ನವದೆಹಲಿ : ಗ್ಯಾಸ್ ಸಿಲಿಂಡರ್ ಬೆಲೆ (LPG) ಇಳಿಕೆಯ ನಿರೀಕ್ಷೆಯಲ್ಲಿದ್ದ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ವಾಣಿಜ್ಯ ಸಿಲಿಂಡರ್‌ಗಳ ಎಲ್‌ಪಿಜಿ ಬೆಲೆಯನ್ನು ಬುಧವಾರ 103.50 ರೂ. ಏರಿಕೆ ಮಾಡಲಾಗಿದೆ. ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್‌ಗಳ ಬೆಲೆ 2,104 ರೂಪಾಯಿಗೆ ಏರಿಕೆಯಾಗಲಿದೆ.
ನವದೆಹಲಿಯಲ್ಲಿ ಈ ಹಿಂದೆ 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್‌ಗೆ 2000.50 ರೂ. ಇದ್ದು, ಇದೀಗ ಬೆಲೆ ಏರಿಕೆಯಿಂದ 2,104 ರೂ. ಗಳಿಗೆ ಏರಿಕೆಯಾಗಲಿದೆ. ಇನ್ನು ಕೋಲ್ಕತ್ತಾ ದಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಎಲ್‌ಪಿಜಿ ಬೆಲೆ 101 ರೂ. ನಿಂದ 2,174.5 ರೂ.ಗೆ ಏರಿಕೆಯಾಗಿದೆ. ಮೊದಲು ಇದರ ಬೆಲೆ 2073.5 ರೂ. ಮುಂಬೈನಲ್ಲಿ ವಾಣಿಜ್ಯ ಗ್ಯಾಸ್ ಬೆಲೆ 2,051 ರೂ.ಗೆ ಏರಿಕೆಯಾಗಿದೆ. ಮೊದಲು ಬೆಲೆ 1,950 ರೂ. ಇಲ್ಲಿ 101 ರೂಪಾಯಿ ಏರಿಕೆಯಾಗಿದೆ.
ಚೆನ್ನೈನಲ್ಲಿಯೂ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 2,234.50 ರೂ.ಗೆ ಏರಿಕೆ ಕಂಡಿದೆ. ಈ ಹಿಂದೆ ಬೆಲೆ 2,133 ರೂ. ಇತ್ತು. ಆದರೆ ಪೆಟ್ರೋಲಿಯಂ ಕಂಪನಿಗಳಿಂದ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳಲ್ಲಿ ಯಾವುದೇ ರೀತಿಯಲ್ಲಿಯೂ ಹೆಚ್ಚಳ ಮಾಡಿಲ್ಲ. ಹೀಗಾಗಿ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ದೇಶೀಯ ಸಿಲಿಂಡರ್‌ನ ಎಲ್‌ಪಿಜಿ ಬೆಲೆ ಪ್ರತಿ ಬಾಟಲಿಗೆ ರೂ 899.50 ಆಗಿರುತ್ತದೆ, ಆದರೆ 5 ಕೆಜಿ ಗೃಹಬಳಕೆಯ ಸಿಲಿಂಡರ್‌ನ ಹೊಸ ದರ ರೂ 502 ರೂ. ದರವಿದೆ. ಎಲ್‌ಪಿಜಿ ಸಿಲಿಂಡರ್‌ನ ಪರಿಷ್ಕೃತ ಬೆಲೆಯನ್ನು ಪರಿಶೀಲಿಸಲು ತೈಲ ಕಂಪೆನಿಯ ಅಧಿಕೃತ ವೆಬ್‌ಸೈಟ್‌ಗೆ https://iocl.com/Products/IndaneGas.aspx ಭೇಟಿ ನೀಡಬಹುದಾಗಿದೆ.
