ಭಾನುವಾರ, ಏಪ್ರಿಲ್ 27, 2025
Homebusinessಕಿಸಾನ್‌ ವಿಕಾಸ ಪತ್ರ ಪಡೆಯುವುದು ಹೇಗೆ ? ಇದರ ಪ್ರಯೋಜನಗಳೇನು ?

ಕಿಸಾನ್‌ ವಿಕಾಸ ಪತ್ರ ಪಡೆಯುವುದು ಹೇಗೆ ? ಇದರ ಪ್ರಯೋಜನಗಳೇನು ?

- Advertisement -

Kisan Vikas Patra 2023 : ಕಿಸಾನ್‌ ವಿಕಾಸ್‌ ಪತ್ರ ಭಾರತೀಯ ನಾಗರೀಕರಿಗೆ ಅಂಚೆ ಇಲಾಖೆಯ ಮೂಲಕ ನೀಡಲಾಗುವ ಅತ್ಯುತ್ತಮ ಸಣ್ಣ ಉಳಿತಾಯ ಯೋಜನೆಗಳಲ್ಲಿ ಒಂದಾಗಿದೆ. ಇದು ಸುರಕ್ಷಿತವಾದ ಹೂಡಿಕೆಯ ವಿಧಾನವಾಗಿದ್ದು, ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿಲ್ಲ. ಸುರಕ್ಷಿತ ಸಾಲಗಳನ್ನು ಪಡೆಯಲು ನೀವು ನಿಮ್ಮ ಕೆವಿಪಿ ಪ್ರಮಾಣ ಪತ್ರವನ್ನು ಮೇಲಾಧಾರ ಹಾಗೂ ಭದ್ರತೆಯಾಗಿಗೂ ಬಳಕೆ ಮಾಡಬಹುದಾಗಿದೆ.

Kisan Vikas Patra 2023 KVP benefits Eligibility details
Image Credit to Original Source

ಸಾಮಾನ್ಯವಾಗಿ ಕಿಸಾನ್ ವಿಕಾಸ್‌ ಪತ್ರ ( KVP)ವನ್ನು ಅಂಚೆ ಇಲಾಖೆಯ ಮೂಲಕ ನೀಡಲಾಗುತ್ತದೆ. ಈ ಯೋಜನೆಯ ಮೂಲಕವಾಗಿ ವಾರ್ಷಿಕ 7.5% ಬಡ್ಡಿದರವನ್ನು ನೀಡಲಾಗುತ್ತದೆ. ಈ ಪ್ರಮಾಣಪತ್ರವನ್ನು ನೀವು ಪಡೆದುಕೊಂಡಿದ್ರೆ ಸುರಕ್ಷಿತ ಸಾಲವನ್ನು ಪಡೆಯಲು ಹಾಗೂ ಯಾವುದೇ ಸಾಲ ಪಡೆಯಲು ಅನುಕೂಲಕರವಾಗಿದೆ.

ಇದನ್ನೂ ಓದಿ : Atal Pension Yojana : ಅಟಲ್ ಪಿಂಚಣಿ ಯೋಜನೆ : ವೃದ್ದಾಪ್ಯದಲ್ಲಿ ತಿಂಗಳಿಗೆ ಸಿಗಲಿದೆ 5000 ರೂ. ಪಿಂಚಣಿ, ಅರ್ಜಿ ಸಲ್ಲಿಸುವುದು ಹೇಗೆ ?

ಕಿಸಾನ್ ವಿಕಾಸ್ ಪತ್ರ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ?

ಕಿಸಾನ್‌ ವಿಕಾಸ್‌ ಯೋಜನೆ ಸೇರ್ಪಡೆ ಆಗಲು ಬಯಸುವವರು ಅಂಚೆ ಕಚೇರಿ ಅಥವಾ ಬ್ಯಾಂಕುಗಳಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಗ್ರಾಹಕರು ಕೆವೈಸಿ ಪ್ರಕ್ರಿಯೆಯನ್ನು ಮಾಡಿಸುವುದು ಕಡ್ಡಾಯವಾಗಿದೆ. ನೀವು ID ಮತ್ತು ವಿಳಾಸ ಪುರಾವೆ ಪ್ರತಿಯನ್ನು (PAN, ಆಧಾರ್, ಮತದಾರರ ID, ಚಾಲಕರ ಪರವಾನಗಿ ಅಥವಾ ಪಾಸ್‌ಪೋರ್ಟ್) ಸಲ್ಲಿಸಬೇಕು.

ದಾಖಲೆಗಳನ್ನು ಸಲ್ಲಿಕೆ ಮಾಡಿದ ನಂತರದಲ್ಲಿ ನೀವು ಹಣವನ್ನು ಠೇವಣಿ ಮಾಡಬೇಕು. ಅಲ್ಲದೇ ಠೇವಣಿಯನ್ನು ನಗದು, ಚೆಕ್‌ ಅಥವಾ ಡಿಮ್ಯಾಂಡ್‌ ಡ್ರಾಫ್ಟ್‌ ಮೂಲಕ ಮಾಡಬಹುದಾಗಿದೆ. ಹಣವನ್ನು ಪಾವತಿ ಮಾಡಿದ ಕೂಡಲೇ ನೀವು ಕೆವಿಪಿ ಪ್ರಮಾಣ ಪತ್ರವನ್ನು ಪಡೆಯುತ್ತೀರಿ. ಮೆಚ್ಯೂರಿಟಿಯ ಸಮಯದಲ್ಲಿ ಕಿಸಾನ್‌ ವಿಕಾಸ್‌ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗಿದೆ. ಇದಕ್ಕಾಗಿ ಈ ಪ್ರಮಾಣ ಪತ್ರವನ್ನು ಸುರಕ್ಷಿತವಾಗಿ ಇರಿಸಿಕೊಳ್ಳಿ.

