GDP Estimate: ಜಿಡಿಪಿ ಶೇ 9.2 ಸಾಧ್ಯತೆ, ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿಯ ಅಂದಾಜು

ಬೆಂಗಳೂರು: ಭಾರತದ ಒಟ್ಟು ದೇಶೀಯ ಉತ್ಪನ್ನವು (ಜಿಡಿಪಿ-gross domestic product) ಮುಂದಿನ ಆರ್ಥಿಕ ವರ್ಷದಲ್ಲಿ (2022-23) ಶೇ 9.2ಕ್ಕೆ ತಲುಪಬಹುದೆಂದು ಹಾಗೂ ಕೋವಿಡ್‌ಗೂ ಮೊದಲಿನ ಜಿಡಿಪಿ ದರಕ್ಕಿಂತ ಶೇ 1.3ರ ಏರಿಕೆ ಕಾಣಬಹುದೆಂದು ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿಯು (NSO – National Statistical Office) ಶುಕ್ರವಾರ ಮುಂಗಡವಾಗಿ ಅಂದಾಜಿಸಿದೆ.

ಅನೇಕ ವಿಶ್ಲೇಷಕರು ಜಿಡಿಪಿ ಬೆಳವಣಿಗೆಯು ಶೇ 8.4 ರಿಂದ ಶೇ 9.5 ರವರಗೆ ಇರಲಿದೆಯೆಂದು ಈಗಾಗಲೇ ಅಂದಾಜಿಸಿದ್ದು ಸೆಂಟ್ರಲ್‌ ಬ್ಯಾಂಕ್‌ ಸಹ 2022ರ ಆರ್ಥಿಕ ವರ್ಷದ ಜಿಡಿಪಿಯು ಶೇ 9.5ರಷ್ಟು ಇರಲಿದೆಯೆಂದು ಅಂದಾಜಿಸಿದ್ದರೂ ರಾಷ್ಟ್ರೀಯ ಅಂಕಿ-ಅಂಶ ಕಚೇರಿ (NSO) ಸಂಸ್ಥೆಯು ಮಾತ್ರ ಇಂತಹ ಹೆಚ್ಚಿನ ದರದ ಘೋಷಣೆ ಮಾಡದೆ ಶೇ 9.2ರ ದರವನ್ನು ಅಂದಾಜಿಸುವ ಮೂಲಕ ಎಚ್ಚರಿಕೆ ನಡೆಯನ್ನು ಅನುಸರಿಸಿದೆ. ಕೆಲವು ವಿಶ್ಲೇಷಕರು ಈ ಆಂಕಿ-ಆಂಶವೂ ಸಹ ಇಳಿಕೆ ಕಾಣುವ ಸಾಧ್ಯತೆ ಹೆಚ್ಚಿದೆ ಎಂಬ ಆಭಿಪ್ರಾಯ ವ್ಯಕ್ತಪಡಿಸಿದ್ದು ಇದಕ್ಕೆ ಹೆಚ್ಚುತ್ತಿರುವ ಕೊರೋನಾ ಆತಂಕ ಹಾಗೂ ಅದರ ಪರಿಣಾಮವಾಗಿ ಉಂಟಾಗಬಹುದಾದ ಲಾಕ್‌ಡೌನ್‌ ತರಹದ ಪರಿಸ್ಥಿತಿಗಳೂ ಕಾರಣವಾಗಬಹುದು ಎಂದಿದ್ದಾರೆ. 

