ಪಾಲಿಸಿದಾರರಿಗೆ ಗುಡ್ ನ್ಯೂಸ್ ಕೊಟ್ಟ LIC

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಜೀವ ವಿಮಾ ಪಾಲಿಸಿದಾರರಿಗೆ ವಿಮಾ ನಿಯಂತ್ರಣ ಮತ್ತು ಅಭಿವೃದ್ದಿ ಪ್ರಾಧಿಕಾರ ಸಿಹಿಸುದ್ದಿಯೊಂದನ್ನು ನೀಡಿದೆ. ವಿಮಾ ಪಾಲಿಸಿಗಳ ಕಂತು ಪಾವತಿಯ ಗಡುವನ್ನು ವಿಸ್ತರಣೆ ಮಾಡಿದೆ.

ಲಾಕ್ ಡೌನ್ ಆದೇಶ ಜಾರಿಯಲ್ಲಿರುವುದರಿಂದಾಗಿ ದೇಶದಲ್ಲಿ ಆರ್ಥಿಕ ವ್ಯವಹಾರ ಸ್ಥಗಿತಗೊಂಡಿದೆ. ಜನರ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಈ ನಿಟ್ಟಿನಲ್ಲಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಮೇ. 31 ರ ವರೆಗೆ ಪಾಲಿಸಿಗಳ ಕಂತು ಪಾವತಿ ಗಡುವನ್ನು ನೀಡುವ ಮೂಲಕ ಜೀವ ವಿಮೆ ಪಾಲಿಸಿದಾರರಿಗೆ ಸಿಹಿಸುದ್ದಿ ನೀಡಿದೆ.

ಜೀವ ವಿಮೆ ಪಾಲಿಸಿದಾರರು ಮಾರ್ಚ್ ತಿಂಗಳಲ್ಲಿ ಪಾವತಿಸಬೇಕಾಗಿದ್ದ ಜೀವ ವಿಮೆ ಪಾಲಿಸಿಗಳ ಕಂತು ಪಾವತಿಯ ಗಡುವನ್ನು ಮೇ.31 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

Leave A Reply

Your email address will not be published.