ಗೃಹಲಕ್ಷ್ಮೀ 2ನೇ ಕಂತಿನ ಹಣ ಎಲ್ಲರಿಗೂ ಸಿಗಲ್ಲ‌ ! ಯಾವುದಕ್ಕೂ ಒಮ್ಮೆ ಸ್ಟೇಟಸ್‌ ಚೆಕ್‌ ಮಾಡಿ

ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) 2ನೇ ಕಂತಿನ ಹಣವು ಫಲಾನುಭವಿಗಳ ಖಾತೆಗೆ ಅಕ್ಟೋಬರ್‌ ಎರಡನೇ ವಾರದಲ್ಲಿ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಮಾಹಿತಿಯನ್ನು ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) ಲಾಭವನ್ನು ಕರ್ನಾಟಕದಲ್ಲಿ ಒಂದು ಕೋಟಿಗೂ ಅಧಿಕ ಮಹಿಳೆಯರು ಪಡೆದುಕೊಂಡಿದ್ದಾರೆ. ಮೊದಲ ಕಂತಿನ ಹಣ (Gruha Lakshmi first Instalment) ಪಡೆದವರು, ಇದೀಗ ಎರಡನೇ ಕಂತಿನ (2nd installment ) ಹಣಕ್ಕಾಗಿ ಕಾಯುತ್ತಿದ್ದಾರೆ. ಆದರೆ ಎರಡನೇ ಕಂತಿನ ಹಣ ಎಲ್ಲರಿಗೂ ಸಿಗೋದಿಲ್ವಂತೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ (Congress Government) ಅಧಿಕಾರಕ್ಕೆ ಬರುವ ಮುನ್ನವೇ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ಈ ಪೈಕಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಗೃಹಜ್ಯೋತಿ ಯೋಜನೆ (Gruha Lakshmi Scheme), ಶಕ್ತಿ ಯೋಜನೆ (Free Bus) ಈಗಾಗಲೇ ಚಾಲ್ತಿಯಲ್ಲಿದೆ. ಗೃಹಲಕ್ಷ್ಮೀ  ಯೋಜನೆಯ ಮೂಲಕ ಮನೆಯ ಗೃಹಿಣಿಗೆ ಪ್ರತೀ ತಿಂಗಳು 2000 ರೂಪಾಯಿ ನೀಡಲಾಗುತ್ತಿದೆ.

Gruha Lakshmi Scheme Karnataka Government New Rules Updates Still If Not Get Money
Image Credit to Original Source

ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಒಂದು ಕೋಟಿಗೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿದ್ದರು. ಆದ್ರೆ ಶೇ.70ರಷ್ಟು ಮಹಿಳೆಯರು ಮಾತ್ರವೆ ಸದ್ಯ ಈ ಯೋಜನೆಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಇನ್ನೂ ಶೇ.30 ರಷ್ಟು ಮಹಿಳೆಯರು ಅರ್ಜಿ ಸಲ್ಲಿಸಿದ್ದರೂ ಕೂಡ ಗೃಹಜ್ಯೋತಿ ಯೋಜನೆಯ ಹಣ ಬ್ಯಾಂಕ್‌ ಖಾತೆಗೆ (DBT) ಜಮೆ ಆಗಿಲ್ಲ.

ಇದನ್ನೂ ಓದಿ : ಗೃಹಲಕ್ಷ್ಮೀ ಯೋಜನೆಯ ಹಣ ಇನ್ನೂ ಸಿಕ್ಕಿಲ್ವಾ ? ಹಾಗಾದ್ರೆ ಗುಡ್‌ನ್ಯೂಸ್‌, ಸರಕಾರದಿಂದ ಹೊಸ ರೂಲ್ಸ್‌

