ನವದೆಹಲಿ : ದೇಶದಲ್ಲಿ ಅಕ್ರಮ ಹಣದ ವರ್ಗಾವಣೆ ಪ್ರಕರಣ ಹೆಚ್ಚುತ್ತಿದೆ. ಇದೇ ಕಾರಣಕ್ಕೆ ಬ್ಯಾಂಕುಗಳಲ್ಲಿ ನಡೆಯುವ ಹಣದ ವರ್ಗಾವಣೆಯ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ ಕಣ್ಣಿಟ್ಟಿದೆ. ಖಾತೆಯಿಂದ ಖಾತೆಗೆ ಹಣ ವರ್ಗಾಯಿಸಿದ್ರೂ ಕೂಡ ನಿಖರವಾದ ಕಾರಣ ನೀಡಬೇಕು. ಇದೀಗ ಆರ್‌ಬಿಐ ಹೊಸ ರೂಲ್ಸ್ (RBI New Rules) ಜಾರಿಗೆ ತಂದಿದೆ.
ಇನ್ಮು ಮುಂದೆ 50000 ರೂಪಾಯಿಕ್ಕಿಂತ ಹೆಚ್ಚಿನ ಹಣದ ವರ್ಗಾವಣೆಯನ್ನು ಮಾಡುವಾಗ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊರಡಿಸಿರುವ ಹೊಸ ರೂಲ್ಸ್ ಜಾರಿಯಾಗಲಿದೆ. ಆದರೆ ಸದ್ಯ ಈ ನಿಯಮ ಜಾರಿ ಆಗ್ತಾ ಇರೋದು ವಿದೇಶಿ ಹಣದ (international Money Transfer) ವಹಿವಾಟಿನ ಮೇಲೆ. ಕೇಂದ್ರ ಸರಕಾರ 2005 ರಲ್ಲಿ ಮೊದಲ ಬಾರಿಗೆ ಅಕ್ರಮ ಹಣದ ವರ್ಗಾವಣೆ ತಡೆಗೆ ನಿಯಮವೊಂದನ್ನು ರೂಪಿಸಿತ್ತು.

ಆದರೆ ಈ ನಿಯಮದ ಪ್ರಕಾರ 5000 ಕ್ಕಿಂತ ಹೆಚ್ಚಿನ ಅಂತರಾಷ್ಟ್ರೀಯ ವಹಿವಾಟುಗಳಿಗೆ ಈ ನಿಮಯ ಅನ್ವಯ ಆಗಲಿದೆ. ಆದರೆ ಇದೇ ನಿಯಮಕ್ಕೆ ಆರ್‌ಬಿಐ ತಿದ್ದುಪಡಿ ಮಾಡಿದ್ದು, 50000 ಕ್ಕಿಂತ ಹೆಚ್ಚಿನ ಪ್ರತೀ ವಹಿವಾಟು ಪರಿಶೀಲನೆಗೆ ಒಳಪಡಲಿದೆ. ವಿದೇಶಗಳಿಂದ ಭಾರತಕ್ಕೆ ಹಣವನ್ನು ವರ್ಗಾವಣೆ ಮಾಡುವಾಗ ಸಂಪೂರ್ಣ ವಿವರಣೆಯನ್ನು ನೀಡಬೇಕಾಗಿದೆ.
ಇದನ್ನೂ ಓದಿ : ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮೀ ಯೋಜನೆ ಪುರುಷರಿಗೂ ವಿಸ್ತರಣೆ !
ಯಾವ ಉದ್ದೇಶಕ್ಕಾಗಿ ಹಣ ವರ್ಗಾವಣೆ ಮಾಡಲಾಗುತ್ತದೆ, ಯಾರಿಗೆ ಹಣವನ್ನು ಪಾವತಿ ಮಾಡಲಾಗುತ್ತಿದೆ. ಹಣದ ಮೂಲ ಯಾವುದು ಹೀಗೆಯೇ ಎಲ್ಲಾ ರೀತಿಯ ಮಾಹಿತಿಯನ್ನು ಪಡೆಯುವ ಕಾರ್ಯವನ್ನು ಆರ್‌ಬಿಐ ಮಾಡಲಿದೆ. ಅಕ್ರಮ ಹಣ ವರ್ಗಾವಣೆ ತಡೆಯುವ ಸಲುವಾಗಿಯೇ ಭಾರತದಲ್ಲಿ ಡಿಜಿಟಲ್ ಪಾವತಿಗಳನ್ನು ಹೆಚ್ಚಳ ಮಾಡಲಾಗಿದೆ.