Kisan Vikas Patra 2023 KVP benefits Eligibility details
Image Credit to Original Source

ಕಿಸಾನ್ ವಿಕಾಸ್ ಪತ್ರ 2023ರ ಪ್ರಯೋಜನಗಳು :

  • ಕಿಸಾನ್‌ ವಿಕಾಸ್‌ ಯೋಜನೆ ಮಾರುಕಟ್ಟೆಯ ಏರಿಳಿತಗಳ ಹೊರತಾಗಿಯೂ, ನಿಮಗೆ ತಿಳಿಸಿದ ಮೊತ್ತವನ್ನು ಕಡ್ಡಾಯವಾಗಿ ಪಡೆಯುತ್ತೀರಿ.
  • ಇದು ಅತ್ಯಂತ ಸುರಕ್ಷಿತ ಹೂಡಿಕೆ ವಿಧಾನವಾಗಿದೆ ಮತ್ತು ಮಾರುಕಟ್ಟೆಯ ಅಪಾಯಗಳಿಗೆ ಒಳಪಡುವುದಿಲ್ಲ.
  • ಕೆವಿಪಿ ಖಾತೆಯನ್ನು ಕನಿಷ್ಠ ₹ 1,000 ಮತ್ತು ಅದರ ನಂತರ ₹ 100 ರ ಗುಣಕಗಳಲ್ಲಿ ತೆರೆಯಬಹುದು.
  • ಈ ಯೋಜನೆಗೆ ಯಾವುದೇ ಗರಿಷ್ಠ ಮಿತಿ ಇರುವುದಿಲ್ಲ.
  • ಭಾರತದ ಯಾವುದೇ ಅಂಚೆ ಕಚೇರಿಯಲ್ಲಿ ಕೆವಿಪಿ ಖಾತೆ ತೆರೆಯಬಹುದು.
  • ಕಿಸಾನ್ ವಿಕಾಸ್ ಪತ್ರದ ಮೆಚುರಿಟಿ ಅವಧಿಯು 115 ತಿಂಗಳುಗಳು ನೀವು ಮೊತ್ತವನ್ನು ಹಿಂತೆಗೆದುಕೊಳ್ಳುವವರೆಗೆ KVP ಯ ಮೆಚುರಿಟಿ ಆದಾಯವು ಬಡ್ಡಿಯನ್ನು ಪಡೆಯುತ್ತಲೇ ಇರುತ್ತೀರಿ.
  • ಸುರಕ್ಷಿತವಾದ ಯಾವುದೇ ಸಾಲವನ್ನು ಪಡೆಯಲು ನೀವು ಕೆವಿಪಿ ಪ್ರಮಾಣ ಪತ್ರವನ್ನು ಆಧಾರವಾಗಿ ಬಳಕೆ ಮಾಡಬಹುದು.
  • ಕೆವಿಪಿ ಪ್ರಮಾಣ ಪತ್ರಕ್ಕೆ ನಾಮನಿರ್ದೇಶನ ಸೌಲಭ್ಯವೂ ಇದೆ.
  • ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 194A ನ ಪ್ರಸ್ತುತ ನಿಬಂಧನೆಗಳ ಪ್ರಕಾರ, KVP ಯ ಮುಕ್ತಾಯದ ಮೇಲೆ, ಬಡ್ಡಿ ಆದಾಯದಿಂದ ಯಾವುದೇ ತೆರಿಗೆಗಳನ್ನು ಕಡಿತಗೊಳಿಸುವ ಅಗತ್ಯವಿಲ್ಲ

ಇದನ್ನೂ ಓದಿ : ಬ್ಯಾಂಕ್‌ ಗ್ರಾಹಕರ ಗಮನಕ್ಕೆ : ಡಿಸೆಂಬರ್‌ನಲ್ಲಿ 18 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ

ಕಿಸಾನ್ ವಿಕಾಸ್ ಪತ್ರ 2023 ಅರ್ಹತೆ
18 ವರ್ಷ ಮೇಲ್ಪಟ್ಟ ಭಾರತೀಯ ಪ್ರಜೆ
ವಯಸ್ಕರು ಅಪ್ರಾಪ್ತ ವಯಸ್ಕ ಅಥವಾ ಅಸ್ವಸ್ಥ ಮನಸ್ಸಿನ ವ್ಯಕ್ತಿಯ ಪರವಾಗಿ ಅರ್ಜಿ ಸಲ್ಲಿಸಬಹುದು

Kisan Vikas Patra 2023: KVP benefits Eligibility details

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular