Pan – Aadhar Link Status : ಕೇಂದ್ರ ಸರಕಾರದಿಂದ ಅಧಿಸೂಚನೆ : ಇದನ್ನು ಮಾಡದಿದ್ದರೆ, 13 ಕೋಟಿ ಪ್ಯಾನ್ ಕಾರ್ಡ್ ರದ್ದು

ನವದೆಹಲಿ : ಇತ್ತೀಚೆಗೆ ಪಾನ್‌ ಕಾರ್ಡ್‌ ಕೂಡ ಹೆಚ್ಚಿನ ವ್ಯವಹಾರಗಳಿಗೆ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದೀಗ ಪಾನ್ ಕಾರ್ಡ್ ಹೊಂದಿರುವ ಕೋಟ್ಯಂತರ ಜನರಿಗೆ ಸಮಸ್ಯೆ ಎದುರಾಗಿದೆ. ನೀವು ಕೂಡ ಪ್ಯಾನ್ ಕಾರ್ಡ್ (Pan – Aadhar Link Status) ಬಳಸುತ್ತಿದ್ದರೆ, ಸರಕಾರದಿಂದ ಹೊರಡಿಸಲಾದ ಅಧಿಸೂಚನೆ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಅಧಿಸೂಚನೆಯ ಪ್ರಕಾರ, 13 ಕೋಟಿಗೂ ಹೆಚ್ಚು ಜನರ ಪ್ಯಾನ್ ಕಾರ್ಡ್‌ಗಳನ್ನು ಸರಕಾರವು ರದ್ದುಗೊಳಿಸಬಹುದು. ಹಾಗಾಗಿ ನೀವು ನಿಮ್ಮ ಪಾನ್‌ ಕಾರ್ಡ್‌ನ್ನು ಆಧಾರ್‌ನೊಂದಿಗೆ ಲಿಂಕ್‌ ಮಾಡದಿದ್ದರೆ, ಈ ಕೂಡಲೇ ಮಾಡಬೇಕಾಗಿದೆ. ಯಾಕೆಂದರೆ ಪಾನ್‌ ಕಾರ್ಡ್‌ನ್ನು ಆಧಾರ ಲಿಂಕ್‌ ಮಾಡದಿದ್ದಲ್ಲಿ, ಅದನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ 9 (CBDT) 61 ಕೋಟಿ ಪ್ಯಾನ್ ಕಾರ್ಡ್ ಬಳಕೆದಾರರಲ್ಲಿ 48 ಕೋಟಿ ಜನರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಿದ್ದಾರೆ ಎಂದು ತಿಳಿಸಿದೆ. ಅದೇ ಸಮಯದಲ್ಲಿ, 13 ಕೋಟಿ ಜನರು ಇನ್ನೂ ತಮ್ಮ ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಿರುವುದಿಲ್ಲ. ಹಾಗಾಗಿ ಇವರುಗಳು ಮಾರ್ಚ್ 31 ರೊಳಗೆ ಪಾನ್‌ನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ವ್ಯಾಪಾರ ಮತ್ತು ತೆರಿಗೆ ಸಂಬಂಧಿತ ಚಟುವಟಿಕೆಗಳಲ್ಲಿ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಸಿಬಿಡಿಟಿ ಮಾಹಿತಿ ನೀಡಿದೆ.

ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ನಿತಿನ್ ಗುಪ್ತಾ ಅವರು ಮಾಧ್ಯಮಗಳೊಂದಿಗೆ ಸಂವಾದದಲ್ಲಿ ಈ ಮಾಹಿತಿ ನೀಡಿದ್ದಾರೆ. ಇನ್ನೂ ಹಲವಾರು ಕೋಟಿ ಪ್ಯಾನ್‌ಗಳನ್ನು ಆಧಾರ್‌ಗೆ ಲಿಂಕ್ ಮಾಡಲಾಗಿಲ್ಲ, ಆದರೆ ಮಾರ್ಚ್ 31 ರ ಅಂತ್ಯದೊಳಗೆ ಈ ಕೆಲಸವೂ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ಹೇಳಿದರು. ಕೇಂದ್ರ ಸರಕಾರವು ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ ಎಂದು ತಿಳಿಸಿದ್ದಾರೆ.

ಇದಕ್ಕಾಗಿ, ಮಾರ್ಚ್ 31, 2023 ರ ಗಡುವನ್ನು ನಿಗದಿಪಡಿಸಿ, ಆಧಾರ್‌ಗೆ ಲಿಂಕ್ ಮಾಡದ ವೈಯಕ್ತಿಕ ಪ್ಯಾನ್‌ಗಳನ್ನು ಈ ದಿನಾಂಕದ ನಂತರ ನಿಷ್ಕ್ರಿಯಗೊಳಿಸಲಾಗುವುದು ಎಂದು ಹೇಳಲಾಗಿದೆ. ಇದರೊಂದಿಗೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು ಪ್ರಸ್ತುತ ಸಮಯದಿಂದ ಮಾರ್ಚ್ 31 ರವರೆಗೆ 1,000 ರೂಪಾಯಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಎಂದು ಸರಕಾರ ತಿಳಿಸಿದೆ.

ಇದನ್ನೂ ಓದಿ : ರೈಲು ಪ್ರಯಾಣದ ಸಮಯದಲ್ಲಿ ನಿಮ್ಮ ಆಹಾರವನ್ನು ವಾಟ್ಸಪ್ ಮೂಲಕ ಆರ್ಡರ್ ಮಾಡಿ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ಇದನ್ನೂ ಓದಿ : Provident Fund Alert : ನೀವು ಹಳೆಯ ಇಪಿಎಫ್‌ ಖಾತೆಯಿಂದ ಹೊಸ ಕಂಪನಿಗೆ ಹೇಗೆ ವರ್ಗಾಯಿಸುವುದು ಎಂದು ಯೋಚಿಸುದ್ದೀರಾ ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಇದನ್ನೂ ಓದಿ : Lic Whatsapp Services : ಪಾಲಿಸಿದಾರರ ಗಮನಕ್ಕೆ : ಎಲ್‌ಐಸಿಯಿಂದ ವಾಟ್ಸಪ್‌ ಸೇವೆ ಕುಳಿತಲ್ಲೇ ಎಷ್ಟೆಲ್ಲಾ ಸೌಲಭ್ಯ!

ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡುವ ಕುರಿತು ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಲಾಗಿದ್ದು, ನಾವು ಈ ಗಡುವನ್ನು ಹಲವಾರು ಬಾರಿ ವಿಸ್ತರಿಸಿದ್ದೇವೆ ಎಂದು CBDT ಮುಖ್ಯಸ್ಥರು ಹೇಳಿದ್ದಾರೆ. ನಿಗದಿತ ಸಮಯದೊಳಗೆ ಆಧಾರ್ ಅನ್ನು ಪ್ಯಾನ್‌ಗೆ ಲಿಂಕ್ ಮಾಡದಿದ್ದರೆ, ಮಾರ್ಚ್ ನಂತರ ಅವರ ಪ್ಯಾನ್ ಮಾನ್ಯವಾಗದ ಕಾರಣ ಆ ಹೋಲ್ಡರ್ ತೆರಿಗೆ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದೆ.

Pan-Aadhar Link Status: Notification from Central Government: If this is not done, 13 crore PAN cards will be cancelled

Comments are closed.