ಭಾನುವಾರ, ಏಪ್ರಿಲ್ 27, 2025
Homebusinessಮಹಿಳೆಯರಿಗೆ ಬಡ್ಡಿಯಿಲ್ಲದೇ ಸಿಗುತ್ತೆ 2 ಲಕ್ಷ ರೂ ಸಾಲ : ಗೃಹಲಕ್ಷ್ಮೀ ಬೆನ್ನಲ್ಲೇ ಸರಕಾರದಿಂದ ಮತ್ತೊಂದ...

ಮಹಿಳೆಯರಿಗೆ ಬಡ್ಡಿಯಿಲ್ಲದೇ ಸಿಗುತ್ತೆ 2 ಲಕ್ಷ ರೂ ಸಾಲ : ಗೃಹಲಕ್ಷ್ಮೀ ಬೆನ್ನಲ್ಲೇ ಸರಕಾರದಿಂದ ಮತ್ತೊಂದ ಯೋಜನೆ

- Advertisement -

ಬೆಂಗಳೂರು : ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ರಾಜ್ಯದ ಗೃಹಿಣಿಯರಿಗೆ  ಅನುಕೂಲ ಕಲ್ಪಿಸಿದೆ. ರಾಜ್ಯ ಸರಕಾರ ಇದೀಗ ಎರಡು ಕಂತುಗಳನ್ನು ಮನೆಯ ಯಜಮಾನಿಯ ಖಾತೆಗೆ ಜಮೆ ಮಾಡಿದೆ. ಈ ನಡುವಲ್ಲೇ ಕರ್ನಾಟಕ ಸರಕಾರ (Karnataka Government) ಮತ್ತೊಂದು ಯೋಜನೆ ಜಾರಿ ಮಾಡಿದ್ದು, ಈ ಯೋಜನೆಯ ಮೂಲಕ ಮಹಿಳೆಯರಿಗೆ ಶೂನ್ಯ ಬಡ್ಡಿದರಲ್ಲಿ 2 ಲಕ್ಷ ರೂ ಸಾಲ (2 Lakh Loans for Womens) ದೊರೆಯಲಿದೆ.

ರಾಜ್ಯ ಸರಕಾರ ಈಗಾಗಲೇ ಗೃಹಲಕ್ಷ್ಮೀ, ಅನ್ನಭಾಗ್ಯ, ಶಕ್ತಿ ಯೋಜನೆ ಹಾಗೂ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದೆ. ಅಲ್ಲದೇ ಯುವನಿಧಿ ಯೋಜನೆಯನ್ನು ಜಾರಿಗೊಳಿಸುವ ಮೊದಲೇ ಮಹಿಳೆಯರಿಗಾಗಿ ಮತ್ತೊಂದು ಯೋಜನೆಯನ್ನು ಘೋಷಣೆ ಮಾಡಿದೆ.

Karnataka Government New Scheme Rs 2 Lakh Loan For Women With Zero Interest after Gruha Lakshmi Scheme
Image Credit to Original Source

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈ ಯೋಜನೆಯನ್ನು ಘೋಷಣೆ ಮಾಡಿದ್ದು, ಮಹಿಳೆಯರನ್ನು ಆರ್ಥಿಕ ಹಾಗು ಸಂಘಟನಾತ್ಮಕವಾಗಿ ಸದೃಢರಾಗಿಸಲಿ ಮಹಿಳಾ  ಸ್ತ್ರೀಶಕ್ತಿ ಸಂಘ (StreeShakthi Scheme )ಸದಸ್ಯರಿಗೆ 2 ಲಕ್ಷ ರೂಪಾಯಿ ಸಾಲ ನೀಡುತ್ತದೆ. ಆದರೆ ಈ ಸಾಲದ ಮೇಲೆ ಶೂನ್ಯ ಬಡ್ಡಿದರ ವಿಧಿಸಲಾಗುತ್ತದೆ ಎಂದಿದ್ದಾರೆ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯಡಿ ಸಿಗಲಿದೆ 4000 ರೂ.: ಗೃಹಿಣಿಯರಿಗೆ ದಸರಾ ಕೊಡುಗೆ ಘೋಷಿಸಿದ ರಾಜ್ಯ ಸರಕಾರ

ಮಹಿಳೆಯರು ಸ್ತ್ರಿಶಕ್ತಿ ಸಂಘಟನೆಗಳ ಮೂಲಕ ತಲಾ 2 ಲಕ್ಷ ರೂಪಾಯಿಯ ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ರಾಜ್ಯದಲ್ಲಿನ 25,000 ಮಹಿಳಾ ಸಬಲೀಕರಣ ಸಂಸ್ಥೆಗಳ ಮೂಲಕ 2 ಲಕ್ಷ ರೂಪಾಯಿ ಹಣ ಬಡ್ಡಿರಹಿತವಾಗಿ ಮಹಿಳೆಯರಿಗೆ ಸಿಗಲಿದೆ. ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮಹಿಳಾ ಸಬಲೀಕರಣಕ್ಕಾಗಿ 70,427 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ ಎಂದರು.

