ದಿನಭವಿಷ್ಯ 24 ಅಕ್ಟೋಬರ್‌ 2023 : ವಿಜಯದಶಮಿಯ ದಿನದಂದು ಈ ರಾಶಿಯವರಿಗೆ ಯಶಸ್ಸು

Horoscope Today : ಇಂದು ಅಕ್ಟೋಬರ್‌ 24 2023 ಮಂಗಳವಾರ. ವಿಜಯದಶಮಿಯ ದಿನವಾದ ಇಂದು ದ್ವಾದಶ ರಾಶಿಗಳ ಮೇಲೆ ಧನಿಷ್ಠ ನಕ್ಷತ್ರದ ಪ್ರಭಾವ ಇರುತ್ತದೆ. ಸೂರ್ಯ, ಮಂಗಳ ಹಾಗೂ ಬುಧ ಗ್ರಹಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗ ಉಂಟಾಗುತ್ತದೆ.

Horoscope Today : ಇಂದು ಅಕ್ಟೋಬರ್‌ 24 2023 ಮಂಗಳವಾರ. ವಿಜಯದಶಮಿಯ ದಿನವಾದ ಇಂದು ದ್ವಾದಶ ರಾಶಿಗಳ ಮೇಲೆ ಧನಿಷ್ಠ ನಕ್ಷತ್ರದ ಪ್ರಭಾವ ಇರುತ್ತದೆ. ಸೂರ್ಯ, ಮಂಗಳ ಹಾಗೂ ಬುಧ ಗ್ರಹಗಳ ಸಂಯೋಜನೆಯಿಂದ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಇದು ಹಲವು ರಾಶಿಯವರಿಗೆ ಶುಭ. ಮೇಷರಾಶಿಯಿಂದ ಮೀನರಾಶಿಯ ವರೆಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ.

ಮೇಷರಾಶಿ ದಿನಭವಿಷ್ಯ
ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ರಿ ತೋರುವಿರಿ, ಕೌಟುಂಬಿಕ ಸಮಸ್ಯೆಗಳಿಂದ ಮಾನಸಿಕ ನೆಮ್ಮದಿ. ಮನೆಯ ವಾತಾವರಣವು ನಕಾರಾತ್ಮಕವಾಗಿ ಇರುತ್ತದೆ. ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಕಷ್ಟು ಶ್ರಮಿಸಬೇಕಾಗುತ್ತದೆ.

ವೃಷಭರಾಶಿ ದಿನಭವಿಷ್ಯ
ಆರೋಗ್ಯದಲ್ಲಿ ಕೆಲವು ಏರಿಳಿತಗಳು ಕಂಡು ಬರಲಿದೆ. ಕುಟುಂಬ ಸದಸ್ಯರ ನಡವಳಿಕಯು ನಿಮಗೆ ಅನಿರೀಕ್ಷಿತವಾಗಿ ಇರಬಹುದು. ಒಡಹುಟ್ಟಿದವರ ಜೊತೆಗೆ ವಿವಾದ ವಿವಾದಗಳಿಂದ ದೂರವಿರಿ. ಆರ್ಥಿಕ ನಷ್ಟದ ಸಾಧ್ಯತೆಯಿದೆ. ಹಣಕಾಸಿನ ವಿಚಾರದಲ್ಲಿ ಜಗಳ ಸಂಭವ.

ಮಿಥುನರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ನೀವು ಯಶಸ್ವಿ ಆಗುತ್ತೀರಿ. ವ್ಯಾಪಾರದಲ್ಲಿ ಹೂಡಿಕೆ ಮಾಡಿ. ಶೀಘ್ರದಲ್ಲಿಯೇ ಲಾಭವನ್ನು ಪಡೆಯುತ್ತೀರಿ. ಮಹಿಳೆಯರು ನಿಮ್ಮ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಹೊಂದಾಣಿಕೆಯಿಂದ ಕಾರ್ಯಾನುಕೂಲ.