ಅದ್ರಲ್ಲೂ ಬ್ಯಾಂಕ್ ಶಾಖೆಗಳಲ್ಲಿ ಹಣವನ್ನು ಠೇವಣಿ ಇರಿಸಿರುವ ಮೊತ್ತದ ಮೇಲೆಯೂ ಆರ್‌ಬಿಐ ನಿಗಾ ಇರಿಸಲಿದೆ. ಅನುಮಾನಾಸ್ಪದವಾಗಿ 10 ಲಕ್ಷಕ್ಕಿಂತ ಅಧಿಕ ಹಣವನ್ನ ಖಾತೆಯಿಂದ ವಾಪಾಸ್ ಪಡೆದಾಗಲೂ ಕೂಡ ಮಾಹಿತಿಯನ್ನು ಪಡೆದುಕೊಳ್ಳಲಿದೆ. ದೇಶದಲ್ಲಿ ನೋಟ್ ಬ್ಯಾನ್ ಬೆನ್ನಲ್ಲೇ ಹಣದ ವರ್ಗಾವಣೆಗೆ ಸಂಬಂಧಿಸಿದಂತೆ ಹಲವು ರೂಲ್ಸ್‌ಗಳನ್ನು ಜಾರಿಗೊಳಿಸಲಾಗಿದೆ.
ಇದನ್ನೂ ಓದಿ : 3.26 ಲಕ್ಷ ರೇಷನ್ ಕಾರ್ಡ್ ರದ್ದು ! ರಾತ್ರೋ ರಾತ್ರಿ ಜಾರಿಯಾಯ್ತು ಹೊಸ ರೂಲ್ಸ್
ಬ್ಯಾಂಕುಗಳಲ್ಲಿ ನಡೆಸುವ ನಗದು ವಹಿವಾಟಿನ ಮೇಲೆಯೂ ನಿಯಂತ್ರಣ ಹೇರಲಾಗಿದೆ. ಬ್ಯಾಂಕ್ ಖಾತೆಗಳಿಗೆ ಹಣವನ್ನು ಡೆಪಾಸಿಟ್ ಮಾಡುವುದು ಹಾಗೂ ಹಣವನ್ನು ವಾಪಾಸ್ ಪಡೆಯುವುದಕ್ಕೂ ನಿಯಮ ರೂಪಿಸಲಾಗಿದೆ. ಒಂದೊಮ್ಮೆ ಬ್ಯಾಂಕ್ ಶಾಖೆಗಳಲ್ಲಿ ಅನುಮಾನಾಸ್ಪದ ಹಣದ ವರ್ಗಾವಣೆ ನಡೆದ ಕೂಡಲೇ ಬ್ಯಾಂಕಿನ ಅಧಿಕಾರಿಗಳು ಗ್ರಾಹಕರ ಖಾತೆಯನ್ನು ಫ್ರೀಜ್ ಮಾಡಲು ಅವಕಾಶವಿದೆ.

ನಂತರ ನೀವು ಸರಿಯಾದ ದಾಖಲೆಗಳನ್ನು ನೀಡಿದ ನಂತರದಲ್ಲಿ ಖಾತೆಯನ್ನು ಮತ್ತೆ ಸಕ್ರೀಯಗೊಳಿಸಲಾಗುತ್ತದೆ. ಹಣದ ವರ್ಗಾವಣೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆ ನೀಡಲು ವಿಫಲರಾದ್ರೆ ಖಾತೆ ಸಕ್ರೀಯಗೊಳಿಸಲು ಸಾಧ್ಯವಾಗುವುದಿಲ್ಲ.
ಇದನ್ನೂ ಓದಿ : ಗೂಗಲ್‌ನಲ್ಲಿ ಈ ವಿಚಾರ ಹುಡುಕಿದ್ರೆ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ !
ಇಇನ್ನು ಬ್ಯಾಂಕುಗಳಲ್ಲಿಯೂ ನಗದು ವ್ಯವಹಾರದ ಬದಲು ಹೆಚ್ಚಾಗಿ ಡಿಜಿಟಲ್ ಪಾವತಿಯ ಕಡೆಗೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮೊಬೈಲ್ ಬ್ಯಾಂಕಿಂಗ್, ಇಂಟರ್‌ನೆಟ್ ಬ್ಯಾಂಕಿಂಗ್ ವ್ಯವಹಾರಕ್ಕೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಸೂಕ್ತ ದಾಖಲಾತಿಗಳನ್ನು ನೀಡಿದ್ರೆ ಮಾತ್ರವೇ ಹಣದ ವರ್ಗಾವಣೆ ಸಾಧ್ಯ. ಈ ಕಾರಣಕ್ಕೆ ಸರಕಾರ ಉತ್ತೇಜನವನ್ನು ನೀಡುತ್ತಿದೆ.
New rules for money transfer above Rs 50000 RBI has issued an order