Summons to God!: ದೇವರಿಗೇ ಸಮನ್ಸ್ ಜಾರಿ ಮಾಡಿದ ತಮಿಳುನಾಡಿನ ಕುಂಭಕೋಣಂನ ಕೋರ್ಟ್!

ಚೆನ್ನೈ: ಇದೊಂದು ವಿಶಿಷ್ಟ ಪ್ರಕರಣ. ದೇವರನ್ನೇ(God) ನ್ಯಾಯಾಲಯಕ್ಕೆ (Court) ಬರುವಂತೆ ಆಜ್ಞೆ(Order) ಮಾಡಿದ ಕೋರ್ಟ್ ಈಗ ಟ್ರೋಲ್ ಆಗುತ್ತಿದೆ. ತಮಿಳುನಾಡಿ(Tamil Nadu)ನ ತಿರುಪುರ ಜಿಲ್ಲೆಯ ಸಿವಿರಿಪಾಲಯಂನ ಪರಶಿವನ್ ಸ್ವಾಮಿ ದೇವರಿಗೇ ಕುಂಭಕೋಣಂನ ನ್ಯಾಯಾಲಯವೊಂದು ಜನವರಿ 6ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ (summons) ನೀಡಿದ್ದು ಬೆಳಕಿಗೆ ಬಂದಿದೆ.

ಮೂಲ ವಿಗ್ರಹ ಕಳುವಿನ ಪ್ರಕರಣ ವಿಚಾರಣೆ ನಡೆಸುತ್ತಿದ್ದ ಕುಂಭಕೋಣಂನ ನ್ಯಾಯಾಲಯ, ವಿಗ್ರಹವನ್ನು ಪರಿಶೀಲಿಸಲು ದೇವರಿಗೇ ಸಮನ್ಸ್ ಜಾರಿ ಮಾಡಿತ್ತು. ಪುನರ್ ಪ್ರತಿಷ್ಠಾಪನೆಗೊಂಡಿದ್ದ ಮೂಲ ವಿಗ್ರಹವನ್ನು ಪೀಠದಿಂದ ಎತ್ತಿ ಹಾಜರು ಮಾಡುವಂತೆ ಸೂಚಿಸಿತ್ತು. ಈ ವಿಷಯ ಈಗ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ಜಸ್ಟೀಸ್ ಆರ್. ಸುರೇಶ್ ಕುಮಾರ್ ಅವರು ಅಧೀನ ನ್ಯಾಲಯಾಯದ ಈ ಕ್ರಮದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಸಮನ್ಸ್‌ಗೆ ತಡೆಯಾಜ್ಞೆಯನ್ನು ಕೊಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಲು ನಾಲ್ಕುವಾರಗಳ ಕಾಲಾವಕಾಶವನ್ನೂ ನೀಡಿದ್ದಾರೆ.

ಹಿನ್ನೆಲೆ: ಸಿವಿರಿಪಾಲಯಂನ ಪರಶಿವನ್ ದೇವಸ್ಥಾನದ ಪುರಾತನ ವಿಗ್ರಹ ಕಳುವಾಗಿತ್ತು. ವಿಗ್ರವನ್ನು ಪತ್ತೆ ಹಚ್ಚಿದ ಪೊಲೀಸರು, ವಿಗ್ರಹ ಕಳವು ಪ್ರಕರಣದ ವಿಚಾರಣೆ ನಡೆಸುವ ವಿಶೇಷ ಕೋರ್ಟ್‌ಗೆ ಅದನ್ನು ಹಾಜರುಪಡಿಸಿದ್ದರು. ಬಳಿಕ ಈ ವಿಗ್ರಹವನ್ನು ದೇವಸ್ಥಾನದ ಆಡಳಿತ ಮಂಡಳಿಗೆ ಕೋರ್ಟ್ ಹಸ್ತಾಂತರಿಸಿತ್ತು. ವಿಗ್ರಹ ಪುನರ್ ಪ್ರತಿಷ್ಠಾಪನೆ ನಡೆಸಿದ ನಂತರ ನಿತ್ಯ ಪೂಜೆ ನಡೆಯುತ್ತಿದೆ. ಈ ಮಧ್ಯೆ, ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ, ಈ ವಿಗ್ರಹವನ್ನು ಮತ್ತೆ ಕೋರ್ಟ್ ಎದುರು ಜನವರಿ 6ರಂದು ಹಾಜರುಪಡಿಸಲು ಆದೇಶಿಸಿದ್ದರು.

ಇದನ್ನೂ ಓದಿ: PM Security Lapse : ಪ್ರಧಾನಿ ಭದ್ರತಾ ಲೋಪ: ವಿರಳಾತಿವಿರಳ ಪ್ರಕರಣವೆಂದ ಸುಪ್ರೀಂಕೋರ್ಟ್

Kumbakonam Court ordered Summons to God

Comments are closed.