Siddaramaiah Bus Yatra: ಸಿದ್ದರಾಮಯ್ಯ ಬಸ್ ಯಾತ್ರೆಗೆ ಗ್ರೀನ್ ಸಿಗ್ನಲ್‌ : ಜನವರಿ 3 ರಂದು ಬಸ್‌ ಯಾತ್ರೆ ಆರಂಭ

ಮಂಡ್ಯ: (Siddaramaiah Bus Yatra) ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಐದಾರು ತಿಂಗಳು ಬಾಕಿ ಇದ್ದು, ಕಾಂಗ್ರೆಸ್ ಚುನಾವಣೆಗೆ ಸನ್ನದ್ಧವಾಗಿದೆ. ಸಿದ್ದರಾಮೋತ್ಸವದ ಬಳಿಕ ರಣೋತ್ಸಾಹದಲ್ಲಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಸ್​ಯಾತ್ರೆಗೆ ಮುಹೂರ್ತ ಫಿಕ್ಸ್​ ಮಾಡಿದ್ದು, ಇದೇ ಜನವರಿ 3ರಿಂದ ಸಿದ್ದರಾಮಮಯ್ಯನವರ ಬಸ್ ಯಾತ್ರೆ ಆರಂಭವಾಗಲಿದೆ.

ಬಸವಕಲ್ಯಾಣದಿಂದ ಆರಂಭವಾಗಲಿರುವ ಸಿದ್ದು ಬಸ್ ಯಾತ್ರೆ (Siddaramaiah Bus Yatra), ಉತ್ತರ ಕರ್ನಾಟಕದ ಪ್ರಮುಖ 10ರಿಂದ 12 ಜಿಲ್ಲೆಗಳಲ್ಲಿ ಸಂಚರಿಸಲಿದೆ. ಈ ಹಿಂದೆ ಲಿಂಗಾಯತ ಧರ್ಮ ವಿಭಜಕ ಎಂಬ ಹಣೆ ಪಟ್ಟಿ ಹೋಗಲಾಡಿಸಲು ಬಸವಕಲ್ಯಾಣದ ಅನುಭವ ಮಂಟಪದಿಂದಲೇ ಆರಂಭಿಸಲಿದ್ದಾರೆ. ಇದಕ್ಕೆ ಈಗಾಗಲೇ ಹೈಟೆಕ್ ಬಸ್ ಸಿದ್ಧವಾಗಿದೆ. ಸಿದ್ದರಾಮಯ್ಯ ಉತ್ತರ ಕರ್ನಾಟಕದಿಂದ ಪ್ರಾರಂಭ ಮಾಡಿದರೆ ಡಿ.ಕೆ.ಶಿವಕುಮಾರ್ ದಕ್ಷಿಣ ಕರ್ನಾಟಕ ಭಾಗದಿಂದ ​ಬಸ್ ಯಾತ್ರೆ ಮಾಡುವ ಸಾಧ್ಯತೆ ಇದ್ದು, ಇದಕ್ಕೆ ಈಗಾಗಲೇ ಹೈಟೆಕ್​ ಬಸ್​ ಸಹ ರೆಡಿಯಾಗಿದೆ. ಆದ್ರೆ, ಸದ್ಯ ವಿದೇಶ ಪ್ರವಾಸದಲ್ಲಿ ಡಿಕೆ ಶಿವಕುಮಾರ್ ಕೂಡ ಜನವರಿಯಲ್ಲಿ ತಮ್ಮ ಬಸ್ ಯಾತ್ರೆ ಶುರುಮಾಡುವ ಸಾಧ್ಯತೆಗಳಿವೆ.

ನಂತರದಲ್ಲಿ ಪಕ್ಷದ ಒಗ್ಗಟ್ಟು ಮುಖ್ಯವಾಗಿದ್ದು, ಜಿಲ್ಲೆಗಳಲ್ಲಿ ಸಂಚರಿಸುವಾಗ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರೂ ನಾಯಕರು ಜೊತೆಗಿರಬೇಕು. ಒಗ್ಗಟ್ಟಿನ ದೃಷ್ಟಿಯಿಂದ ಇಬ್ಬರು ಒಟ್ಟಿಗೆ ಯಾತ್ರೆಗೆ ಹೋಗಬೇಕು ಎಂದು ಪಕ್ಷದ ಹೈಕಮಾಂಡ್‌ ತಾಕೀತು ಮಾಡಿತ್ತು. ಮೊದಲಿಗೆ ಸಿದ್ದರಾಮಯ್ಯನವರ ಬಸ್‌ ಯಾತ್ರೆಗೆ ಹೈಕಮಾಂಡ್‌ ನಿಂದ ಅನುಮತಿ ಸಿಕ್ಕಿರಲಿಲ್ಲ. ಇದೀಗ ಸಿದ್ದರಾಮಯ್ಯನವರ ಬಸ್‌ ಯಾತ್ರೆಗೆ ಹೈಕಮಾಂಡ್‌ ನಿಂದ ಅನುಮತಿ ಸಿಕ್ಕಿದ್ದು, ಜನವರಿ 3 ರಿಂದ ಬಸ್‌ ಯಾತ್ರೆಗೆ ದಿನಾಂಕ ನಿಗದಿಯಾಗಿದೆ.

ಇದನ್ನೂ ಓದಿ : CM Yogi Adityanath : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೃಷ್ಣ ನಗರಿ ಉಡುಪಿಗೆ ಆಗಮನ

ಇದನ್ನೂ ಓದಿ : Janardhan Reddy: ಗಣಿಧಣಿ ಜನಾರ್ಧನ್ ರೆಡ್ಡಿ ವಿರುದ್ಧದ 4 ಕೇಸ್ ಗಳು ರದ್ದು: ರಾಜಕೀಯ ಹಾದಿ ಇನ್ನಷ್ಟು ಸುಗಮ

With five to six months left for assembly elections in Karnataka, Congress is gearing up for elections. After the Siddaramautsavam, the leader of the opposition party Siddaramaiah, who is in high spirits, has fixed the date for the bus yatra, and Siddaramaiah’s bus yatra will start from January 3.

Comments are closed.