ನ ಮೂಲಕ ಅರ್ಜಿ ಸಲ್ಲಿಸಲು ಕೊಟ್ಟಿರುವ ಲಿಂಕ್‌ ಕ್ಲಿಕ್‌ ಮಾಡಿ . ನಂತರ ಅಗತ್ಯವಿರುವ ಮಾಹಿತಿಗಳನ್ನು ತುಂಬಿಸಿ . ಮಾಹಿತಿಗಳನ್ನು ತುಂಬಿಸುವ ಮೊದಲು ನಿಮ್ಮ ಮೊಬೈಲ್‌ ಸಂಖ್ಯೆ ಮತು ಇಮೇಲ್‌ ಸರಿಯಾಗಿದೆಯಾ ಎಂದು ಕಾತರಿಪಡಿಸಿಕೊಳ್ಳಿ . ನಂತರ ಅದಕ್ಕೆ ಬೇಕಾದ ಅಗತ್ಯ ದಾಖಲೆಗಳನ್ನು ಲಗತ್ತಿಸಿ. ಅಗತ್ಯ ಮಾಹಿತಿಗಳನ್ನು ಲಗತ್ತಿಸಿದ ನಂತರ ಅಗತ್ಯವಿರುವ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಅಪ್ಲೋಡ್‌ ಮಾಡಿ. ಆದ ನಂತರ ಅರ್ಜಿ ಶುಲ್ಕವನ್ನು ನೀಡಿ. ಎಲ್ಲಾ ದಾಖಲೆಗಳನ್ನು ನೀಡಿದ ಮೇಲೆ ಕೊನೆಯಲ್ಲಿ ಸಬ್ಮಿಟ್‌ ಬಟನ್‌ ಅನ್ನು ಕ್ಲಿಕ್‌ ಮಾಡಿ .
ಮುಖ್ಯವಾಗಿ ಅದರಲ್ಲಿ ತೋರಿಸಿರುವ ಅರ್ಜಿಯ ನಂಬರ್‌ ಅನ್ನು ಹಿಡಿದಿಟ್ಟುಕೊಳ್ಳಿ.

ಇದನ್ನೂ ಓದಿ : Zomato Recruitment : ಮನೆಯಲ್ಲಿ ಕುಳಿತೇ ಸಂಪಾದಿಸಿ 2.94 ಲಕ್ಷ

ಅರ್ಜಿ ಸಲ್ಲಿಸಲು ಪ್ರಾರಂಭದ ದಿನ : 22/09/2022
ಅರ್ಜಿ ಸಲ್ಲಿಸಲು ಕೊನೆಯ ದಿನ : 12 /10 / 2022
ಪ್ರಾಥಮಿಕ ಹಂತದ ಪರೀಕ್ಷೆ ಪತ್ರಿಕೆ ಲೆಟರ್‌ ಅನ್ನು ಪಡೆಯುವ ದಿನ : ಡಿಸೆಂಬರ್‌ ಮೊದಲ ಮತ್ತು ಎರಡನೆ ವಾರ 2022
ಪ್ರಥಮ ಹಂತದ ಪರೀಕ್ಷೆ ನಡೆಯುವ ದಿನಾಂಕ : 17th/18th/ 19th/ 20th ಡಿಸೆಂಬರ್‌ 2022
ಪಲಿತಾಂಶ ಪ್ರಕಟ : ಡಿಸೆಂಬರ್ 2022 -ಜನವರಿ 2023
ಮೈನ್‌ ಪರೀಕ್ಷೆಯ ಲೆಟರ್‌ ಪಡೆದುಕೊಳ್ಳುವ ದಿನಾಂಕ : ಜನವರಿ 2023-ಫೆಬ್ರವರಿ 2023
ಪಲಿತಾಂಶ ಪ್ರಕಟ : ಫೆಬ್ರವರಿ 2023
ಮೂರನೆ ಹಂತದ ಸೈಕೋಮೆಟ್ರಿಕ್‌ ಪರೀಕ್ಷೆಯ ಪತ್ರ ಪಡೆಯುವ ದಿನ : ಫೆಬ್ರವರಿ 2023 ರ ನಂತರ
ಸೈಕೊಮೆಟ್ರಿಕ್‌ ಪರೀಕ್ಷೆ ನಡೆಯುವ ದಿನಾಂಕ : ಫೆಬ್ರವರಿ/ ಮಾರ್ಚ್‌ 2023
ಕೊನೆಯ ಹಂತದ ಪಲಿತಾಂಶ ಪ್ರಕಟ : ಮಾರ್ಚ್‌ 2023 ರ ನಂತರ

ಪ್ರಾಥಮಿಕ ಹಂತದ ಪರೀಕ್ಷಾ ತರಬೇತಿಯ ವಿವರ :
ಪ್ರಾಥಮಿಕ ಹಂತದ ಪರೀಕ್ಷಾ ತರಬೇತಿಗೆ ಪ್ರವೇಶ ಪತ್ರ ಪಡೆಯುವ ದಿನಾಂಕ : ಮೊದಲ ಮತ್ತು ಎರಡನೆ ವಾರ ನವಂಬರ್‌ 2022
ಪ್ರಾಥಮಿಕ ಹಂತದ ಪರೀಕ್ಷಾ ತರಬೇತಿ ನಡೆಯುವ ದಿನಾಂಕ : ನವಂಬರ್‌ 2022/ ಡಿಸೆಂಬರ್‌ 2022

ಎಸ್‌ ಬಿ ಐ ನ ಅಧೀಕೃತ ವೆಬ್ಸೈಟ್‌ : sbi.co.in

Applications invited for 1673 posts in State Bank for Graduates

Comments are closed.