Praveen Nettaru murder case : ಪ್ರಕರಣದ ದಿಕ್ಕು ತಪ್ಪಿಸಲು ಕೇರಳದ ಬೈಕ್​ ಬಳಕೆ ಮಾಡಿದರಾ ಪ್ರವೀಣ್​ ಹಂತಕರು

ಮಂಗಳೂರು : Praveen Nettaru murder case:ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ, ಹಿಂದೂ ಕಾರ್ಯಕರ್ತ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ಚುರುಕು ಪಡೆದುಕೊಳ್ತಿದೆ. ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಳ್ಳುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಕೇಂದ್ರ ಗೃಹ ಸಚಿವಾಲಯ ಲಿಖಿತ ಆದೇಶವನ್ನು ನೀಡಿದೆ . ಹೀಗಾಗಿ ಎನ್​ಐಎ ಅಧಿಕೃತವಾಗಿ ಈ ಪ್ರಕರಣದ ತನಿಖೆಗೆ ಎಂಟ್ರಿ ಕೊಟ್ಟಿದ್ದು ಆರೋಪಿಗಳು ಶೀಘ್ರದಲ್ಲಿಯೇ ಬಲೆಗೆ ಬೀಳಬಹುದು ಎಂದು ನಿರೀಕ್ಷಿಸಲಾಗಿದೆ.

ಇಲ್ಲಿಯವರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಬೆಳ್ಳಾರೆ ಠಾಣೆ ಪೊಲೀಸರು ಇನ್ನೂ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ಶೋಧದಲ್ಲಿದ್ದರು. ಈ ಕೃತ್ಯಕ್ಕೆ ಪರೋಕ್ಷವಾಗಿ ಸಾಥ್​ ನೀಡಿದ್ದಾರೆಂಬ ಗುಮಾನಿ ವ್ಯಕ್ತವಾದ ಹಿನ್ನೆಲೆಯಲ್ಲಿ ನಾಲ್ವರನ್ನು ಬಂಧಿಸಲಾಗಿದ್ದು ವಿಚಾರಣೆ ಮುಂದುವರಿದಿದೆ. ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಕೇರಳದ ಆರೋಪಿಗಳು ಭಾಗಿಯಾಗಿದ್ದಾರೆಂಬ ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎನ್​ಐಎ ತನಿಖೆಗೆ ಒಳಪಡಿಸಲಾಗಿತ್ತು.

ಆದರೆ ನಿನ್ನೆಯಷ್ಟೇ ಶಿವಮೊಗ್ಗದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸ್ಫೋಟಕ ಮಾಹಿತಿಯೊಂದನ್ನು ನೀಡಿದ್ದರು. ಪ್ರವೀಣ್​ ನೆಟ್ಟಾರುವನ್ನು ಕೇರಳದ ದುಷ್ಕರ್ಮಿಗಳಲ್ಲ ಬದಲಾಗಿ ಸ್ಥಳೀಯರೇ ಕೊಲೆ ಮಾಡಿದ್ದಾರೆಂದು ಹೇಳಿದ್ದರು. ಗೃಹ ಸಚಿವರ ಈ ಹೇಳಿಕೆಯ ಬಳಿಕ ಈ ಕೊಲೆ ಪ್ರಕರಣವು ರೋಚಕ ತಿರುವನ್ನು ಪಡೆದುಕೊಂಡಿದೆ.

ಈ ಕೊಲೆಯನ್ನು ನಡೆಸಿದ್ದು ಕೇರಳದ ದುಷ್ಕರ್ಮಿಗಳಲ್ಲ ಬದಲಾಗಿ ಕೇರಳದೊಂದಿಗೆ ನಂಟು ಹೊಂದಿರುವ ಸ್ಥಳೀಯ ಯುವಕರೇ ನಡೆಸಿದ್ದಾರೆಂಬ ಶಂಕೆ ವ್ಯಕ್ತವಾಗಿದೆ. ಪ್ರಮುಖ ಹಂತಕರ ಪೈಕಿ ಓರ್ವ ಆರೋಪಿ ಸುಳ್ಯ ತಾಲೂಕಿನ ಬೆಳ್ಳಾರೆ ಮೂಲದವನೇ ಆಗಿದ್ದಾನೆಂಬ ಮಾಹಿತಿ ಕೂಡ ಲಭ್ಯವಾಗಿದೆ. ಹಂತಕರು ಪ್ರವೀಣ್​ ನೆಟ್ಟಾರು ಕೊಲೆ ಮಾಡುವ ಸಂದರ್ಭದಲ್ಲಿ ತಮ್ಮ ಮೊಬೈಲ್​ಗಳನ್ನು ಮನೆಯಲ್ಲಿಯೇ ಇಟ್ಟು ಬೀಗ ಹಾಕಿ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ತನಿಖೆಯ ದಿಕ್ಕನ್ನು ತಪ್ಪಿಸುವ ಸಲುವಾಗಿ ತಾವು ಕೇರಳ ಮೂಲದವರು ಎಂದು ಬಿಂಬಿಸಲು ದುಷ್ಕರ್ಮಿಗಳು ಪ್ಲಾನ್​ ರೂಪಿಸಿರುವ ಸಾಧ್ಯತೆಯಿದೆ. ಕೇರಳ ನೋಂದಣಿಯ ಬೈಕನ್ನು ಬಳಸುವ ಮೂಲಕ ಪ್ರಕರಣದ ದಿಕ್ಕನ್ನು ತಪ್ಪಿಸಲು ಯತ್ನಿಸಿದ್ದರಬಹುದು ಎಂಬ ಶಂಕೆ ಕೂಡ ಇದೀಗ ವ್ಯಕ್ತವಾಗಿದೆ. ಪ್ರವೀಣ್​ ನೆಟ್ಟಾರು ಕೊಲೆಗೈದ ಬಳಿಕ ಹಂತಕರು ಕೇರಳಕ್ಕೆ ತೆರಳಿದ್ದಾರೆ ಎನ್ನುವುದು ತನಿಖೆಯಲ್ಲಿ ದೃಢವಾಗಿದೆ. ಅಲ್ಲದೇ ಈ ತನಿಖೆಯಲ್ಲಿ ವಿದೇಶಿ ವ್ಯಕ್ತಿಗಳೂ ಕೈ ಜೋಡಿಸಿದ್ದಾರೆಂಬ ಅನುಮಾನ ಕೂಡ ಇರೋದ್ರಿಂದ ಆರೋಪಿಗಳು ವಿದೇಶಕ್ಕೆ ಹಾರುವುದನ್ನು ತಪ್ಪಿಸಲು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಇದನ್ನು ಓದಿ : ITR Refund : ನಿಮ್ಮ ಆದಾಯ ತೆರಿಗೆ ರಿಫಂಡ್‌ ಆಗಿದ್ಯಾ? ಚೆಕ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಇದನ್ನೂ ಓದಿ : Bommai Tests Covid 19 Positive : ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೊನಾ ಸೋಂಕು ದೃಢ : ದೆಹಲಿ ಪ್ರವಾಸ ರದ್ದು

Praveen Nettaru murder case: Use of bike from Kerala to avoid direction of investigation

Comments are closed.