ವರ್ಷದ ಪ್ರಥಮಾರ್ಧದಲ್ಲಿ ಪೂರಕ ವಾತಾವರಣದಲ್ಲಿ ಆರ್ಥಿಕತೆಯು ಶೇ 13.7ರ ಬೆಳವಣಿಗೆ ಕಂಡಿದ್ದು ದ್ವಿತೀಯಾರ್ಧದಲ್ಲಿ ಅಂತಹ ವಾತಾವರಣದಲ್ಲಿನ ಕೊರತೆಯಿಂದಾಗಿ ಕೇವಲ ಶೇ 5.6ರ ಬೆಳವಣಿಗೆಯನ್ನು ಅಂದಾಜಿಸಲಾಗಿದೆ. ಮುಖ್ಯವಾಗಿ, ನಿಗದಿಪಡಿಸಲಾದ ನಾಮಮಾತ್ರದ ಜಿಡಿಪಿ ಕುಸಿತದ ಅಂಕಿ-ಅಂಶಗಳ ಎದುರು 2022ರ ಆರ್ಥಿಕವರ್ಷದ ಮುಂಗಡಪತ್ರದ ಅಂದಾಜಿನಂತೆ ಜಿಡಿಪಿ ದರದಲ್ಲಿ ಶೇ 4.2ರ ಏರಿಕೆ ಕಾಣಲಿದೆ. ಆರ್ಥಿಕ ಕೊರತೆಯನ್ನು ಸಂಪೂರ್ಣ ಪದವೆಂದು ಭಾವಿಸಿ ಮುಂಗಡಪತ್ರ (15.07 ಲಕ್ಷ ಕೋಟಿ ರೂಪಾಯಿಗಳು)ವನ್ನೇ ಜಿಡಿಪಿ (GDP)ಯ ಭಿನ್ನರಾಶಿ (fraction) ಎಂದು ಪರಿಗಣಿಸಿದಾಗ ಮುಂಗಡಪತ್ರದಲ್ಲಿ ಅಂದಾಜಿಸಲಾದ ಶೇ 6.8ರ ಎದುರು ಕೇವಲ ಶೇ 6.5ರ ಅಲ್ಪಪ್ರಮಾಣದ ಕುಸಿತ ಕಾಣಲಿದೆ.

ದೃಢವಾದ ತೆರಿಗೆವಸೂಲಿ ವ್ಯವಸ್ಥೆಯು (ಮುಂಗಡಪತ್ರದ ಅಂದಾಜಿಗಿಂತಲೂ ಸುಮಾರು 2 ಲಕ್ಷಕೋಟಿಗೂ ಹೆಚ್ಚಿನ) ಎಫ್‌ಸಿಐ (FCI)ಗೆ ನೀಡಬೇಕಾಗಿರುವ ಸಂಪೂರ್ಣ ಬಾಕಿ ಪಾವತಿ ಹಾಗೂ ಗೊಬ್ಬರದ ಸಹಾಯಧನದಂತಹ ಅತಿ ಹೆಚ್ಚಿನ ವೆಚ್ಚದ ಬದ್ಧತೆಯನ್ನು ಪೂರೈಸಿದರೂ ಸಹ ಆರ್ಥಿಕ ಕೊರತೆಯು ಮುಂಗಡಪತ್ರದಲ್ಲಿ ಅಂದಾಜಿಸಲಾದಷ್ಟೇ ಇರಲಿದೆ.

ಆದರೂ, ಖಾಸಗಿ ಅಂತಿಮ ಬಳಕೆ ವೆಚ್ಚದ ಸಾಮರ್ಥ್ಯವು (PFCE-private final consumption expenditure) ಕೊರೊನಾದಿಂದ ಉದ್ಭವಿಸಿರುವ ಪರಿಸ್ಥಿತಿಯಿಂದಾಗಿ ಸತತವಾಗಿ ನಿರಾಶೆಗೊಳಿಸುತ್ತಿದ್ದು ಸಾರ್ವಜಿಕರು ತಮ್ಮ ವಿವೇಚನೆಯಿಂದ ಖರ್ಚುಮಾಡಬಲ್ಲ ಸಾಮರ್ಥ್ಯದಲ್ಲಿ ಕೊರತೆಯುಂಟಾಗಿದೆ, ಈ ಸಾಮರ್ಥ್ಯದ ಕೊರತೆಯು ಕೋವಿಡ್‌ಪೂರ್ವ ಪರಿಸ್ಥಿತಿಗಿಂತ ಶೇಕಡಾ 2.9ರಷ್ಟಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: top 5 financial resolutions : ಹೊಸವರ್ಷದಲ್ಲಿ ನಿಮಗೆ ಲಾಭತರಲಿರುವ 5 ಆರ್ಥಿಕ ನಿರ್ಧಾರಗಳು

ಇದನ್ನೂ ಓದಿ:Good News : ರಾಜ್ಯ ಸರಕಾರಿ ನೌಕರರಿಗೆ ಗುಡ್‌ನ್ಯೂಸ್‌ : ಹಬ್ಬದ ಮುಂಗಡ ಮೊತ್ತ10ರಿಂದ 25 ಸಾವಿರಕ್ಕೆ ಹೆಚ್ಚಳ !

(NSO estimates the GDP to be at 9.2% for next financial year)

Comments are closed.