National Pension System | ನಿವೃತ್ತಿ ಬಳಿಕ ಸಿಗುತ್ತೆ ತಿಂಗಳಿಗೆ 70 ಸಾವಿರ ರೂ. ಪಿಂಚಣಿ

ನವದೆಹಲಿ : ನಿವೃತ್ತಿಯ ನಂತರ ಆರಾಮದಾಯಕ ಜೀವನಕ್ಕಾಗಿ ಹೆಚ್ಚುವರಿ ನಿಧಿ ಮತ್ತು ಅದರ ಜೊತೆಗೆ ನಿಯಮಿತ ಆದಾಯಕ್ಕಾಗಿ ಅನೇಕ ಜನರು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ರಾಷ್ಟ್ರೀಯ ಪಿಂಚಣಿ ಯೋಜನೆ (National Pension System) ವ್ಯವಸ್ಥೆ ಇಂತಹ ಯೋಜನೆಗಳಲ್ಲಿ ಒಂದಾಗಿದೆ. ಇದು ಹೂಡಿಕೆದಾರರಿಗೆ ದೊಡ್ಡ ಮೊತ್ತದ ನಿಧಿಯನ್ನು ನೀಡುವುದರ ಜೊತೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಸಹ ಕೊಡುತ್ತದೆ. ಈ ಯೋಜನೆಯಲ್ಲಿ ನೀವು ಎಷ್ಟು ಹೂಡಿಕೆ ಮಾಡುವಿರೋ, ನಿಮಗೆ ನಿವೃತ್ತಿಯ ಬಳಿಕ ಅಷ್ಟು ಹೆಚ್ಚು ಹಣ ಸಿಗುವಂತೆ ಮಾಡುತ್ತದೆ.

ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಯಾವುದೇ ಮಿತಿಯಿಲ್ಲ. ಈ ಯೋಜನೆಯಲ್ಲಿ ಭಾರತೀಯರು ಅಷ್ಟೇ ಅಲ್ಲ ಎನ್ಆರ್‌ಐಗಳೂ ಕೂಡ ಹೂಡಿಕೆ ಮಾಡಬಹುದು. 18 ರಿಂದ 70 ವರ್ಷ ವಯಸ್ಸಿನವರು ಇದರಲ್ಲಿ ಹೂಡಿಕೆ ಮಾಡಬಹುದು. ಸರಕಾರಿ ಮತ್ತು ಖಾಸಗಿ ಉದ್ಯೋಗಿಗಳೂ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರ ಅಡಿಯಲ್ಲಿ, ಟೈರ್ 1 ಮತ್ತು ಟೈರ್ 2 ಎಂಬ ಎರಡು ಖಾತೆಗಳನ್ನು ತೆರೆಯಲಾಗುತ್ತದೆ. ಟೈರ್ 1 ಇಲ್ಲದ ಯಾರೂ ಟೈರ್ 2 ಖಾತೆಯನ್ನು ತೆರೆಯಲು ಸಾಧ್ಯ ಇರುವುದಿಲ್ಲ.

ಎನ್‌ಪಿಎಸ್‌ನಿಂದ ಕೋಟಿ ಆದಾಯ ಪಡೆಯುವ ವಿಧಾನ :
ಹೂಡಿಕೆದಾರರು 28 ನೇ ವಯಸ್ಸಿನಲ್ಲಿ NPS ನಲ್ಲಿ ತಿಂಗಳಿಗೆ 10,000 ರೂಪಾಯಿಗಳನ್ನು ಹೂಡಿಕೆ ಮಾಡಲು ಆಂಭಿಸಿ, ಅದನ್ನು 60 ವರ್ಷ ವಯಸ್ಸಿನವರೆಗೆ ಮುಂದುವರೆಸಿದರೆ, ಅವರು 1.5 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತವನ್ನು ಪಡೆಯಬಹುದು. ಹಾಗೆ ತಿಂಗಳಿಗೆ 75,000 ರೂಪಾಯಿಗಳ ಪಿಂಚಣಿಯನ್ನು ಸಹ ಪಡೆಯುತ್ತಾರೆ.

