Hijab controversy : ಶಾಲೆಗಳಲ್ಲೂ ಹಿಜಾಬ್‌ ವಿರೋಧಿ ಪ್ರತಿಭಟನೆ : 2 ಬಲಿ

ಇರಾನ್‌ : (Hijab controversy 2 killed) ಹಿಜಾಬ್‌ ವಿರೋಧಿ ಪ್ರತಿಭಟನೆ ಇರಾನ್‌ ನಲ್ಲಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇಡೀ ದೇಶದಾದ್ಯಂತ ಹಿಜಾಬ್‌ ವಿರೋಧಿ(Hijab controversy) ಪ್ರತಿಭಟನೆಗಳು ನಡೆಯುತ್ತಿದ್ದು, ಇದೀಗ ಶಾಲೆಯಲ್ಲಿಯೂ ಪ್ರತಿಭಟನೆ ಆರಂಭಗೊಂಡಿದೆ. ಪ್ರತಿಭಟನೆಯ ವೇಳೆಯಲ್ಲಿ ಭದ್ರತಾ ಪಡೆಗಳು ಹಾರಿಸಿದ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದಾರೆ.

ಇರಾನ್‌ ದೇಶದಲ್ಲಿ ಹಿಜಾಬ್‌ ವಿರುದ್ಧ ಪ್ರತಿಭಟನೆ(Hijab controversy) ತೀವ್ರಗೊಳ್ಳುತ್ತಿದ್ದು,ಸರ್ಕಾರದ ವಿರುದ್ದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಇಬ್ಬರು ಬಲಿಯಾಗಿದ್ದಾರೆ. ಪ್ರತಿಭಟನೆ ತೀವ್ರಗೊಳ್ಳುತ್ತಿರುವ ಹಿನ್ನಲೆಯಲ್ಲಿ , ಇರಾನ್‌ ನ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದು, ಇಬ್ಬರು ಬಲಿಯಾಗಿದ್ದಾರೆ. ಭದ್ರತಾ ಪಡೆಗಳ ಗುಂಡಿನ ದಾಳಿಗೆ ಕಾರು ಚಾಲಕನೊಬ್ಬ ಸಾವನ್ನಪ್ಪಿದ್ದು, ಶಾಲೆಯಲ್ಲಿನ ಇಬ್ಬರು ಶಿಕ್ಷಕರ ಮೇಲೆ ಗುಂಡು ತಗುಲಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಶಾಲೆಯಲ್ಲಿ ಪ್ರತಿಭಟನೆ ನಡೆಯುತ್ತಿದ್ದ ವೇಳೆ ಭದ್ರತಾ ಪಡೆಗಳು ಶಾಲೆಯೊಳಗೆ ನುಗ್ಗಿದ್ದು , ಪ್ರತಿಭಟನಾಕಾರರ ಮೇಲೆ ಮುಗಿಬಿದ್ದು ಗುಂಡಿನ ದಾಳಿಯನ್ನು ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ವ್ಯಕ್ತಿಯ ಹೊಟ್ಟೆಗೆ ಗುಂಡು ತಾಗಿ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎನ್ನುವ ವಿಷಯ ತಿಳಿದು ಬಂದಿದೆ. ಶಾಲೆಯ ಒಳಗೆ ನುಗ್ಗಿದ ಭದ್ರತಾಪಡೆಗಳು ವಿದ್ಯಾರ್ಥಿಗಳ ಮೇಲೂ ದಾಳಿ ಮಾಡಿವೆ.

ಇದನ್ನೂ ಓದಿ : BUS FIRE ACCIDENT : ಖಾಸಗಿ ಬಸ್ ಹೊತ್ತಿ ಉರಿದು 11 ಮಂದಿ ದುರ್ಮರಣ

ಪ್ರತಿಭಟನಾಕಾರರು ಮಾತ್ರವಲ್ಲದೇ ಭದ್ರತಾ ಪಡೆಯ ಸಿಬ್ಬಂದಿಗಳು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ ಎಂದು ಇರಾನ್‌ ನ ಮಾನವ ಹಕ್ಕುಗಳ ಸಂಘಟನೆಗಳು ಆರೋಪಿಸಿದೆ. ಇರಾನ್‌ ನ ಕುರ್ದಿಶ್‌ ಪ್ರಾಂತ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮೇಲೆ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ಮತ್ತು ಅಶ್ರುವಾಯು ಪ್ರಯೋಗ ಮಾಡಿ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸಿದ್ದರು. ಆ ವೇಳೆಯಲ್ಲಿ ನಡೆದ ದಾಳಿಯಲ್ಲಿ ವಿದ್ಯಾರ್ಥಿಗಳು ಸೇರಿ ಹಲವರು ಗಾಯಗೊಂಡಿದ್ದಾರೆ.