2000-01ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮಹಿಳೆಯರನ್ನು ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲೀಕರಣ ಮಾಡಲು ಸ್ತ್ರಿಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಸದ್ಯ ಕರ್ನಾಟಕ ರಾಜ್ಯದ 176 ತಾಲ್ಲೂಕುಗಳ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಸ್ತ್ರೀಶಕ್ತಿ ಗುಂಪುಗಳನ್ನು ರಚಿಸಲಾಗಿದೆ. ಈಗಾಗಲೇ ಸ್ತ್ರಿಶಕ್ತಿ ಸಂಘಗಳಿಗೆ ಸಾಲ ನೀಡಲಾಗುತ್ತಿದೆ.

ಇದನ್ನೂ ಓದಿ : ಗ್ಯಾರಂಟಿ ಯೋಜನೆಗಳ ಎಫೆಕ್ಟ್: ಪೌರ ಕಾರ್ಮಿಕರ 15 ಕೋಟಿ ಅನುದಾನ ಹಿಂಪಡೆದ ಸರ್ಕಾರ

ಇದೀಗ ಮಹಿಳೆಯರ ಸಂಘಟನೆಗಳನ್ನು ಇನ್ನಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಸರಕಾರ ದೊಡ್ಡಮಟ್ಟದ ಸಾಲವನ್ನು ಶೂನ್ಯ ಬಡ್ಡಿದರಲ್ಲಿ ನೀಡುತ್ತಿದೆ. ಈ ಸಾಲ ಯೋಜನೆಯ ಮೂಲಕ ಮಹಿಳೆಯರು ಆರ್ಥಿಕವಾಗಿ ಪ್ರಗತಿಯನ್ನು ಸಾಧಿಸಲಿದ್ದಾರೆ. ಅಲ್ಲದೇ ಸಾಮಾಜಿಕವಾಗಿಯೂ ಉತ್ತಮ ವಾತಾವರಣ ಸೃಷ್ಟಿಸುವುದು ಸರಕಾರದ ಗುರಿಯಾಗಿದೆ.

Karnataka Government New Scheme Rs 2 Lakh Loan For Women With Zero Interest after Gruha Lakshmi Scheme
Image Credit to Original Source

ಬಡ ಮಹಿಳೆಯರ ಆದಾಯವನ್ನು ವೃದ್ದಿ, ಆದಾಯವನ್ನು ತರುವ ಉತ್ಪಾದಕ ಚಟುವಟಿಕೆಗಳಲ್ಲಿ ಮಹಿಳೆಯರು ಹೆಚ್ಚಾಗಿ ತೊಡಗಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಮಹಿಳಾ ಗುಂಪಿನ ಸದಸ್ಯರಿಗೆ ವಿವಿಧ ಇಲಾಖೆಗಳ ಅಭಿವೃದ್ದಿ ಕಾರ್ಯಕ್ರಮಗ ಪ್ರಯೋಜನವನ್ನು ಸಿಗುವಂತೆ ಮಾಡಲಾಗುತ್ತಿದೆ.

ಇದನ್ನೂ ಓದಿ : ಮಂಗಳಮುಖಿಯರಿಗೆ ಗೃಹಲಕ್ಷ್ಮೀ ಯೋಜನೆ : ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

ಗೃಹಲಕ್ಷ್ಮೀ ಯೋಜನೆಯ ಮೂಲಕ ಈಗಾಗಲೇ ಕರ್ನಾಟಕ ರಾಜ್ಯದಲ್ಲಿನ ಪ್ರತೀ ಕುಟುಂಬದ ಯಜಮಾನಿ ಮಹಿಳೆ ಈಗಾಗಲೇ ಪ್ರತೀ ತಿಂಗಳು 2000 ರೂಪಾಯಿ ಹಣವನ್ನು ಬ್ಯಾಂಕ್‌ ಖಾತೆಗೆ (DBT) ವರ್ಗಾವಣೆ ಮಾಡಲಾಗುತ್ತಿದೆ. ಈಗಾಗಲೇ ಎರಡು ತಿಂಗಳ ಹಣವು ಜಮೆ ಆಗಿದೆ. ಇದೀಗ ಈ ಯೋಜನೆ ಮತ್ತಷ್ಟು ಮಹಿಳೆಯರಿಗೆ ಅನುಕೂಲಕರವಾಗಲಿದೆ.

Karnataka Government New Scheme Rs 2 Lakh Loan For Women With Zero Interest after Gruha Lakshmi Scheme

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular