ದೇವರಿಗೂ ಫ್ರೀ ವಿದ್ಯುತ್ : ರಾಜ್ಯ ಸರ್ಕಾರದ ಹೊಸ ಗ್ಯಾರಂಟಿ

ಈಗ ಜನರ ಬಳಿಕ ದೇವರಿಗೂ ಫ್ರೀ ಫ್ರೀ ಫ್ರೀ ಸೌಲಭ್ಯ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಯಶಸ್ವಿ ಯೋಜನೆ ಗೃಹಜ್ಯೋತಿಯನ್ನು ರಾಜ್ಯದ ಮುಜರಾಯಿ ದೇವಾಲಯಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಗೃಹಲಕ್ಷ್ಮೀ (Gruha Lakshmi Yojana), ಗೃಹಜ್ಯೋತಿ (Gruha Jyothi Yojana), ಶಕ್ತಿಯೋಜನೆ (Shakthi Yojana), ಅನ್ನಭಾಗ್ಯ ಯೋಜನೆಯಂತಹ (Anna Bhagya Yojana) ಗ್ಯಾರಂಟಿಗಳಿಂದ ಬೊಕ್ಕಸ ಬರಿದಾಗುತ್ತಿದೆ ಎಂಬ ಪ್ರತಿ ಪಕ್ಷಗಳ ಆರೋಪದ‌ ಮಧ್ಯೆಯೇ ಈಗ ಜನರ ಬಳಿಕ ದೇವರಿಗೂ ಫ್ರೀ ಫ್ರೀ ಫ್ರೀ ಸೌಲಭ್ಯ ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರದ ಯಶಸ್ವಿ ಯೋಜನೆ ಗೃಹಜ್ಯೋತಿಯನ್ನು ರಾಜ್ಯದ ಮುಜರಾಯಿ ದೇವಾಲಯಗಳಿಗೂ ವಿಸ್ತರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

Free Electricity for temples New Guarantee of Karnataka Government after Gruha jyothi Gruha Lakshmi Yojana
Image Credit to Original Source

ಈ ಬಗ್ಗೆ ರಾಜ್ಯ ಸರ್ಕಾರದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದು, ಮುಜರಾಯಿ ಇಲಾಖೆಯ ಸಿ ದರ್ಜೆಯ ದೇವಾಲಯಗಳನ್ನು ಗೃಹಜ್ಯೋತಿ ಅಡಿಯಲ್ಲಿ ತರಲು ಚಿಂತನೆ ನಡೆಸಿದೆ ಎಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರೋ ರಾಮಲಿಂಗಾ ರೆಡ್ಡಿ, ಗೃಹಜ್ಯೋತಿ ಯೋಜನೆಯಡಿಯಲ್ಲಿ ಒಂದೂವರೆ ಕೋಟಿ ಮನೆಗಳಿಗೆ ಉಚಿತ್ ವಿದ್ಯುತ್ ನೀಡ್ತಿದ್ದೇವೆ. ಇದರ ಜೊತೆಗೆ 5 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಸಿ ದರ್ಜೆಯ ದೇವಸ್ಥಾನಗಳಿಗೆ ಗೃಹಜ್ಯೋತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ.

ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಸ್ವತಃ ಮುಜರಾಯಿ ಸಚಿವರು ಹಾಗೂ ರಾಜ್ಯ ಧಾರ್ಮಿಕ ದತ್ತಿ ಪರಿಷತ್ ಅಧ್ಯಕ್ಷರೂ ಆಗಿರುವ ರಾಮಲಿಂಗಾ ರೆಡ್ಡಿ ಸಿಎಂ ಸಿದ್ಧರಾಮಯ್ಯನವರಿಗೆ ಮನವಿ ಪತ್ರ ರೆಡಿಮಾಡಿ ಕೊಟ್ಟಿದ್ದಾರಂತೆ. ರಾಜ್ಯದಲ್ಲಿ ಗೃಹಬಳಕೆಗೆ 200 ಯೂನಿಟ್ ಉಚಿತವಾಗಿ ನೀಡಲಾಗಿದೆ. ರಾಜ್ಯದ 34 ಸಾವಿರದ 160 ದೇವಸ್ಥಾನಗಳು ಸಿ ಗ್ರೇಡ್ ಹೊಂದಿವೆ.‌ ಇವುಗಳ ಆದಾಯ 5 ಲಕ್ಷಕ್ಕಿಂತ ಕಡಿಮೆ ಇದೆ‌. ಇಂತಹ ದೇವಸ್ಥಾನಗಳಿಗೆ ಗೃಹಜ್ಯೋತಿ ನೀಡುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ : ನಮ್ಮ ಮೆಟ್ರೋ ದಾಖಲೆ : ಒಂದೇ ದಿನ 7 ಲಕ್ಷ ಮಂದಿ ಪ್ರಯಾಣಿಕರಿಂದ ಪ್ರಯಾಣ

ಬಹುತೇಕ ಸಿ ದರ್ಜೆಯ ಮುಜರಾಯಿ ಇಲಾಖೆಯ ದೇವಸ್ಥಾನಗಳು ಗ್ರಾಮೀಣ ಭಾಗದಲ್ಲಿವೆ. ಹೀಗಾಗಿ ಅಲ್ಲಿ ಹೆಚ್ಚೇನು ವಿದ್ಯುತ್ ಬಳಕೆಯಾಗುತ್ತಿಲ್ಲ. ಹಾಗಾಗಿ ಗೃಹಜ್ಯೋತಿ ವ್ಯಾಪ್ತಿಗೆ ಈ ದೇವಸ್ಥಾನಗಳನ್ನು ತರಲು ತೀರ್ಮಾನಿಸಿದ್ದೇವೆ ಎಂದು ರೆಡ್ಡಿ ಮಾಹಿತಿ ನೀಡಿದ್ದಾರೆ. ಸರ್ಕಾರದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಗೃಹಜ್ಯೋತಿ ಅನ್ವಯ ರಾಜ್ಯದ ಜನರಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈಗ ಇದೇ ಯೋಜನೆಗೆ ದೇವಾಲಯಗಳನ್ನು ಸೇರಿಸಲು ಸಚಿವರು ಪ್ರಯತ್ನ ಆರಂಭಿಸಿದ್ದಾರೆ.

Free Electricity for temples New Guarantee of Karnataka Government after Gruha jyothi Gruha Lakshmi Yojana
Image Credit to Original Source

ಆದರೆ ಸರ್ಕಾರದ ಈ ನಡೆಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ. ರಾಜ್ಯದ ಜನರಿಗೆ ನೀಡಲು ವಿದ್ಯುತ್ ಕೊರತೆ ಇದೆ. ಹೀಗಿರುವಾಗಲೇ ಸರ್ಕಾರದ ಅಧೀನಕ್ಕೆ ಒಳಪಡುವ ಸಂಘ,ಸಂಸ್ಥೆಗಳಿಗೆ ಉಚಿತವಾಗಿ ವಿದ್ಯುತ್ ವಿತರಿಸುವ ಅಗತ್ಯವೇನಿದೆ ? ಸರ್ಕಾರ ಬಡವರಿಗೆ ಉಚಿತ ವಿದ್ಯುತ್‌ ವಿತರಿಸುವುದಾಗಿ ಹೇಳಿತ್ತು.

ಆದರೆ ಈಗ ಸರ್ಕಾರಿ ದೇವಾಲಯಗಳಿಂದಲೂ ವಿದ್ಯುತ್ ಬಿಲ್ ಪಡೆಯದಿರುವ ಕ್ರಮ ಸರಿಯಲ್ಲ ಎಂದಿದೆ‌. ಸದ್ಯ ರಾಜ್ಯ ವಿದ್ಯುತ್ ಕೊರತೆ ಎದುರಿಸುತ್ತಿದ್ದು, ರೈತರಿಗೆ ಬೆಳೆಗೆ ನೀರು ಹಾಯಿಸುವಷ್ಟು ಅಗತ್ಯ ವಿದ್ಯುತ್ ಗಾಗಿ ರೈತರು ಪರದಾಡುತ್ತಿದ್ದಾರೆ.

ಇದನ್ನೂ ಓದಿ : ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ : ಮತ್ತೊಂದು ಗುಡ್‌ನ್ಯೂಸ್‌ ಕೊಟ್ಟ ಸಿಎಂ ಸಿದ್ದರಾಮಯ್ಯ

ಈಗಾಗಲೇ ರಾಜ್ಯದ ಹಲವೆಡೆ ಉಚಿತ ವಿದ್ಯುತ್ ದುರ್ಬಳಕೆ ಆಗ್ತಿರೋ ಮಾಹಿತಿ ಬರ್ತಿದೆ . ಹೀಗಿರುವಾಗ ವಿದ್ಯುತ್ ಮಿತವ್ಯಯ ಹಾಗೂ ಅಗತ್ಯತೆಯ ಬಗ್ಗೆ ಮಾಹಿತಿ ನೀಡಬೇಕಾದ ಸರ್ಕಾರವೇ ಮತ್ತೆ ಫ್ರೀ ಕರೆಂಟ್ ಮಾಡೋ ಮೂಲಕ ಅನ್ನದಾತರ ಸಂಕಷ್ಟ ಹೆಚ್ಚಿಸಲಿದೆ. ಒಣಗುವ ಬೆಳೆಗೆ ನೀರುಣಿಸಲು ಪೂರಕವಾಗುವಂತೆ ರೈತರಿಗೆ ಇನ್ನಷ್ಟು ಹೆಚ್ಚು ಕೃಷಿ ಚಟುವಟಿಕೆಗೆ ಅನುವು ಮಾಡಿಕೊಡಬೇಕು.

ಇದನ್ನು ಹೊರತುಪಡಿಸಿ ದೇವರಿಗೆ ವಿದ್ಯುತ್ ಫ್ರೀ ಕೊಡಬೇಕಾಗ ಅಗತ್ಯವಿಲ್ಲ ಎಂದು ಜನಸಾಮಾನ್ಯರು ಟೀಕಿಸುತ್ತಿದ್ದಾರೆ‌.ಒಟ್ಟಿನಲ್ಲಿ ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ ಮಲ್ಲಿಗೆ ಅನ್ನೋ ಹಾಗೆ ರಾಜ್ಯ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಕೆಲ ದಿನಗಳ ಹಿಂದೆ ಅರ್ಚಕರಿಗೆ ಸಹಾಯಧನ ಘೋಷಿಸಿತ್ತು. ಆದರೆ ಈಗ ಫ್ರೀ ವಿದ್ಯುತ್ ನೀಡುವ ಕ್ರಮ ಸರಿಯಲ್ಲ ಎಂದು ಜನ ಟೀಕಿಸಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನಲ್ಲಿ 3 ದಿನ ವಿದ್ಯುತ್‌ ಕಡಿತ : ಯಾವ ಪ್ರದೇಶಗಳಲ್ಲಿ, ಯಾವ ದಿನ ಪವರ್‌ ಕಟ್‌, ಇಲ್ಲಿದೆ ಸಂಪೂರ್ಣ ಮಾಹಿತಿ

Free Electricity for temples New Guarantee of Karnataka Government after Gruha jyothi Gruha Lakshmi Yojana

Comments are closed.