Irfan Pathan : ಗಂಡು ಮಗುವಿಗೆ ತಂದೆಯಾದ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​​

Irfan Pathan :ಟೀಂ ಇಂಡಿಯಾ ಮಾಜಿ ಆಟಗಾರ ಇರ್ಫಾನ್​ ಪಠಾಣ್​​ ದಂಪತಿ ಇಂದು ತಮ್ಮ ಎರಡನೇ ಮಗುವನ್ನು ಬರಮಾಡಿಕೊಂಡಿದ್ದಾರೆ. ಇರ್ಫಾನ್​ ಖಾನ್​ ಹಾಗೂ ಸಫಾ ದಂಪತಿಗೆ ಗಂಡು ಮಗು ಜನಿಸಿದ್ದು ಈ ಶುಭ ಸುದ್ದಿಯನ್ನು ಇನ್​ಸ್ಟಾಗ್ರಾಂನಲ್ಲಿ ಪಠಾಣ್​ ಹಂಚಿಕೊಂಡಿದ್ದಾರೆ.


ಇರ್ಫಾನ್​ ಪಠಾಣ್​ ಹಾಗೂ ಸಫಾ ಬೈಗ್​ ದಂಪತಿಗೆ ಈಗಾಗಲೇ ಓರ್ವ ಗಂಡು ಪುತ್ರನಿದ್ದಾನೆ. ಪುತ್ರ ಇಮ್ರಾನ್​ ಖಾನ್​ ಪಠಾಣ್​ 2016ರ ಡಿಸೆಂಬರ್​ 20ರಂದು ಜನಿಸಿದ್ದ.

ಈ ಶುಭ ಸುದ್ದಿಯನ್ನು ಇರ್ಫಾನ್​ ಖಾನ್​ ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು ಆಸ್ಪತ್ರೆಯಲ್ಲಿ ತಾಯಿ ಹಾಗೂ ಮಗು ಇಬ್ಬರೂ ಆರಾಮಾಗಿ ಇದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ಶೇರ್​ ಮಾಡಿರುವ ಮಾಜಿ ಕ್ರಿಕೆಟಿಗ ಇರ್ಫಾನ್​ ಪಠಾಣ್​​​ ಸಫಾ ಹಾಗೂ ನಾನು ಗಂಡು ಮಗುವನ್ನು ಬರಮಾಡಿಕೊಂಡಿದ್ದೇವೆ. ತಾಯಿ ಮಗು ಇಬ್ಬರೂ ಆರಾಮಾಗಿ ಇದ್ದಾರೆ ಎಂದು ಶೀರ್ಷಿಕೆ ನೀಡಿದ್ದಾರೆ.


ರಾಯ್ಪುರದಲ್ಲಿ ಸಚಿನ್​ ತೆಂಡಲ್ಕೂರ್​ ನಾಯಕತ್ವದಲ್ಲಿ ಕಳೆದ ವರ್ಷ ನಡೆದಿದ್ದ ರೋಡ್​ ಸೇಫ್ಟಿ ವರ್ಲ್ಡ್​ ಸರಣಿಯಲ್ಲಿ ಆಟವಾಡಿದ್ದರು. ಇರ್ಫಾನ್​ ಖಾನ್​​ ಕಳೆದ ವರ್ಷ ಕ್ರಿಕೆಟ್​ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ.


ಇರ್ಫಾನ್​ ಖಾನ್​ ಈವರೆಗೆ 29 ಟೆಸ್ಟ್​, 120 ಏಕದಿನ ಪಂದ್ಯ ಹಾಗೂ 24 ಟಿ 20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಟೆಸ್ಟ್​ ಪಂದ್ಯದಲ್ಲಿ 100 ವಿಕೆಟ್​ಗಳನ್ನು ಕಬಳಿಸಿರುವ ಇರ್ಫಾನ್​ ಪಠಾಣ್​​ ಏಕದಿನ ಪಂದ್ಯಗಳಲ್ಲಿ 173 ವಿಕೆಟ್​ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ 20 ಪಂದ್ಯಾವಳಿಗಳಲ್ಲಿ 28 ವಿಕೆಟ್​ಗಳನ್ನು ಸಂಪಾದಿಸಿದ್ದಾರೆ.


