School Teachers Association Petition: ವಾರದಲ್ಲಿ ಐದೇ ದಿನ ಶಾಲೆ : ಶಿಕ್ಷಕರ ವೇತನ ಡಬಲ್:‌ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ

ಬೆಂಗಳೂರು: (School Teachers Association Petition) ಏಳನೇ ವೇತನ ಆಯೋಗ ನಿಗದಿಗೊಳಿಸಿದ್ದ ಪ್ರಶ್ನಾವಳಿಗಳಿಗೆ ಪ್ರಾಥಮಿಕ ಶಿಕ್ಷಕರ ಸಂಘ ಶುಕ್ರವಾರ 135 ಪುಟಗಳ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದು, 25 ಪ್ರಮುಖ ಬೇಡಿಕೆಗಳನ್ನು ವೇತನ ಅಯೋಗದ ಮುಂದಿಟ್ಟಿದೆ. ಶಿಕ್ಷಕರ ಸಂಬಳವನ್ನು ಡಬಲ್‌ ಮಾಡಬೇಕು, ವಾರದಲ್ಲಿ ಐದು ದಿನ ಮಾತ್ರ ಶಾಲೆಗಳು ಕಾರ್ಯನಿರ್ವಹಿಸಬೇಕು, ಎಲ್ಲಾ ಸರಕಾರಿ ಶಾಲೆಗಳಲ್ಲಿಯೂ ಎಲ್‌ ಕೆಜಿ, ಯುಕೆಜಿ ಪ್ರಾರಂಭಿಸಬೇಕು ಹೀಗೆ ಹಲವು ಪ್ರಮುಖ ಬೇಡಿಕೆಗಳನ್ನು ಏಳನೇ ವೇತನ ಆಯೋಗದ ಮುಂದೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಂಡಿಸಿದೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಏಳನೇ ವೇತನ ಆಯೋಗ ನಿಗದಿಗೊಳಿಸಿದ್ದ ಪ್ರಶ್ನಾವಳಿಗಳಿಗೆ ಶುಕ್ರವಾರ 135 ಪುಟಗಳ ಪ್ರತಿಕ್ರಿಯೆಯನ್ನು ಸಲ್ಲಿಸಿದ್ದು, 25 ಪ್ರಮುಖ ಬೇಡಿಕೆಗಳನ್ನು ವೇತನ ಅಯೋಗದ ಮುಂದಿಟ್ಟಿದೆ. ಶಿಕ್ಷಕರ ಸಂಬಳವನ್ನು ಡಬಲ್‌ ಮಾಡಬೇಕು, ವಾರದಲ್ಲಿ ಐದು ದಿನ ಮಾತ್ರ ಶಾಲೆಗಳು ಕಾರ್ಯನಿರ್ವಹಿಸಬೇಕು, ಎಲ್ಲಾ ಸರಕಾರಿ ಶಾಲೆಗಳಲ್ಲಿಯೂ ಎಲ್‌ ಕೆಜಿ, ಯುಕೆಜಿ ಪ್ರಾರಂಭಿಸಬೇಕು, ಪ್ರತಿ ತರಗತಿಗೊಬ್ಬ ಶಿಕ್ಷಕರನ್ನು ನೇಮಕ ಮಾಡಬೇಕು ಎನ್ನುವಂತಹ ಹಲವು ಪ್ರಮುಖ ಬೇಡಿಕೆಗಳನ್ನು ಆಯೋಗದ ಮುಂದಿಟ್ಟಿದೆ.

ಪ್ರಾಥಮಿಕ ಶಾಲಾ ಶಿಕ್ಷಕರು ಪ್ರಸ್ತುತ ಪಡೆಯುತ್ತಿರುವ ವೇತನ ಶ್ರೇಣಿ 25,800 ರೂ.- 51,400 ರೂ ಅನ್ನು ದ್ವಿಗುಣಗೊಳಿಸಿ 51,600- 1,02,800 ರೂ. ಗಳ ಆರಂಭಿಕ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಗೊಳಿಸಬೇಕು. ಹತ್ತು ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಿಗೆ ನೀಡುವ ಕಾಲಮಿತಿ ಬಡ್ತಿ ವೇತನ ಶ್ರೇಣಿಯನ್ನು ದ್ವಿಗುಣಗೊಳಿಸಿ ಪ್ರತ್ಯೇಕ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು. ಹದಿನೈದು ವರ್ಷ ಸೇವೆ ಸಲ್ಲಿಸಿದವರಿಗೆ ನೀಡುವ ಸ್ವಯಂ ಚಾಲಿತ ಬಡ್ತಿ ವೇತನ ಶ್ರೇಣಿಯನನು ಎರಡು ಪಟ್ಟು ಹೆಚ್ಚಿಸಿ ಪ್ರತ್ಯೇಕ ವೇತನ ಶ್ರೇಣಿ ಮತ್ತು ಪದವೀಧರ ಶಿಕ್ಷಕರು ಹಾಲಿ ಪಡೆಯುತ್ತಿರುವ ವೇತನವನ್ನು ದ್ವಿಗುಣಗೊಳಿಸಿ ಪ್ರತ್ಯೇಕ ವೇತನ ಶ್ರೇಣಿ ನಿಗದಿ ಗೊಳಿಸುವಂತೆ ಮನವಿ ಮಾಡಲಾಗಿದೆ.

ಇದನ್ನೂ ಓದಿ : LKG Student Fail : ಶಿಕ್ಷಣ ಸಂಸ್ಥೆಯ ಎಡವಟ್ಟು: ಯುಕೆಜಿ ಮಗುವನ್ನೇ ಫೇಲ್ ಮಾಡಿದ ಶಿಕ್ಷಕ

ಸೇವಾ ಹಿರಿತನದ ಮೇಲೆ ವೇತನ ಶ್ರೇಣಿ ನಿಗದಿ ಪಡಿಸಬೇಕು, ಪ್ರತಿ ಐದು ವರ್ಷಕ್ಕೊಮ್ಮೆ ವೇತನ ಮುಂಬಡ್ತಿ ನೀಡಬೇಕು, ಮನೆ ಬಾಡಿಗೆ ಭತ್ಯೆ ಹೆಚ್ಚಿಸಬೇಕು, ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಏಕ ರೂಪದ ವೇತನ ನಿಗದಿ ಮಾಡಬೇಕು, ಪ್ರತಿ ಶಾಲೆಗೆ ಒಬ್ಬ ಡಿ ಗ್ರೂಪ್‌ ಸಿಬ್ಬಂದಿಯನ್ನು ಮಂಜೂರು ಮಾಡಬೇಕು ಎಂದು ಕೋರಲಾಗಿದೆ.

School Teachers Association Petition: Five days a week school: Teacher’s salary double: Primary School Teachers Association Petition

Comments are closed.