FIR Filed Against Hairdresser Jawed Habib: ಮಹಿಳೆಯ ತಲೆಗೆ ಉಗಿದು ಕೂದಲು ಕತ್ತರಿಸಿದ ಕೇಶವಿನ್ಯಾಸಕಾರನ ವಿರುದ್ಧ ಕೇಸ್!

ಲಖನೌ: ಬ್ಯೂಟಿಷಿಯನ್(Beautician)ಆದ ಮಹಿಳೆಯ ತಲೆಗೆ ಉಗಿದು ಕೂದಲು ಕತ್ತರಿಸಿದ ಆರೋಪದ ಮೇಲೆ ಖ್ಯಾತ ಕೇಶ ವಿನ್ಯಾಸಕಾರ (Jawed Habib FIR Filed) ಜಾವೆದ್ ಹಬೀಬ್ (Jawed Habib) ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಉತ್ತರ ಪ್ರದೇಶದ ಮುಜಾಫರನಗರದಲ್ಲಿ ಕೇಶ ವಿನ್ಯಾಸಕ್ಕೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಬ್ಯೂಟಿಷಿಯನ್ ಮಹಿಳೆಯೊಬ್ಬರ ಕೂದಲು ಕಟ್ ಮಾಡುವ ಪ್ರಾತ್ಯಕ್ಷಿಕೆ ವೇಳೆ ಆಕೆಯ ತಲೆಗೆ ಉಗಿದ ಖ್ಯಾತ ಕೇಶ ವಿನ್ಯಾಸಕಾರ ಜಾವೆದ್ ಹಬೀಬ್(Jawed Habib) ವಿರುದ್ಧ ಪ್ರಕರಣ ದಾಖಲಾಗಿದೆ. ಈ ಮಧ್ಯೆ, ರಾಷ್ಟ್ರೀಯ ಮಹಿಳಾ ಆಯೋಗ (NWC) ಕೂಡ ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಉತ್ತರ ಪ್ರದೇಶ ಪೊಲೀಸರಿಗೆ (Uttar Pradesh Police) ಸೂಚಿಸಿದೆ.

ಮಹಿಳೆಯ ಮೇಲೆ ಹಲ್ಲೆ ಮತ್ತು ಆಕೆಯ ಗೌರವಕ್ಕೆ ಧಕ್ಕೆಯುಂಟು ಮಾಡಿದ ಆರೋಪದ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 355 (ಹಲ್ಲೆ ಅಥವಾ ಧಕ್ಕೆ ತರುವಂತಹ ಕ್ರಿಮಿನಲ್ ಉದ್ದೇಶ) ಮತ್ತು 504 (ಅಗೌರವ) ಪ್ರಕಾರ ಎಫ್ಐಆರ್(FIR) ದರ್ಜುಗೊಂಡಿದೆ. ಹೋಟೆಲ್‌ವೊಂದರಲ್ಲಿ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಕಾರ್ಯಕ್ರಮಕ್ಕೆ ಜಾವೆದ್ ಹಬೀಬ್‌ರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ವೇದಿಕೆಯಲ್ಲಿ ಹೇರ್ ಕಟ್ ಪ್ರಾತ್ಯಕ್ಷಿಕೆ ನೀಡುವಾಗ ಅವರು, ಬ್ಯೂಟಿಷಿಯನ್ ಮಹಿಳೆಯ ತಲೆಗೆ ಉಗಿದು ಕೇಶ ಕತ್ತರಿಸಿದ ವಿಡಿಯೋ ವೈರಲ್ ಆಗಿದೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಹಬೀಬ್, ಹೇರ್‌ ಕಟ್ ಮಾಡುವಾಗ ನೀರು ಸಿಗದಿದ್ದರೆ ಉಗಿಯುವುದು ಸಾಮಾನ್ಯ ಎಂದು ತಮ್ಮ ಕೃತ್ಯವನ್ನು ಸರ್ಮಥಿಸಿಕೊಂಡಿದ್ದಾರೆ. ಇದನ್ನು ಖಂಡಿಸಿರುವ ದೂರದಾರ ಮಹಿಳೆ, “ನಾನೂ ಬ್ಯೂಟಿಪಾರ್ಲರ್ ನಡೆಸುತ್ತೇನೆ. ಆದ್ದರಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಕೇಶ ವಿನ್ಯಾಸದ ಕಟ್ಟಿಂಗ್‌ನ ಪ್ರದರ್ಶನಕ್ಕಾಗಿ ನನ್ನನ್ನು ವೇದಿಕೆ ಕರೆಯಲಾಯಿತು. ಖ್ಯಾತ ವಿನ್ಯಾಸಕಾರ ಹಬೀಬ್ ನನಗೆ ಕಟ್ಟಿಂಗ್ ಮಾಡುತ್ತಾರೆಂದು ಬಹಳ ಖುಷಿಯಾದೆ. ಆದರೆ, ಹಬೀಬ್ ನನ್ನೊಂದಿಗೆ ಅನುಚಿತವಾಗಿ ನಡೆದುಕೊಂಡರು. ನೀರು ಸಿಗಲಿಲ್ಲವೆಂದರೆ ಉಗಿಯಬಹುದು ಎಂದು ಹೇಳಿ ಉಗಿದೇ ಬಿಟ್ಟರು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: SC On NEET-PG Admissions For 2021-22: ಸ್ನಾತಕೋತ್ತರ ವೈದ್ಯಕೀಯ ಪ್ರವೇಶಾತಿ: ಒಬಿಸಿ, ಇಡಬ್ಲ್ಯೂಎಸ್‌ ಮೀಸಲಾತಿ ಎತ್ತಿಹಿಡಿದ ಸುಪ್ರೀಂಕೋರ್ಟ್

(FIR Filed Against Hairdresser Jawed Habib he said sorry)

Comments are closed.