LPG cylinder price : ಎಲ್‌ಪಿಜಿ ಸಿಲಿಂಡರ್ ಬೆಲೆ ಪರಿಷ್ಕರಣೆ : ಇಂದಿನಿಂದ ಹೊಸ ರೂಲ್ಸ್‌

LPG cylinder price : ನವದೆಹಲಿ : ಅಡುಗೆ ಅನಿಲ ಸಿಲಿಂಡರ್‌ಗಳ (LPG Cylinder) ಬೆಲೆಗಳು ಇಂದಿನಿಂದ ಪರಿಷ್ಕೃತಗೊಳ್ಳಲಿದೆ. ತೈಲ ಕಂಪನಿಗಳು ಹೊಸ ದರವನ್ನು ಘೋಷಣೆ ಮಾಡಿವೆ. ಹಾಗಾದ್ರೆ ಎಲ್‌ಪಿಜಿ ಸಿಲಿಂಡರ್‌ ಹೊಸ ದರ ಎಷ್ಟಿದೆ ಅನ್ನೋದನ್ನು ತಿಳಿಯೋಣ.

ಪ್ರತಿ ತಿಂಗಳ ಮೊದಲ ದಿನದಂತೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ದರ ಹಾಗೂ ವಿದೇಶಿ ವಿನಿಮಯ ದರವನ್ನು ಆಧರಿಸಿ ಈ ದರಗಳನ್ನು ಬದಲಾಯಿಸಲಾಗುತ್ತದೆ.

LPG cylinder price : ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಇಳಿಕೆ:

19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ₹ 5 ರಿಂದ ₹ 15 ವರೆಗೆ ಇಳಿಕೆ ಮಾಡಲಾಗಿದೆ. ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆಯು ₹ 1750 ಕ್ಕಿಂತ ಕಡಿಮೆಯಾಗಿದೆ. ಈ ಬೆಲೆ ಕಡಿತವು ಹೋಟೆಲ್, ರೆಸ್ಟೋರೆಂಟ್ ಮತ್ತು ಇತರ ವಾಣಿಜ್ಯ ಉದ್ದೇಶಗಳ ಬಳಕೆದಾರರಿಗೆ ಸಣ್ಣ ಮಟ್ಟದ ರಿಲೀಫ್ ನೀಡಿದೆ.

ಗೃಹ ಬಳಕೆಯ ಸಿಲಿಂಡರ್ ದರ ಸ್ಥಿರ:

14.2 ಕೆಜಿ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೇಂದ್ರ ಸರ್ಕಾರವು ರಕ್ಷಾ ಬಂಧನದ ಸಂದರ್ಭದಲ್ಲಿ ಸಬ್ಸಿಡಿ ಘೋಷಿಸಿದ ನಂತರ, ಕಳೆದ ಕೆಲವು ತಿಂಗಳುಗಳಿಂದ ಗೃಹ ಬಳಕೆಯ ಸಿಲಿಂಡರ್‌ಗಳ ದರವನ್ನು ಸ್ಥಿರವಾಗಿ ಇರಿಸಲಾಗಿದೆ.

ಮುಖ ನಗರಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಪ್ರಸ್ತುತ ದರಗಳು (ಡಿಸೆಂಬರ್ 1, 2025)

ನಗರ ಗೃಹ ಬಳಕೆಯ ಸಿಲಿಂಡರ್ (14.2 ಕೆಜಿ) ದರ ವಾಣಿಜ್ಯ ಸಿಲಿಂಡರ್ (19 ಕೆಜಿ) ದರ

ಬೆಂಗಳೂರು (Bangalore) ₹ 905.50 ₹ 1900.00

ಹೊಸ ದೆಹಲಿ (New Delhi) ₹ 903.00 ₹ 1740.50\

ಮುಂಬೈ (Mumbai) ₹ 902.50 ₹ 1690.00

ಕೋಲ್ಕತ್ತಾ (Kolkata) ₹ 929.00 ₹ 1851.50

ಚೆನ್ನೈ (Chennai) ₹ 918.50 ₹ 1911.00

LPG cylinder price revision: New rules from today

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories