ದಿನಭವಿಷ್ಯ 01 ನವೆಂಬರ್ 2023 : ಮೇಷ, ಮಿಥುನ ರಾಶಿಯವರಿಗೆ ವ್ಯವಹಾರದಲ್ಲಿ ಪ್ರಗತಿ

Horoscope Today : ದಿನಭವಿಷ್ಯ ಇಂದು 01 ನವೆಂಬರ್ 2023 ಬುಧವಾರ, ಜ್ಯೋತಿಷ್ಯದ ಪ್ರಕಾರ ಚಂದ್ರನು ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಮೃಗಶಿರಾ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.

Horoscope Today : ದಿನಭವಿಷ್ಯ ಇಂದು 01 ನವೆಂಬರ್ 2023 ಬುಧವಾರ, ಜ್ಯೋತಿಷ್ಯದ ಪ್ರಕಾರ ಚಂದ್ರನು ಮಿಥುನ ರಾಶಿಯಲ್ಲಿ ಸಂಚಾರ ಮಾಡುತ್ತಾನೆ. ಮೃಗಶಿರಾ ನಕ್ಷತ್ರವು ಇಂದು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಮೇಷ ರಾಶಿಗೆ ಮೀನ ರಾಶಿಯವರಿಗೆ ಒಟ್ಟು 12 ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಹೇಗಿದೆ.

ಮೇಷ ರಾಶಿ ದಿನಭವಿಷ್ಯ
ಪ್ರತಿಯೊಂದು ವಿಚಾರದಲ್ಲಿಯೂ ಕುಟುಂಬದ ಸದಸ್ಯರ ಬೆಂಬಲ ಪಡೆಯುತ್ತೀರಿ. ಯಾವುದೇ ಸಮಸ್ಯೆಯನ್ನು ಸುಲಭವಾಗಿ ಪರಿಹಾರ ಮಾಡಬಹುದು. ನಕಾರಾತ್ಮಕ ಯೋಚನೆಯನ್ನು ಮನಸಿನಿಂದ ದೂರ ಮಾಡಿ. ಮಕ್ಕಳ ವಿಚಾರದಲ್ಲಿ ಸಮಸ್ಯೆ ಎದುರಾಗಲಿದೆ. ಕುಟುಂಬ ಸದಸ್ಯರ ಸಹಕಾರವನ್ನು ಪಡೆದುಕೊಳ್ಳಿ.

ವೃಷಭ ರಾಶಿ ದಿನಭವಿಷ್ಯ
ಪ್ರಯಾಣದ ವೇಳೆಯಲ್ಲಿ ತುಂಬಾ ಎಚ್ಚರಿಕೆ ವಹಿಸಬೇಕು. ಕುಟುಂಬದಲ್ಲಿನ ಯಾವುದೇ ಸಮಸ್ಯೆಯನ್ನು ತಂದೆಯ ಸಹಕಾರದಿಂದ ಪರಿಹಾರ ಮಾಡಿಕೊಳ್ಳಿ. ಸಂಗಾತಿಯೊಂದಿಗೆ ಪ್ರಮುಖ ವಸ್ತುಗಳ ಖರೀದಿ. ವ್ಯವಹಾರಕ್ಕೆ ಸಂಬಂಧಿಸಿದಂತೆ ಇತರರ ಸಲಹೆ ಪಡೆಯುವುದು ಅತೀ ಮುಖ್ಯ.

ಮಿಥುನ ರಾಶಿ ದಿನಭವಿಷ್ಯ
ಪಾಲುದಾರಿಕೆ ವ್ಯವಹಾರದಿಂದ ಉತ್ತಮ. ಆರ್ಥಿಕ ಪರಿಸ್ಥಿತಿಯು ಉತ್ತಮವಾಗುತ್ತದೆ. ಪ್ರಮುಖ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಪ್ರಯತ್ನಿಸಿ. ಯಾರಿಂದಲಾದರೂ ಸಾಲ ಪಡೆದಿದ್ದರೆ ಅದನ್ನು ಇಂದು ಮರುಪಾವತಿ ಮಾಡುವಿರಿ. ಇದರಿಂದ ಮನಸಿಗೆ ಸಂತಸ.

