ವಿಶೇಷ ಪಿಂಚಣಿ ಯೋಜನೆ: ತಿಂಗಳಿಗೆ ₹3,000 ಪಡೆಯುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
KBOCWWB Pension Scheme: ಕರ್ನಾಟಕದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಅಸಂಘಟಿತ ವಲಯದ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ ವಿಶೇಷ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿದೆ. ವಯಸ್ಸಾದ ಕಾಲದಲ್ಲಿ ಕಾರ್ಮಿಕರು ಯಾರಿಗೂ ಹೊರೆಯಾಗದೆ ಗೌರವಯುತವಾಗಿ ಬದುಕಲು ಈ ಯೋಜನೆ ನೆರವಾಗಲಿದೆ. ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಪ್ರತಿ ತಿಂಗಳು ಗರಿಷ್ಠ ₹3,000 ವರೆಗೆ ಪಿಂಚಣಿ ಹಣ ಸಿಗಲಿದೆ.
ಅರ್ಹತೆಗಳು ಏನಿರಬೇಕು?
ಮಂಡಳಿಯಲ್ಲಿ ನೋಂದಣಿ ಪಡೆಯಲು:
- ಅರ್ಜಿದಾರರು ಕಟ್ಟಡ ಅಥವಾ ಇತರ ನಿರ್ಮಾಣ ಕಾರ್ಮಿಕರಾಗಿರಬೇಕು.
- ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.
- ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ನಿರ್ಮಾಣ ಕೆಲಸದಲ್ಲಿ ತೊಡಗಿಸಿಕೊಂಡಿರಬೇಕು.
ಪಿಂಚಣಿ ಪಡೆಯಲು:
- ಕಾರ್ಮಿಕರು ಮಂಡಳಿಯ ನೋಂದಾಯಿತ ಫಲಾನುಭವಿಯಾಗಿರಬೇಕು.
- ಅರ್ಜಿದಾರರಿಗೆ 60 ವರ್ಷ ವಯಸ್ಸು ಪೂರ್ಣಗೊಂಡಿರಬೇಕು.
- 60 ವರ್ಷ ತುಂಬುವ ಮೊದಲು ಕನಿಷ್ಠ 3 ವರ್ಷಗಳ ಕಾಲ ನಿರಂತರವಾಗಿ ಮಂಡಳಿಯ ಸದಸ್ಯರಾಗಿರಬೇಕು.
- ಸರ್ಕಾರದ ಇತರ ಯಾವುದೇ ರೀತಿಯ ಪಿಂಚಣಿ ಯೋಜನೆಗಳ ಲಾಭ ಪಡೆಯುತ್ತಿರಬಾರದು.
ಅರ್ಜಿ ಸಲ್ಲಿಸುವ ಆನ್‌ಲೈನ್ ವಿಧಾನ
- ನೋಂದಣಿ: ಮೊದಲು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಮೊಬೈಲ್ ಸಂಖ್ಯೆ ಮತ್ತು ಓಟಿಪಿ (OTP) ಮೂಲಕ ‘ಹೊಸ ಕಾರ್ಮಿಕ’ ಎಂದು ನೋಂದಾಯಿಸಿಕೊಳ್ಳಬೇಕು.
- ದಾಖಲೆ ಅಪ್‌ಲೋಡ್: ಅಗತ್ಯವಿರುವ ವೈಯಕ್ತಿಕ ಮಾಹಿತಿ ಮತ್ತು ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಬೇಕು.
- ಯೋಜನೆ ಆಯ್ಕೆ: ನೋಂದಣಿ ಅನುಮೋದನೆಯಾದ ನಂತರ, ಲಾಗಿನ್ ಆಗಿ “Schemes” ವಿಭಾಗದಲ್ಲಿ ‘ಪಿಂಚಣಿ ಯೋಜನೆ’ಯನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಬೇಕು.
- ನವೀಕರಣ (Renewal): ಕಾರ್ಮಿಕರು ಪ್ರತಿ 3 ವರ್ಷಕ್ಕೊಮ್ಮೆ ತಮ್ಮ ನೋಂದಣಿಯನ್ನು ನವೀಕರಿಸಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ ಸದಸ್ಯತ್ವ ರದ್ದಾಗುವ ಸಾಧ್ಯತೆ ಇರುತ್ತದೆ.
ಅಗತ್ಯವಿರುವ ದಾಖಲೆಗಳು
ಆಧಾರ್ ಕಾರ್ಡ್ (ಸ್ವಯಂ ದೃಢೀಕರಿಸಿದ ಪ್ರತಿ).
- ಉದ್ಯೋಗ ಪ್ರಮಾಣಪತ್ರ (ಕನಿಷ್ಠ 90 ದಿನ ಕೆಲಸ ಮಾಡಿರುವ ಬಗ್ಗೆ ಫಾರ್ಮ್ V(A)/V(B) ಇತ್ಯಾದಿ).
- ವಯಸ್ಸಿನ ಪುರಾವೆ (ವೋಟರ್ ಐಡಿ ಅಥವಾ ಆಧಾರ್).
- ಮಂಡಳಿಯು ನೀಡಿದ ಅಸಲಿ ಗುರುತಿನ ಚೀಟಿ (ID Card).
- ಜೀವಂತ ಪ್ರಮಾಣಪತ್ರ (Living Certificate – ಇದನ್ನು ಪ್ರತಿ ವರ್ಷ ಸಲ್ಲಿಸಬೇಕಾಗುತ್ತದೆ).
ಬೆಳಿಗ್ಗೆ ಬೆಳ್ಳುಳ್ಳಿ ತಿಂದ್ರೆ ಕೊಲೆಸ್ಟ್ರಾಲ್ ಕಂಟ್ರೋಲ್ಗೆ ಬರತ್ತಾ? ಇಲ್ಲಿದೆ ಅದಕ್ಕೆ ಉತ್ತರ
ಸಹಾಯವಾಣಿ ಮತ್ತು ವಿಳಾಸ
ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕರು ಬೆಂಗಳೂರಿನ ಡೈರಿ ಸರ್ಕಲ್ ಬಳಿ ಇರುವ ‘ಕಾರ್ಮಿಕ ಭವನ’ ಅಥವಾ ಆಯಾ ಜಿಲ್ಲಾ/ತಾಲ್ಲೂಕು ಕಾರ್ಮಿಕ ಕಚೇರಿಗಳನ್ನು ಸಂಪರ್ಕಿಸಬಹುದು.
- ದೂರವಾಣಿ: 080-29753078
- ಇಮೇಲ್: labour.commissioner42@gmail.com
ಕಾರ್ಮಿಕರ ಮರಣ ಹೊಂದಿದ ಪಕ್ಷದಲ್ಲಿ, ಅವರ ವಾರಸುದಾರರು ಅಗತ್ಯ ದಾಖಲೆಗಳೊಂದಿಗೆ ಮಂಡಳಿಗೆ ಮಾಹಿತಿ ನೀಡುವ ಮೂಲಕ ಮುಂದಿನ ಸೌಲಭ್ಯಗಳನ್ನು ಪಡೆಯಬಹುದು.



