KSRTC Bus Pass : ವಿಕಲಚೇತನರ ಬಸ್​ಪಾಸ್​​​ಗೆ ಅರ್ಜಿ ಆಹ್ವಾನಿಸಿದ ಕೆಎಸ್​ಆರ್​ಟಿಸಿ

KSRTC Bus Pass :ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ವಿಕಲಚೇತನರಿಗೆ 2022ನೇ ಸಾಲಿಗೆ ವಿಶೇಷ ರಿಯಾಯಿತಿ ದರದಲ್ಲಿ ಪಾಸ್​ನ್ನು ಹೊಂದಲು ಅರ್ಜಿ ಆಹ್ವಾನಿಸಿದೆ.ಜನವರಿ 1ನೇ ತಾರೀಖಿನಿಂದ 2022ರ ಡಿಸೆಂಬರ್​ 31ರವರೆಗೂ ವಿಕಲಚೇತನರಿಗೆ ಅನ್ವಯವಾಗುವಂತೆ ಈ ಬಸ್​ ಪಾಸ್​ ಇರಲಿದೆ ಎಂದು ಕರ್ನಾಟಕ ರಸ್ತೆ ಸಾರಿಗೆ ನಿಗಮವು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.


2021ನೇ ಸಾಲಿನಲ್ಲಿ ರಿಯಾಯಿತಿ ದರದಲ್ಲಿ ಬಸ್​ ಪಾಸ್​ ಪಡೆದ ವಿಕಲಚೇತನರಿಗೆ ಇನ್ನೊಂದು ಸಮಾಧಾನಕರ ಸುದ್ದಿಯನ್ನು ಕೆಎಸ್​ಆರ್​ಟಿಸಿ ನೀಡಿದೆ. ಅದೇನೆಂದರೆ ಡಿಸೆಂಬರ್​​ 31 -2021ರವರೆಗೆ ಮಾತ್ರ ಅನುಮತಿ ಇರುವ ಈಗಿನ ಪಾಸ್​ಗಳನ್ನು ಮುಂದಿನ ವರ್ಷದ ಫೆಬ್ರವರಿ 28ರವರೆಗೂ ಬಳಕೆ ಮಾಡಬಹುದು ಎಂದು ಕೆಎಸ್​ಆರ್​ಟಿಸಿ ಹೇಳಿದೆ.


ಹೊಸ ಬಸ್​ ಪಡೆಯಲು ಇಚ್ಛಿಸುವ ವಿಕಲಚೇತನರು ಸೇವಾಸಿಂಧು ಪೋರ್ಟಲ್​​ನ ಮುಖಾಂತರ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಸೂಕ್ತ ದಾಖಲೆಗಳ ಸಮೇತ ಅರ್ಜಿ ಸಲ್ಲಿಕೆ ಮಾಡಿದ ವಿಕಲಚೇತನರಿಗೆ 2022ರ ಜನವರಿ 17ರಿಂದ ಬಸ್​ ಪಾಸ್​ ವಿತರಣೆ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಕೆಎಸ್​ಆರ್​ಟಿಸಿ ಹೇಳಿದೆ. ಈ ಬಸ್​ ಪಾಸ್​ ಹೊಂದಲು ವಿಕಲಚೇತನರು 660 ರೂಪಾಯಿ ಶುಲ್ಕ ಪಾವತಿ ಮಾಡಬೇಕಿದೆ. ಇದನ್ನು ನಗದು ಇಲ್ಲವೇ ಡಿಡಿ ರೂಪದಲ್ಲಿ ಪಾವತಿ ಮಾಡಬಹುದಾಗಿದೆ.

ಈಗಾಗಲೇ ಪಾಸ್​ಗಳನ್ನು ಹೊಂದಿರುವ ವಿಕಲಚೇತನರು ಆ ಪಾಸ್​ಗಳನ್ನು ನವೀಕರಣ ಮಾಡಲು 2022ರ ಫೆಬ್ರವರಿ 28ರವರೆಗೆ ಅವಕಾಶ ನೀಡಲಾಗಿದೆ. ನೂತನ ಪಾಸ್​ ವಿತರಣೆ ಮಾಡಲು ನಿರ್ದಿಷ್ಟ ಕಾಲಮಿತಿ ಇರೋದಿಲ್ಲ.ವಿಕಲಚೇತನರು ತಮ್ಮ ಅರ್ಜಿಗಳನ್ನು ಆನ್​ಲೈನ್​​ನಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಜೆಪಿಜಿ ಅಥವಾ ಪಿಡಿಎಫ್​ ನಮೂನೆಯಲ್ಲಿ ಆನ್​ಲೈನ್​ನಲ್ಲಿ ಅಡಕಗೊಳಿಸಬೇಕು ಎಂದು ಕೆಎಸ್​ಆರ್​ಟಿಸಿ ಸೂಚನೆ ನೀಡಿದೆ.

ಇದನ್ನು ಓದಿ : Madhuban Mein Radhika song : ಸನ್ನಿ ಕಿಚ್ಚು ಹಚ್ಚೋ ಹಾಡಿಗೆ ಬ್ರೇಕ್: ವಿವಾದಾತ್ಮಕ ಹಾಡು ಹಿಂಪಡೆದ ಸರೆಗಮ

ಇದನ್ನೂ ಓದಿ :Outrage BJP Government : ಹೋಂ ಸ್ಟೇ, ರೆಸಾರ್ಟ್ ಗೆ ನಿರ್ಬಂಧ: ಬಿಜೆಪಿ ಕಾರ್ಯಕಾರಿಣಿಗೆ ಚಾಲನೆ: ಸರ್ಕಾರದ ವಿರುದ್ಧ ಜನರ ಆಕ್ರೋಶ

ಇದನ್ನೂ ಓದಿ : Mehndi Ceremony Lathi charge : ಮೆಹಂದಿ ಮನೆಗೆ ನುಗ್ಗಿ ಕೋಟ ಪೊಲೀಸರ ದೌರ್ಜನ್ಯ : ಮದುಮಗ, ಮಹಿಳೆಯರ ಮೇಲೆ ಲಾಠಿ ಪ್ರಹಾರ

KSRTC Bus Pass invites applications for bus passes for disabled people

Comments are closed.