ಇದನ್ನೂ ಓದಿ : SC ST Reservation: ಎಸ್ ಸಿ, ಎಸ್ ಟಿ ಸಮುದಾಯಕ್ಕೆ ಭರ್ಜರಿ ಗಿಫ್ಟ್ , ಬಿಜೆಪಿ ಮೀಸಲಾತಿ ಬ್ರಹ್ಮಾಸ್ತ್ರ

ಇದನ್ನೂ ಓದಿ : Yatnal :‘ಹೊರಟ್ಟಿ​ಗೆ ಸಭಾಪತಿ ಸ್ಥಾನ, ಈಶ್ವರಪ್ಪಗೆ ಸಚಿವ ಸ್ಥಾನ ನೀಡಿ ಬಿಜೆಪಿ ನಂಬಿಕೆ ಉಳಿಸಿಕೊಳ್ಳಲಿ’ : ಯತ್ನಾಳ್​ ಆಗ್ರಹ

ಆದರೆ ಇರಾನ್‌ ನಲ್ಲಿ ದಿನೇ ದಿನೇ ಪ್ರತಿಭಟನೆಗಳು ಹೆಚ್ಚುತ್ತಿದ್ದು ,ಬೇರೆ ದೇಶಗಳ ಮೇಲೂ ಪರಿಣಾಮ ಬೀರಿದೆ. ಹೊರ ದೇಶಗಳ ಮಾನವ ಹಕ್ಕು ಸಂಘಟನೆಗಳು ಇರಾನ್‌ ದೇಶದ ಬೆಳವಣಿಗೆಯ ಮೇಲೆ ಕಣ್ಣಿಟ್ಟಿದ್ದು, ಪ್ರತಿಭಟನಾಕಾರರನ್ನು ಇರಾನ್‌ ಸರ್ಕಾರ ನಡೆಸಿಕೊಳ್ಳುವ ರೀತಿಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿವೆ.

ಇದನ್ನೂ ಓದಿ : Viral Fever : ದಕ್ಷಿಣ ಕನ್ನಡದಲ್ಲಿ ನಿಗೂಢ ಜ್ವರ, ಆರೋಗ್ಯ ಇಲಾಖೆಯಿಂದ ಹೆಲ್ತ್ ಸರ್ವೆ

ಕೆಲ ದಿನಗಳ ಹಿಂದೆ ಇರಾನ್‌ ನ ಕುರ್ದಿಶ್‌ ಮಹಿಳೆ ಮಾಶಾ ಅಮೀನಿ ಅವರು ಹಿಜಾಬ್‌ ಸರಿಯಾಗಿ ದರಿಸಿರಲಿಲ್ಲ, ತಲೆ ಕೂದಲು ಕಾಣುವಂತಿತ್ತು ಎಂಬ ಕಾರಣಕ್ಕೆ ಪೋಲೀಸರು ಆಕೆಯನ್ನು ಬಂಧಿಸಿದ್ದರು.ಪೋಲೀಸರು ನಡೆಸಿದ ಹಲ್ಲೆಗೆ ಒಳಗಾದ ಮಾಶಾ ಅಮೀನಿ ಅವರು ಪೋಲೀಸ್‌ ವಶದಲ್ಲಿರುವಾಗಲೆ ಮೃತಪಟ್ಟಿದ್ದರು. ಪೋಲೀಸರೇ ಅಕೆಯ ಮೇಲೆ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ ಎನ್ನುವ ಕಾರಣದಿಂದಾಗಿ ಹಿಜಾಬ್‌ ವಿರೋಧಿ ಪ್ರತಿಭಟನೆಗಳು ದೇಶದಾದ್ಯಂತ ಶುರುವಾದವು. ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆಗಳು ಆರಂಭಗೊಂಡವು . ಮಾಶಾ ಅಮೀನಿ ಅವರ ಹತ್ಯೆಯ ವಿರುದ್ದವಾಗಿ ಹೆಂಗಸರು ತಲೆ ಕೂದಲನ್ನು ಕತ್ತರಿಸಿಕೊಂಡು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

ದೇಶದ ಎಲ್ಲೆಡೆ ಹರಡಿಕೊಂಡಿರುವ ಹಿಜಾಬ್‌ ವಿರೋಧಿ ಪ್ರತಿಭಟನೆ ಇದೀಗ ಉಗ್ರ ರೂಪವನ್ನು ಪಡೆದುಕೊಂಡಿದೆ. ಪ್ರತಿಭಟನೆಗೆ ಹಲವು ಜೀವಗಳು ಅನ್ಯಾಯವಾಗಿ ಬಲಿಯಾಗುತ್ತಿವೆ.ಹಿಜಾಬ್‌ ವಿರೋಧಿ ಪ್ರತಿಭಟನೆಯಿಂದ ಇರಾನ್‌ ಹಾಗೂ ಇನ್ನಿತರ ದೇಶಗಳು ಕಾದ ಕುಲುಮೆಯಂತಾಗಿವೆ. ಕಾಡ್ಗಿಚ್ಚಿನಂತೆ ಹರಡಿದ ವಿರೋಧಿ ಪ್ರತಿಭಟನೆಗೆ ಈ ವರೆಗೆ 40 ಜೀವಗಳು ಬಲಿಯಾಗಿರುವುದು ವಿಷಾದನೀಯ.

(Hijab controversy 2 killed ) Anti-hijab protest is intensifying day by day in Iran. Anti-Hijab (Hijab strike) protests are going on all over the country, and now protests have started in schools as well. Two people were killed in the firing by the security forces during the protest.

Comments are closed.