ಕರ್ಕಾಟಕರಾಶಿ ದಿನಭವಿಷ್ಯ
ಈ ರಾಶಿಯ ಜನರು ಇಂದು ಅಹಂಕಾರಿಗಳಾಗಲಿದ್ದಾರೆ. ವಿಷಯವನ್ನು ಅರ್ಥ ಮಾಡಿಕೊಂಡು ಇತರರ ಜೊತೆ ವ್ಯವಹಾರ ಮಾಡಿ. ನಕಾರಾತ್ಮಕ ನಡವಳಿಕೆ ಸ್ನೇಹಿತರು ಹಾಗೂ ಕುಟುಂಬಸ್ಥರಿಗೆ ಬೇಸರ ತರಿಸಲಿದೆ. ಅವಮಾನ ಎದುರಿಸುವ ಸಾಧ್ಯತೆಯಿದೆ.

Horoscope Today 24 October 2023 Zordic Sign
Image Credit to Original Source

ಸಿಂಹರಾಶಿ ದಿನಭವಿಷ್ಯ
ಹಣಕಾಸಿನ ವಿಚಾರದ ಕೆಲಸಗಳಲ್ಲಿ ಸಮತೋಲನ ಅತೀ ಅಗತ್ಯ. ಎಲ್ಲಾ ಕ್ಷೇತ್ರಗಳಲ್ಲಿ ನಿರೀಕ್ಷಿತವಾದ ಸಾಧನೆಯನ್ನು ಮಾಡುತ್ತೀರಿ. ಮಧ್ಯಾಹ್ನದ ವರೆಗೆ ಉದಾಸೀನದ ವಾತಾವರಣ ಕಂಡು ಬರಲಿದೆ. ಮಧ್ಯಾಹ್ನದ ನಂತರ ಹಠಾತ್‌ ಲಾಭದ ಸಾಧ್ಯತೆಯಿದೆ. ಕುಟುಂಬದ ಅಗತ್ಯತೆಯನ್ನು ಪೂರೈಸುವಿರಿ.

ಇದನ್ನೂ ಓದಿ : ಉಚಿತ ಬಸ್‌ ಪ್ರಯಾಣ, ಗೃಹಲಕ್ಷ್ಮೀ ಯೋಜನೆ ಪುರುಷರಿಗೂ ವಿಸ್ತರಣೆ !

ಕನ್ಯಾರಾಶಿ ದಿನಭವಿಷ್ಯ
ಅನೇಕಾ ಕಾರ್ಯಗಳಲ್ಲಿ ಸಹಾಯ ಬೇಕಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಅತೀ ಅಗತ್ಯ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವಿರೋಧಿಗಳ ಕಿರುಕುಳ ಎದುರಿಸಬೇಕಾಗುತ್ತದೆ. ಅವಿವಾಹಿತರಿಗೆ ಯೋಗ್ಯ ಸಂಬಂಧಗಳು ಕೂಡಿಬರಲಿದೆ. ಇದರಿಂದ ಮನಸಿಗೆ ಸಂತಸ.

ತುಲಾರಾಶಿ ದಿನಭವಿಷ್ಯ
ನಿಮ್ಮ ಸುತ್ತಮುತ್ತಲು ಉತ್ತಮ ವಾತಾವರಣ. ಸಾಮಾಜಿಕವಾಗಿ ಗೌರವ. ಸಂಗಾತಿಯೊಂದಿಗೆ ಸುಂದರ ಕ್ಷಣ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ವಿದ್ಯಾರ್ಥಿಗಳಿಗೆ ಉತ್ತಮ ಫಲ. ಸ್ನೇಹಿತರಿಂದ ಬೆಂಬಲ. ಬುದ್ದಿವಂತಿಕೆಯಿಂದ ಕೆಲಸ ಕಾರ್ಯಗಳನ್ನು ನಿರ್ವಹಿಸಿ.

ವೃಶ್ವಿಕರಾಶಿ ದಿನಭವಿಷ್ಯ
ಕುಟುಂಬದ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಿ. ಭಾವನಾತ್ಮಕ ವಿಚಾರಗಳನ್ನು ಹೇಳಿಕೊಳ್ಳಬೇಡಿ. ಐಷಾರಾಮಿ ವಸ್ತುಗಳ ಖರೀದಿಗೆ ಹಣವನ್ನು ವ್ಯಯಿಸುವಿರಿ. ಧೀರ್ಘಕಾಲದ ಸಮಸ್ಯೆಗೆ ಸಂಬಂಧಿಸಿದಂತೆ ಇಂದು ಪರಿಹಾರ ದೊರೆಯಲಿದೆ. ದೂರದ ಬಂಧುಗಳ ಭೇಟಿಯಿಂದ ಮನಸಿಗೆ ನೆಮ್ಮದಿ ದೊರೆಯಲಿದೆ.