ಕರ್ಕಾಟಕ ರಾಶಿ ದಿನಭವಿಷ್ಯ
ಸ್ನೇಹಿತರ ಸಹಕಾರದಿಂದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ತಾಯಿಯ ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ಸಂಗಾತಿಯ ಸಲಹೆಯ ಮೇರೆಗೆ ಹೂಡಿಕೆ ಮಾಡಿದ್ರೆ ಲಾಭ. ಕುಟುಂಬದ ಸದಸ್ಯರ ವಿಚಾರದಲ್ಲಿ ಶುಭ ಸುದ್ದಿ ಕೇಳುವಿರಿ.

ಇದನ್ನೂ ಓದಿ : CIBIL Score New Rules : ಸಿಬಿಲ್‌ ಸ್ಕೋರ್‌ ಹೊಸ ನಿಯಮ ಜಾರಿ, ಸಾಲಗಾರರಿಗೆ ಗುಡ್‌ನ್ಯೂಸ್‌ ಕೊಟ್ಟ RBI

ಸಿಂಹ ರಾಶಿ ದಿನಭವಿಷ್ಯ
ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಲಾಭ ಪಡೆಯುವಿರಿ. ಕುಟುಂಬದ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳುವಲ್ಲಿ ಯಶಸ್ವಿ ಆಗುತ್ತೀರಿ. ಯಾವುದೇ ವ್ಯವಹಾರಿಕ ನಿರ್ಧಾರ ಕೈಗೊಳ್ಳುವ ಮೊದಲು ಎಚ್ಚರಿಕೆಯಿಂದ ಇರಿ. ಸಹೋದರನಿಂದ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ.

Horoscope Today 01 November 2023 Zordic Sign
Image Credit to Original Source

ಕನ್ಯಾ ರಾಶಿ ದಿನಭವಿಷ್ಯ
ಕಲಾತ್ಮಕ ಕೆಲಸಗಳಲ್ಲಿ ಆಸಕ್ತಿ ಮೂಡಲಿದೆ. ಸಂಗಾತಿಯ ಸಹಕಾಯದಿಂದ ನೀವು ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿ ಆಗುತ್ತೀರಿ. ಸರಕಾರಿ ಕೆಲಸವನ್ನು ಯಾವುದೇ ಕಾರಣಕ್ಕೂ ಬಾಕಿ ಇಡಬೇಡಿ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಆಸ್ತಿ ಖರೀದಿ ಒಪ್ಪಂದ ಮಾಡುತ್ತಿದ್ದರೆ ಎಚ್ಚರಿಕೆಯನ್ನು ವಹಿಸಿ.

ತುಲಾ ರಾಶಿ ದಿನಭವಿಷ್ಯ
ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸಂಬಂಧಿಕರಿಂದ ಹೆಚ್ಚಿನ ಹಣದ ಸಹಾಯ ದೊರೆಯಲಿದೆ. ಹೊಸ ಉದ್ಯಮ ಆರಂಭಿಸಲು ಇದು ಸಕಾಲ. ನಿಮ್ಮ ಮನೆಯ ಯಾವುದೇ ಸಮಸ್ಯೆಯ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಧೈರ್ಯದಿಂದ ಎಲ್ಲವನ್ನೂ ಎದುರಿಸಿ. ಮಕ್ಕಳ ವಿಚಾರದಲ್ಲಿ ಶುಭವಾರ್ತೆ ಕೇಳುವಿರಿ.

ಇದನ್ನೂ ಓದಿ : ಕನ್ನಡ ರಾಜ್ಯೋತ್ಸವ ಪ್ರಶಸ್ತಿ 2023 ಪ್ರಕಟ :ಇಲ್ಲಿದೆ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

ವೃಶ್ಚಿಕ ರಾಶಿ ದಿನಭವಿಷ್ಯ
ಪೂರ್ವಜರ ಆಸ್ತಿಗೆ ಸಂಬಂಧಿಸಿದ ಯಾವುದೇ ವಿವಾದಗಳು ಪರಿಹಾರವನ್ನು ಕಾಣಲಿದೆ. ವ್ಯಾಪಾರಿಗಳು ಇಂದು ದೂರ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಸಂಗಾತಿಯೊಂದಿಗಿನ ವಿವಾದಗಳು ಇಂದು ಕೊನೆಗೊಳ್ಳಲಿದೆ. ಕೆಲಸದಲ್ಲಿ ಯಾರನ್ನೂ ಕುರುಡಾಗಿ ನಂಬ ಬಾರದು. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ.

