Milk price hike : ನಂದಿನಿ ಜಂಬೋ ಹಾಲಿನ ದರದಲ್ಲಿ 3 ರೂಪಾಯಿ ಏರಿಕೆ

ಬೆಂಗಳೂರು : ಜಾನುವಾರುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಪೂರೈಕೆಯಲ್ಲಿ ದಿನದಿಂದ ದಿನಕ್ಕೆ ಕುಸಿತಗೊಳ್ಳುತ್ತಿದೆ. ಅದು ಅಲ್ಲದೇ ಇತ್ತೀಚಿಗಷ್ಟೇ ಹಾಲು, ಮೊಸರಿನ ದರ ಏರಿಸಿ ಜನರಿಗೆ ಬೆಲೆ ಏರಿಕೆ (Milk price hike) ಬಿಸಿ ಮುಟ್ಟಿಸಿದ್ದ ಕೆಎಂಎಫ್‌ ಸಂಸ್ಥೆ ಇದೀಗ ಮತ್ತೊಮ್ಮೆ ಗ್ರಾಹಕರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ.

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಬಿಸಿಯಿಂದ ಸಂಕಷ್ಟಕ್ಕೆ ಸಿಲುಕುತ್ತಿರುವ ಜನರಿಗೆ ಹಾಲಿನ ದರ ಏರಿಕೆ ಶಾಕಿಂಗ್‌ ಸುದ್ಧಿಯಾಗಿದೆ. ಕರ್ನಾಟಕ ಹಾಲು ಒಕ್ಕೂಟ, ಜಂಬೋ ಪ್ಯಾಕೆಟ್‌ ಹಾಲಿನ ದರವನ್ನು 3 ರೂಪಾಯಿಗೆ ಏರಿಕೆ ಮಾಡಿದೆ. 6 ಲೀಟರ್‌ ಹಾಲಿನ ಸಾಮರ್ಥ್ಯದ ಜಂಬೋ ಪ್ಯಾಕೆಟ್‌ ದರ ಮೊದಲು 231 ರೂಪಾಯಿ ಇದ್ದು, ಈಗ 234 ರೂಪಾಯಿಗೆ ಏರಿಕೆ ಆಗಿದೆ. ಫೆಬ್ರವರಿ 11 ಶನಿವಾರದಿಂದಲೇ ಪರಿಷ್ಕೃತ ಜಂಬೋ ಪ್ಯಾಕೆಟ್‌ ಹಾಲಿನ ದರ ಜಾರಿಗೆ ಬರಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕುರಿತಂತೆ ಬಮೂಲ್ ಕೆಎಂಎಫ್​​​ ಅಂಗ ಸಂಸ್ಥೆಯಿಂದ‌ ಪ್ರಕಟಣೆ ಹೊರಬಿದ್ದಿದೆ. ಹಾಗಾಗಿ ಫೆಬ್ರವರಿ 11ರಿಂದ ಮಾರುಕಟ್ಟೆಗೆ ಹೊಸ ಮುದ್ರಿತ ಪ್ಯಾಕೆಟ್ ಮಾರಾಟವಾಗಲಿದೆ. ಈಗಾಗಲೇ ಬೆಲೆ ಮುದ್ರಿತ ಹಾಲಿನ ಪ್ಯಾಕೆಟ್‌ಗಳನ್ನು​ ಹಳೇ ಬೆಲೆಯಲ್ಲಿಯೇ ಮಾರಾಟ ಮಾಡಬೇಕು ಎಂದು ರಿಟೇಲ್, ಫ್ರಾಂಚೈಸಿ, ಔಟ್​ಲೆಟ್​ದಾರರಿಗೆ ಬಮೂಲ್ ಪ್ರಕಟಣೆ ಮೂಲಕ ತಿಳಿಸಿದೆ ಎನ್ನಲಾಗಿದೆ. ಇನ್ನು ಕಳೆದ ವರ್ಷ 2022ರ ನವೆಂಬರ್‌ನಲ್ಲಿ ಕೆಎಂಫ್‌ ಸಂಸ್ಥೆ ಹಾಲು ಹಾಗೂ ಮೊಸರಿನ ದರವನ್ನು ಏರಿಕೆ ಮಾಡಿತ್ತು. ದರ ಪರಿಷ್ಕರಣೆ ಬಳಿಕ ಹಾಲಿನ ದರ ಈ ಕೆಳಗಿನಂತಿದೆ.

ಇದನ್ನೂ ಓದಿ : Domestic visa revaluation: ವಿದೇಶಿ ಕೆಲಸದ ಕನಸು ಕಾಣುತ್ತಿರುವವರಿಗೆ ಗುಡ್‌ ನ್ಯೂಸ್‌ : ಬದಲಾಯ್ತು ವೀಸಾ ನಿಯಮ

ಇದನ್ನೂ ಓದಿ : New rules from railway: ರೈಲು ರದ್ದಾದ್ರೆ ಟಿಕೆಟ್‌ ಮರುಪಾವತಿಗೆ ಹೊಸ ರೂಲ್ಸ್‌ ಜಾರಿಗೆ ತಂದ ರೈಲ್ವೆ ಇಲಾಖೆ

ಇದನ್ನೂ ಓದಿ : PM kisan 13th installment: ಪಿಎಂ ಕಿಸಾನ್‌ ಹಣ ಪಡೆಯಲು ಬ್ಯಾಂಕ್‌ ಖಾತೆಯನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡಿ : ಇಂದೇ ಕೊನೆಯ ದಿನ

ಇನ್ನು ಫೆಬ್ರವರಿ 03ರಂದು ಅಮುಲ್ ಹಾಲಿನ ಬೆಲೆಯನ್ನು ಸಹ ಹೆಚ್ಚಿಸಲಾಗಿತ್ತು. ಅಮುಲ್ ಹಾಲಿನ ಪ್ಯಾಕ್‌ಗಳ ಎಲ್ಲಾ ವಿಧಗಳಲ್ಲಿಯೂ ಬೆಲೆಯನ್ನು ಲೀಟರ್‌ಗೆ 3 ರೂಪಾಯಿಗೆ ಹೆಚ್ಚಿಸಲಾಗಿತ್ತು. ಫೆಬ್ರವರಿ 3, 2023ರಿಂದ ಪರಿಷ್ಕರಿಸದ ದರದಲ್ಲಿ ಹಾಲಿನ ಮಾರಾಟದ ಬಗ್ಗೆ ಅಮುಲ್ ಬ್ರಾಂಡ್‌ಗೆ ಹೆಸರುವಾಸಿಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ (ಜಿಸಿಎಂಎಂಎಫ್) ಮಾಹಿತಿ ನೀಡಿದೆ.

Milk price hike: Nandini Jumbo milk price has increased by 3 rupees

Comments are closed.