ಇದನ್ನೂ ಓದಿ : ಆಧಾರ್‌ ಕಾರ್ಡ್‌ ಹೊಸ ಫೀಚರ್ಸ್‌ : ಮನೆಯಲ್ಲಿಯೇ ಕುಳಿತು ನಿಮ್ಮ ಆಧಾರ್‌ ಕಾರ್ಡ್‌ ಅನ್‌ಲಾಕ್‌ ಮಾಡಿ

ಧನಸ್ಸುರಾಶಿ ದಿನಭವಿಷ್ಯ
ಸಾಮಾಜಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಉತ್ತಮ. ಸ್ನೇಹಿತರಿಂದ ಸಂಪೂರ್ಣ ಬೆಂಬಲ ದೊರೆಯಲಿದೆ. ಸೋಮಾರಿತನವನ್ನು ದೂರ ಮಾಡಬೇಕು. ವಿದೇಶಿ ವಿದ್ಯಾಭ್ಯಾಸದಲ್ಲಿ ಅನುಕೂಲ. ಒಡಹುಟ್ಟಿದವರ ಸಮಸ್ಯೆಗೆ ಇಂದು ಪರಿಹಾರ ದೊರೆಯಲಿದೆ.

ಮಕರರಾಶಿ ದಿನಭವಿಷ್ಯ
ನಿಮ್ಮ ಸಂಪತ್ತು ವೃದ್ದಿಸಲಿದೆ. ಇಂದು ನಿಮ್ಮ ಪಾಲಿಗೆ ಸಂತೋಷದ ದಿನ. ಮನೆಯಲ್ಲಿ ಮಂಗಳಕರ ಕಾರ್ಯಗಳು ನೆರವೇರಲಿದೆ. ಪ್ರೀತಿ ಪಾತ್ರರ ಜೊತೆಗೆ ಜಾಗರೂಕರಾಗಿ ಇರಬೇಕು. ಅಂಗಡಿ, ಮನೆ ಖರೀದಿಗೆ ಹೆಚ್ಚಿನ ಆಸಕ್ತಿವಹಿಸಿ. ನಿಮ್ಮನ್ನು ಮೋಸಗೊಳಿಸಲು ಯತ್ನಗಳು ನಡೆಯುತ್ತಿವೆ.

ಕುಂಭರಾಶಿ ದಿನಭವಿಷ್ಯ
ಇಂದು ಸಾಕಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಿರಿ. ಸಹೋದ್ಯೋಗಿಗಳು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರೆ. ಉದ್ಯೋಗಿಗಳು ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳ ಜೊತೆಗೆ ಎಚ್ಚರಿಕೆಯಿಂದ ಇರಬೇಕು. ಹಳೆಯ ಸ್ನೇಹಿತರನ್ನು ಭೇಟಿಯಾಗುವಿರಿ.

ಇದನ್ನೂ ಓದಿ : ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಕಾರು ಲೋನ್‌ ಆಫರ್‌ ನೀಡುತ್ತಿವೆ ಈ ಬ್ಯಾಂಕ್‌ಗಳು

ಮೀನರಾಶಿ ದಿನಭವಿಷ್ಯ
ಹಳೆಯ ಸ್ನೇಹಿತರ ಭೇಟಿಯಿಂದ ಮನಸಿಗೆ ನೆಮ್ಮದಿ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಭರವಸೆ ಮೂಡಲಿದೆ. ಹೊಸ ಹೂಡಿಕೆಗಳಿಗೆ ಇಂದು ಸಕಾಲ. ದೂರದ ಬಂಧುಗಳ ಆಗಮನದಿಂದ ನಿಮಗೆ ಮನಸಿಗೆ ನೆಮ್ಮದಿ ದೊರೆಯಲಿದೆ. ಹೊಂದಾಣಿಕೆಯಿಂದ ಕಾರ್ಯಾನುಕೂಲವಾಗಲಿದೆ.

Horoscope Today 24 October 2023 Zordic Sign

Comments are closed.