ಲೆಕ್ಕಾಚಾರದ ಪ್ರಕಾರ 28 ವರ್ಷದಿಂದ 60 ವರ್ಷಗಳವರೆಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಹೂಡಿಕೆ ಮಾಡಿದರೆ ಒಟ್ಟು ಮೊತ್ತ 38 ಲಕ್ಷ 40 ಸಾವಿರ ರೂ. ಆಗುತ್ತದೆ. ಇದರ ಮೇಲೆ ಅಂದಾಜು ಶೇಕಡಾ 10 ರಷ್ಟು ಆದಾಯವನ್ನು ಪರಿಗಣಿಸಿದರೆ, ಒಟ್ಟು ಕಾರ್ಪಸ್ 2.80 ಕೋಟಿ ರೂ. ಆಗುತ್ತದೆ. ಇಲ್ಲಿ ಅನ್ಯೂಟಿ ಖರೀದಿ ನಿಮ್ಮ ಒಟ್ಟು ಕಾರ್ಪಸ್‌ನ ಶೇ.40ರಷ್ಟು ಇರುತ್ತದೆ. ಅಂದಾಜು ಅನ್ಯೂಟಿ ದರವನ್ನು ವಾರ್ಷಿಕವಾಗಿ ಶೇ.8 ರಷ್ಟು ಇರಿಸಿದರೆ, ನಂತರ 60 ವರ್ಷ ವಯಸ್ಸಿನ ನಂತರ, ನೀವು ತಿಂಗಳಿಗೆ 75,000 ಪಿಂಚಣಿ ಪಡೆದು, ಒಟ್ಟು ರೂ.1.6 ಕೋಟಿಯಷ್ಟು ಒಟ್ಟು ಮೊತ್ತವನ್ನು ಸಹ ಪಡೆದುಕೊಳ್ಳಬಹುದು.

ಇದನ್ನೂ ಓದಿ : Post Office RD Scheme : ಅಂಚೆ ಕಚೇರಿಯಲ್ಲಿ 5 ಸಾವಿರ ಹೂಡಿಕೆ ಮಾಡಿ 3.5 ಲಕ್ಷ ಪಡೆಯಿರಿ

ಇದನ್ನೂ ಓದಿ : Private CEO for LIC: 66 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಎಲ್ ಐಸಿಗೆ ಖಾಸಗಿ ಸಿಇಒ ನೇಮಿಸಲು ಕೇಂದ್ರ ಚಿಂತನೆ

ಇದನ್ನೂ ಓದಿ : Small saving schemes Interest Rate : ಸುಕನ್ಯಾ ಸಮೃದ್ಧಿಯಲ್ಲಿ ಹಣ ಹೂಡಿಕೆ ಮಾಡುವವರಿಗೆ ಸರಕಾರದಿಂದ ಗುಡ್‌ ನ್ಯೂಸ್

ಇಕ್ವಿಟಿ ಎಕ್ಸ್ಪೋಜರ್ ಮತ್ತು ಸಿಂಗಲ್ ಇನ್ವೆಸ್ಟ್ಮೆಂಟ್ ಆಯ್ಕೆ :
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಸರಕಾರದ ಬೆಂಬಲಿತ ಸಾಮಾಜಿಕ ಭದ್ರತಾ ಹೂಡಿಕೆ ಯೋಜನೆಯಾಗಿದೆ. ಇದು ಹೂಡಿಕೆದಾರರಿಗೆ ವೈಯಕ್ತಿಕ ಹೂಡಿಕೆಗಳಿಗೆ ಸಾಲ ಮತ್ತು ಇಕ್ವಿಟಿ ಎಕ್ಸ್ಪೋಜರ್ ಎರಡನ್ನೂ ಸಹ ನೀಡುತ್ತದೆ. NPS ಯೋಜನೆಯಲ್ಲಿ, ಖಾತೆದಾರರಿಗೆ ಈಕ್ವಿಟಿಯಲ್ಲಿ ಶೇ.75 ರಷ್ಟು ರಿಸ್ಕ್ ಅನ್ನು ತೆಗೆದುಕೊಳ್ಳುವ ಆಯ್ಕೆಯನ್ನು ನೀಡಲಾಗುತ್ತದೆ.

National Pension System | 70 thousand rupees per month after retirement Pension

Comments are closed.