ಗೃಹಲಕ್ಷ್ಮೀ ಯೋಜನೆಯ (Gruha Lakshmi Scheme) 2ನೇ ಕಂತಿನ ಹಣವು ಫಲಾನುಭವಿಗಳ ಖಾತೆಗೆ ಅಕ್ಟೋಬರ್‌ ಎರಡನೇ ವಾರದಲ್ಲಿ ಜಮೆ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ (Lakshmi Hebbalkar) ಮಾಹಿತಿಯನ್ನು ನೀಡಿದ್ದಾರೆ. ಆದರೆ ಮೊದಲ ಕಂತಿನ ಹಣ ಸಿಗದೇ ಇರುವ ಹಲವರಿಗೆ ಎರಡನೇ ಕಂತಿನ ಹಣ ದೊರೆಯಲಿದೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿರುವ ಗೃಹಿಣಿಯರು ಯಾವುದಕ್ಕೂ ಒಮ್ಮೆ ತಮ್ಮ ಅರ್ಜಿಯ ಸ್ಟೇಟಸ್‌ ಚೆಕ್‌ ಮಾಡುವುದು ಒಳಿತು. ಒಂದೊಮ್ಮೆ ಸ್ಟೇಟಸ್‌ ಚೆಕ್‌ (Gurha Lakshmi Scheme Status Check) ಮಾಡುವಾಗ ಆಧಾರ್‌ ಲಿಂಕ್‌ (Aadhar Card Link) ಆಗಿಲ್ಲ ಅನ್ನೋ ಮಾಹಿತಿ ಲಭ್ಯವಾದ್ರೆ ನಿಮಗೆ ಗೃಹಲಕ್ಷ್ಮೀ ಯೋಜನೆಯ ಹಣ ನಿಮ್ಮ ಬ್ಯಾಂಕ್‌ ಖಾತೆಗೆ ಜಮೆ ಆಗುವುದಿಲ್ಲ.

Gruha Lakshmi Scheme Karnataka Government New Rules Updates Still If Not Get Money
Image Credit to Original Source

ಇದನ್ನೂ ಓದಿ : ದೀಪಾವಳಿಗೆ ಭರ್ಜರಿ ಗಿಫ್ಟ್‌ : ಪ್ರತೀ ಕುಟುಂಬಕ್ಕೂ ತಲಾ 2000ರೂ. ಘೋಷಣೆ

ರೇಷನ್‌ ಕಾರ್ಡ್‌ ತಿದ್ದುಪಡಿಗೆ (Ration Card Updates) ಇದೀಗ ಸರಕಾರವೇ ಮತ್ತೆ ಕಾಲಾವಕಾಶವನ್ನು ನೀಡಿದೆ. ಸದ್ಯ ಇಂದಿನಿಂದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ನಂತರ ಹಂತ ಹಂತವಾಗಿ ಇತರ ಜಿಲ್ಲೆಗಳಿಗೂ ಕೂಡ ಅವಕಾಶವನ್ನು ನೀಡಲಾಗಿದೆ.

ಪ್ರತೀ ಜಿಲ್ಲೆಗಳಲ್ಲಿಯೂ ಬಿಪಿಎಲ್‌ (BPL Card), ಎಪಿಎಲ್‌ (APL Card) ಹಾಗೂ ಅಂತ್ಯೋದಯ ಕಾರ್ಡುದಾರರ (Anthyodhya Card) ಹೆಸರು, ವಿಳಾಸ ತಿದ್ದುಪಡಿ, ಹೊಸ ಹೆಸರು ಸೇರ್ಪಡೆಗೆ ಕೂಡ ಅವಕಾಶವನ್ನು ಕಲ್ಪಿಸಲಾಗಿದೆ. ಪ್ರತೀ ಜಿಲ್ಲೆಗಳಲ್ಲಿ ಪಡಿತರ ತಿದ್ದುಪಡಿಗೆ ತಲಾ ಮೂರು ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಇದನ್ನೂ ಓದಿ : ಬಿಪಿಎಲ್ ಪಡಿತರ ಕಾರ್ಡುದಾರರಿಗೆ ಗುಡ್‌ನ್ಯೂಸ್‌ : ತಿದ್ದುಪಡಿಗೆ ಸರಕಾರದಿಂದ ಹೊಸ ರೂಲ್ಸ್‌ ಜಾರಿ

ಇನ್ನು ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದುವರೆಗೂ ಗೃಹಲಕ್ಷ್ಮೀ ಯೋಜನೆಗೆ ಅರ್ಜಿಯನ್ನು ಸಲ್ಲಿಸದೇ ಇರುವವರು ತಮ್ಮ ದಾಖಲೆಗಳಲ್ಲಿನ ದೋಷಗಳನ್ನು ಸರಿಪಡಿಸಿಕೊಂಡು ಅರ್ಜಿ ಸಲ್ಲಿಸುವುದು ಒಳಿತು. ಜೊತೆಗೆ ಈಗಾಗಲೇ ಅರ್ಜಿ ಸಲ್ಲಿಸಿದವರು ತಮ್ಮ ಅರ್ಜಿಯ ಸ್ಟೇಟಸ್‌ (Application Status) ತಿಳಿದುಕೊಳ್ಳುವುದು ಉತ್ತಮ.