ಧನಸ್ಸು ರಾಶಿ ದಿನಭವಿಷ್ಯ
ಈ ಹಿಂದೆ ಪಡೆದುಕೊಂಡ ಸಾಲವನ್ನು ಮರುಪಾವತಿ ಮಾಡುವಂತೆ ನಿಮ್ಮ ಮೇಲೆ ಒತ್ತಡ ಬರಬಹುದು. ಈ ಕಾರಣದಿಂದ ನೀವು ಸ್ವಲ್ಪ ಆತಂಕ ಎದುರಿಸುವ ಸಾಧ್ಯತೆಯಿದೆ. ವ್ಯಾಪಾರಿಗಳಿಂದಾಗಿ ಹಣದ ಕೊರತೆ ಎದುರಿಸುವಿರಿ. ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಯಶಸ್ವಿ ಆಗಲು ಹೆಚ್ಚು ಶ್ರಮವಹಿಸಬೇಕು.

ಮಕರ ರಾಶಿ ದಿನಭವಿಷ್ಯ
ನಿಮ್ಮ ಕುಟುಂಬದಲ್ಲಿನ ಸದಸ್ಯರು ಇಂದು ಸಂತೋಷವಾಗಿ ಇರುತ್ತಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಸಾಧನೆ. ಸಾಮಾಜಿಕವಾಗಿ ನಿಮ್ಮ ಮೇಲೆ ಗೌರವ ವೃದ್ದಿಸಲಿದೆ. ಹಣಕಾಸಿನ ಪರಿಸ್ಥಿತಿಯ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬರಲಿದೆ.

ಇದನ್ನೂ ಓದಿ :  ಭಾರತ – ಶ್ರೀಲಂಕಾ ಪಂದ್ಯಕ್ಕೆ ಕಣಕ್ಕೆ ಇಳಿಯುತ್ತಾರಾ ಹಾರ್ದಿಕ್‌ ಪಾಂಡ್ಯ !

ಕುಂಭ ರಾಶಿ ದಿನಭವಿಷ್ಯ
ಯಾವುದೇ ಕೆಲಸ ಕಾರ್ಯಗಳಲ್ಲಿಯೂ ಇಂದು ನೀವು ಯಶಸ್ವಿ ಆಗುತ್ತೀರಿ. ವಿರೋಧಿಗಳ ಮೇಲೆ ಪ್ರಾಬಲ್ಯ ಸಾಧಿಸುವಿರಿ. ಮನೆಯಿಂದ ಹೊರಡುವಾಗ ಪೋಷಕರ ಆಶೀರ್ವಾದ ಪಡೆಯಬೇಕು. ಉದ್ಯೋಗಿಗಳು ಮೇಲಾಧಿಕಾರಿಗಳೊಂದಿಗೆ ವಾದ ಮಾಡಬಾರದು.

ಮೀನ ರಾಶಿ ದಿನಭವಿಷ್ಯ
ಮಕ್ಕಳ ವಿಚಾರದಲ್ಲಿ ಶುಭ ಸುದ್ದಿಯೊಂದನ್ನು ಕೇಳುವಿರಿ. ಕೆಲವು ಜವಾಬ್ದಾರಿಗಳನ್ನು ಪೂರೈಸುವಲ್ಲಿ ಚಿಂತಿಸುವಿರಿ. ವ್ಯಾಪಾರಸ್ಥರು ಇಂದು ಎಚ್ಚರಿಕೆಯಿಂದ ಇರಬೇಕು. ಉದ್ಯೋಗಿಗಳು ಕಚೇರಿಯಲ್ಲಿ ಶತ್ರುಗಳ ಬಗ್ಗೆ ಎಚ್ಚರಿಕೆಯನ್ನು ವಹಿಸಿ. ಹೊಂದಾಣಿಕೆಯಿಂದ ಕಾರ್ಯಾನುಕೂಲ. ದಿನಾಂತ್ಯದಲ್ಲಿ ಶುಭವಾರ್ತೆಯನ್ನು ಕೇಳುವಿರಿ.

Horoscope Today 01 November 2023 Zordic Sign

Comments are closed.