ಇರ್ಫಾನ್​ ಖಾನ್​​ 2016ರ ಫೆಬ್ರವರಿ 4ರಂದು ಮೆಕ್ಕಾದಲ್ಲಿ ಹೈದರಾಬಾದ್​ ಮೂಲದ ಮಾಡೆಲ್​ ಸಫಾ ಬೈಗ್​​ರನ್ನು ವರಿಸಿದ್ದರು. ಪಠಾಣ್​​ ದಂಪತಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಇದೀಗ ಇವರ ಕುಟುಂಬಕ್ಕೆ ಮತ್ತೊಬ್ಬ ಸದಸ್ಯನ ಸೇರ್ಪಡೆಯಾಗಿದ್ದು ಎರಡನೆಯ ಪುತ್ರನಿಗೆ ಸುಲೈಮಾನ್​ ಖಾನ್​ ಎಂದು ಹೆಸರಿಟ್ಟಿದ್ದಾರೆ.


ಇರ್ಫಾನ್​ ಪಠಾಣ್​ 2003ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ವೇಳೆಯಲ್ಲಿ ಇವರನ್ನು ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್​ ದೇವ್​ರ ಮತ್ತೊಂದು ರೂಪವೆಂದೇ ಬಣ್ಣಿಸಲಾಗಿತ್ತು. ಆದರೆ ನಿರಂತರ ಗಾಯ ಹಾಗೂ ಫಾರ್ಮ್​ ನಿಂದಾಗಿ ವೃತ್ತಿ ಜೀವನದ ಅತ್ಯಂತ ಶೀಘ್ರವಾಗಿ ವಿಫಲಗೊಂಡಿತ್ತು. 2012ರಲ್ಲಿ ಇರ್ಫಾನ್​ ಪಠಾಣ್​​ ಟೀಂ ಇಂಡಿಯಾ ಪರವಾಗಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು.


ಒಂದು ಕಾಲದಲ್ಲಿ ವಿಶ್ವದ ಅತ್ಯುತ್ತಮ ಆಲ್​ರೌಂಡ್​​ ಪ್ರತಿಭೆಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದ ಪಠಾಣ್ ಬೌಲಿಂಗ್​ ವಿಭಾಗದಲ್ಲಿ ಪರಾಕ್ರಮರಾಗಿದ್ದರೂ ಸಹ​​ ಕೋಚ್​ ಗ್ರೇಗ್​ ಚಾಪೆಲ್​ ಅವರ ಮಾರ್ಗದರ್ಶನದಲ್ಲಿ ಏಕದಿನ ಪಂದ್ಯಗಳಲ್ಲಿ ನಿಯಮಿತವಾಗಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ್ದಾರೆ. ಟೆಸ್ಟ್​ ಕ್ರಿಕೆಟ್​ನಲ್ಲಿ 1105 ರನ್​ಗಳನ್ನು ಪೇರಿಸಿದ್ದಾರೆ. ಏಕದಿನ ಪಂದ್ಯಾವಳಿಗಳಲ್ಲಿ ಈ ಎಡಗೈ ಆಟಗಾರ 1544 ರನ್​ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ ಜೀವನದಲ್ಲಿ 172 ರನ್​ಗಳನ್ನು ಸಂಪಾದಿಸಿದ್ದಾರೆ

Former Indian cricketer Irfan Pathan blessed with baby boy

ಇದನ್ನು ಓದಿ : Pro Kabaddi 8 Day 4 Highlights: ಚೊಚ್ಚಲ ಗೆಲುವು ಸಾಧಿಸಿದ ಯುಪಿ ಯೋಧಾಸ್; ಪಾಟ್ನಾ ಪೈರೇಟ್ಸ್ ಸೋಲಿಗೆ ಕಾರಣಗಳು ಇಲ್ಲಿವೆ

ಇದನ್ನೂ ಓದಿ : Ahmedabad IPL 2022 : ಗ್ಯಾರಿ ಕ್ರಿಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ ಸೆಳೆಯಲು ಮುಂದಾದ ಅಹಮದಾಬಾದ್‌

Comments are closed.