ಗೃಹಲಕ್ಷ್ಮೀ ಯೋಜನೆಯನ್ನು ರಾಜ್ಯದ ಪ್ರತೀ ಕುಟುಂಬದ ಯಜಮಾನಿಗೆ ತಲುಪಿಸುವುದು ರಾಜ್ಯ ಸರಕಾರದ ಉದ್ದೇಶವಾಗಿದೆ. ಎಪಿಎಲ್‌, ಬಿಪಿಎಲ್‌ ಹಾಗೂ ಅಂತ್ಯೋದಯ ಕಾರ್ಡುದಾರರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಆದರೆ ಸರಕಾರ ನೀಡಿರುವ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡ ಹಣ ಜಮೆ ಆಗುತ್ತೆ ಅಂತಾ ಹೇಳೋದಕ್ಕೆ ಸಾಧ್ಯವಿಲ್ಲ. ಯಾಕೆಂದ್ರೆ ಅರ್ಜಿದಾರರು ಆದಾಯ ತೆರಿಗೆ ಪಾವತಿದಾರರಾಗಿದ್ದರೆ, ಅರ್ಜಿದಾರರ ಪತಿ ಆದಾಯ ತೆರಿಗೆ (Income Tax Payers) ಅಥವಾ ಜಿಎಸ್‌ಟಿ (GST) ಪಾವತಿದಾರರು ಆಗಿದ್ದರೆ ಅಂತವರಿಗೆ ಈ ಯೋಜನೆಯ ಲಾಭ ದೊರೆಯುವುದಿಲ್ಲ.

ಇನ್ನು ಬಹುತೇಕ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಹಣವನ್ನು ಪಡೆಯುವ ಸಲುವಾಗಿ ಅತ್ತೆ ಹಾಗೂ ಸೊಸೆ ಪ್ರತ್ಯೇಕವಾಗಿ ಕಾರ್ಡುಗಳನ್ನು ಮಾಡಿಸಿಕೊಂಡಿದ್ದಾರೆ. ಜೊತೆಗೆ ಕೆಲವರು ಪಡಿತರ ಚೀಟಿಯಲ್ಲಿ ಸುಳ್ಳು ಮಾಹಿತಿಯನ್ನು ನೀಡಿದ್ದಾರೆ. ಅಂತಹ ಕಾರ್ಡುದಾರರಿಗೆ ಗೃಹಲಕ್ಷ್ಮೀ ಯೋಜನೆಯ ಹಣ ಸಿಗುವುದಿಲ್ಲ ಎಂದು ಸರಕಾರ ಈಗಾಗಲೇ ಹೇಳಿದೆ.

ಗೃಹಲಕ್ಷ್ಮೀ ಯೋಜನೆ ಪ್ರತಿಯೊಬ್ಬರಿಗೂ ತಲುಪಬೇಕು ಅನ್ನೋ ಕಾರಣಕ್ಕೆ ಪಡಿತರ ಚೀಟಿ ತಿದ್ದುಪಡಿಗೆ ರಾಜ್ಯ ಸರಕಾರ ಈ ಹಿಂದೆ ಅವಕಾಶ ಕಲ್ಪಿಸಿದೆ. ಈ ವೇಳೆಯಲ್ಲಿ ಮೂರು ಲಕ್ಷಕ್ಕೂ ಅಧಿಕ ಕುಟುಂಬಗಳು ತಿದ್ದುಪಡಿ ಮಾಡಿಸಿಕೊಂಡಿವೆ, ಆದರೆ ಈ ಪೈಕಿ ಒಂದು ಲಕ್ಷಕ್ಕೂ ಅಧಿಕ ಕುಟುಂಬಗಳ ತಿದ್ದುಪಡಿ ಅರ್ಜಿಯನ್ನು ವಜಾಗೊಳಿಸಲಾಗಿದೆ.

Gruhalakshmi scheme 2nd installment not Credited Bank Account for everyone check once status

Comments are closed.