Doctor was shot dead: ಹಾಡಹಗಲೇ ವೈದ್ಯನನ್ನು ಗುಂಡಿಕ್ಕಿ ಹತ್ಯೆ

ಉತ್ತರ ಪ್ರದೇಶ: (Doctor was shot dead) ಹಾಡಹಗಲೇ ದುಷ್ಕರ್ಮಿಗಳು ಕರ್ತವ್ಯ ನಿರತ ವೈದ್ಯನೊಬ್ಬನನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಗಾಜಿಯಾಬಾದ್‌ ನಲ್ಲಿ ನಡೆದಿದೆ. ತಮ್ಮ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾಗ ಈ ಘಟನೆ ನಡೆದಿದ್ದು, ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಡಾಕ್ಟರ್ ಶಂಶಾದ್ (40 ವರ್ಷ) ಹತ್ಯೆಗೊಳಗಾದ ವೈದ್ಯರು.

ಗಾಜಿಯಾಬಾದ್‌ ನ ತಮ್ಮ ಕ್ಲಿನಿಕ್‌ ನಲ್ಲಿ ಕರ್ತವ್ಯ ನಿರತರಾಗಿದ್ದ ಸಮಯದಲ್ಲಿ ಕೆಲವು ದುಷ್ಕರ್ಮಿಗಳು ಕ್ಲಿನಿಕ್‌ಗೆ ನುಗ್ಗಿ ಡಾಕ್ಟರ್ ಶಂಶಾದ್ (40) ಮೇಲೆ ಎರಡು ಬಾರಿ ಗುಂಡು ಹಾರಿಸಿದ್ದಾರೆ. ವೈದ್ಯರಿಗೆ ಗುಂಡು ಹಾರಿಸಿ ಬೈಕ್‌ ನಲ್ಲಿ ಬಂದಿದ್ದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಇದರಿಂದ ಗಾಯಗೊಂಡ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಆಸ್ಪತ್ರೆಯಲ್ಲಿ ಚಿಕಿತ್ಸೆಗೂ ಮೊದಲೇ ಸಾವನ್ನಪ್ಪಿದ್ದಾರೆ. ಮುರಾದನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮಾಹಿತಿ ಪಡೆದ ಗ್ರಾಮಾಂತರ ಡಿಸಿಪಿ ರವಿಕುಮಾರ್, ಎಸಿಪಿ ನಿಮಿಷ್ ಪಾಟೀಲ್ ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಡಿಸಿಪಿ ರವಿಕುಮಾರ್ ಪ್ರಕಾರ, ಬೈಕ್‌ನಲ್ಲಿ ಕ್ಲಿನಿಕ್‌ಗೆ ಆಗಮಿಸಿದ ದುಷ್ಕರ್ಮಿಗಳು ಶಂಶಾದ್‌ಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮುರಾದನಗರ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನೋಯ್ಡಾದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟ: ನವಜಾತ ಶಿಶು ಸೇರಿದಂತೆ 2 ಮಕ್ಕಳು ಸಾವು

ಇದನ್ನೂ ಓದಿ : LPG Sylinder blast: ನೋಯ್ಡಾದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟ: ನವಜಾತ ಶಿಶು ಸೇರಿದಂತೆ 2 ಮಕ್ಕಳು ಸಾವು

ನೋಯ್ಡಾದ ಮೊದಲನೆಯ ಹಂತದಲ್ಲಿರುವ ಡಿ -221 ಸೆಕ್ಟರ್ 8 ಗುಡಿಸಲಿನಲ್ಲಿ ಏಕಾಏಕಿ ಎಲ್‌ ಪಿಜಿ ಸಿಲಿಂಡರ್‌ ಸ್ಫೋಟಗೊಂಡಿದ್ದು, ಕ್ಷಣದಲ್ಲೇ ಗುಡಿಸಲಿಗೆ ಬೆಂಕಿ ಆವರಿಸಿಕೊಂಡಿದೆ. ಕೂಡಲೇ ಬೆಂಕಿ ಅವಘಡದ ಬಗ್ಗೆ ಪೊಲೀಸರಿಗೆ ಕರೆ ಬಂದಿದ್ದು, ಕೂಡಲೇ ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳು ದೌಡಾಯಿಸಿವೆ. ಬೆಂಕಿ ನಂದಿಸುವ ಕಾರ್ಯ ನಡೆದಿದ್ದು, ಅಪಘಾತ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲೇ ಬೆಂಕಿಯನ್ನು ಹತೋಟಿಗೆ ತರಲಾಯಿತು. ಘಟನೆಯಲ್ಲಿ ಮೂರು ಮಕ್ಕಳು ಸಾವನ್ನಪ್ಪಿದ್ದು, ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Doctor was shot dead: A doctor was shot dead in broad daylight

Comments are closed.