ಈ ನಂಬರ್‌ಗೆ ಮಿಸ್‌ಕಾಲ್ ಕೊಟ್ರೆ ಮನೆ ಬಾಗಿಲಿಗೆ ಬರುತ್ತೆ ಗ್ಯಾಸ್
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಗ್ರಾಹಕ ಸ್ನೇಹಿ ಯೋಜನೆಯೊಂದನ್ನು ಜಾರಿಗೆ ತರುತ್ತಿದೆ. ಅಡುಗೆ ಅನಿಲ ಹೊಸ ಸಂಪರ್ಕ ಪಡೆಯಲು ಕಾಯುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿ ಕೊಟ್ಟಿದ್ದು, ಹೊಸ ಯೋಜನೆಯ ಪ್ರಕಾರ ಹೊಸ ಸಂಪರ್ಕ ಪಡೆಯಲು ಗ್ರಾಹಕರು ಡೀಲರ್ ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಮನೆಯಲ್ಲಿಯೇ ಕುಳಿತು 8454955 555 ಸಂಖ್ಯೆಗೆ ಮಿಸ್ಡ್ ಕಾಲ್ ಕೊಟ್ಟರೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಿಬ್ಬಂದಿ ನಿಮ್ಮ ಮನೆಯ ಬಾಗಿಲಿಗೆ ಬಂದು ಹೊಸ ಅಡುಗೆ ಅನಿಲ ಸಂಪರ್ಕ ನೀಡಿದ್ದಾರೆ.
ದೇಶದ ಯಾವುದೇ ಭಾಗದಲ್ಲಿನ ಗ್ರಾಹಕರು ಎಲ್‌ಪಿಜಿ ಸಂಪರ್ಕ ಪಡೆಯಲು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ನಗರ ಮಾತ್ರವಲ್ಲದೇ ಗ್ರಾಮೀಣ ಭಾಗದ ಜನರಿಗೂ ಕೂಡ ಈ ಯೋಜನೆ ಲಭ್ಯವಾಗಲಿದೆ. ಅಷ್ಟೇ ಅಲ್ಲದೇ 5 ಕೆಜಿ ಸಿಲಿಂಡರ್ ಸೌಲಭ್ಯವನ್ನು ಕೂಡ ಪಡೆಯಬಹುದಾಗಿದೆ. ಹೊಸ ಗ್ಯಾಸ್ ಕನೆಕ್ಷನ್ ಪಡೆಯಲು ಮಾತ್ರವಲ್ಲ ಈಗಾಗಲೇ ಗ್ಯಾಸ್ ಸಂಪರ್ಕ ಹೊಂದಿರುವ ಗ್ರಾಹಕರು ಕೂಡ ತಮ್ಮ ಸಿಲಿಂಡರ್ ರೀಫಿಲ್ ಮಾಡಿಸಿಕೊಳ್ಳಲು ಕೂಡ ತಮ್ಮ ನೊಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ ಕಾಲ್ ಕೊಟ್ಟು ಸಿಲಿಂಡರ್ ಪಡೆಯಬಹುದಾಗಿದೆ. ಈ ಯೋಜನೆಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಅಧ್ಯಕ್ಷ ಎಸ್.ಎಂ. ವೈದ್ಯ ಈ ಯೋಜನೆಗೆ ಚಾಲನೆ ನೀಡಿದ್ದಾರೆ.
ಇದನ್ನೂ ಓದಿ : D Mart ಮಾಲೀಕನ ಹೊಸ ಮೈಲಿಗಲ್ಲು : ವಿಶ್ವದ ಟಾಪ್ 100 ಶ್ರೀಮಂತರ ಪಟ್ಟಿಯಲ್ಲಿ ರಾಧಾಕಿಶನ್ ದಮಾನಿ
ಇದನ್ನೂ ಓದಿ : 10 ನಿಮಿಷದಲ್ಲಿ ಉಚಿತವಾಗಿ ಸಿಗುತ್ತೆ ಪಾನ್‌ಕಾರ್ಡ್ : ದಾಖಲೆ ಇಲ್ಲದೇ ಪಾನ್ ಪಡೆಯೋದು ಹೇಗೆ ಗೊತ್ತಾ ?
(LPG customer, gas rates hikes by over Rs 100; check revised rate)