Kambala racer committed suicide: ಕೆಲಸ ಕಳೆದುಕೊಂಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ಕಂಬಳ ಓಟಗಾರ

ಉಡುಪಿ: (Kambala racer committed suicide) ಕೋರ್ಟ್‌ ಪ್ರೋಸೆಸ್ ಹುದ್ದೆಯಿಂದ ಅಮಾನತುಗೊಳಿಸಿದ್ದಕ್ಕೆ ಮನನೊಂದು ಕಂಬಳದ ಯುವ ಓಟಗಾರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರೂರು ಟೋಲ್‌ ಗೇಟ್‌ ಬಳಿ ನಡೆದಿದೆ. ಕಂಬಳದ ಯುವ ಓಟಗಾರ ಸುರೇಶ್‌ ಕಡಿನತಾರು (37 ವರ್ಷ) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಸುರೇಶ್‌ ಕಂಬಳದ ಪ್ರೋತ್ಸಾಹಕ, ಸಂಘಟಕ, ಕಂಬಳದ ಹಗ್ಗದ ವಿಭಾಗದ ಓಟಗಾರರಾಗಿದ್ದರು. ಅಲ್ಲದೇ ಇತ್ತೀಚೆಗೆ ಕಂಬಳದಲ್ಲಿ ಓಟದ ಮಾಪನ ಓಡಿಸುವ ಸುಧಾರಿತ ಸೆನ್ಸಾರ್‌ ಯಂತ್ರವನ್ನು ನಿರ್ವಹಿಸುತ್ತಿದ್ದರು, ಕ್ರೀಯಾಶೀಲ ವ್ಯಕ್ತಿಯಾಗಿದ್ದ ಸುರೇಶ್‌ ಸ್ನೇಹಜೀವಿಯಾಗಿ ಎಲ್ಲರಲ್ಲೂ ಗುರುತಿಸಿಕೊಂಡಿದ್ದರು. ಸುರೇಶ್‌ ಪೂಜಾರಿ ಅವರ ವಿರುದ್ದ ಕಳೆದ ವರ್ಷ ವ್ಯಕ್ತಿಯೊಬ್ಬರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಸುರೇಶ್‌ ನಿರ್ವಹಿಸುತ್ತಿದ್ದ ಕೋರ್ಟ್‌ ಪ್ರೋಸೆಸ್‌ ಕೆಲಸದಿಂದ ಅಮಾನತು ಮಾಡಲಾಗಿದ್ದು, ಈವರೆಗೆ ಮತ್ತೆ ಕೆಲಸಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ಕೆಲಸ ಹುಡುಕುತ್ತಾ ನಿತ್ಯವೂ ಅಲೆದಾಡುತ್ತಿದ್ದರು. ಕೆಲಸವಿಲ್ಲದೇ ಚಿಂತೆಯಲ್ಲಿ ಮುಳುಗಿದ್ದರು ಎನ್ನಲಾಗಿದೆ.

ಶಿರೂರು ಟೋಲ್‌ ಗೇಟ್‌ ಬಳಿಯ ನಿವಾಸಿಯಾಗಿದ್ದ ಸುರೇಶ್‌ ತನ್ನ ಪತ್ನಿ ಮನೆಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಮಲಗಿ ಸಂಜೆ ಮನೆಯಿಂದ ಹೊರಬಂದಿದ್ದು, ಬಳಿಕ ಪತ್ನಿಗೆ ಸಂದೇಶವನ್ನು ಕಳುಹಿಸಿದ್ದಾರೆ. ” ಸಾರಿ, ನನ್ನ ಸಾವಿಗೆ ಯಾರು ಕಾರಣರಲ್ಲ. ನನ್ನ ಮನೆಯವರು ನಿನಗೆ ರಗಳೆ ಮಾಡಬಹುದು, ಅವರಿಗೆಲ್ಲ ಈ ಸಂದೇಶ ತೋರಿಸು. ನನಗೆ ಕೆಲಸ ಆಗಲಿಲ್ಲ. ಅದೇ ತಲೆಬಿಸಿಯಲ್ಲಿ ತಪ್ಪು ಮಾಡುತ್ತಿದ್ದೇನೆ. ನನ್ನಿಂದ ಈ ತರಹ ಹೇಡಿಯಾಗಿ ಬದುಕಲು ಆಗುವುದಿಲ್ಲ. ನಾನು ಸಾಯುತ್ತಿದ್ದೇನೆ. ಗೇರು ಮರಕ್ಕೆ ನೇಣು ಹಾಕಿಕೊಳ್ಳುತ್ತಿದ್ದೇನೆ. ಬೇರೆ ಎಲ್ಲೂ ನನ್ನನ್ನು ಹುಡುಕುವುದು ಬೇಡ” ಎಂದು ಮೆಸೇಜ್‌ ಬರೆದು ಪತ್ನಿಗೆ ಸಂದೇಶ ಕಳುಹಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : Dakshina Kannada District Football League : ದಕ್ಷಿಣ ಕನ್ನಡ ಜಿಲ್ಲಾ ಫುಟ್ಬಾಲ್ ಲೀಗ್ : ಜಯಭೇರಿ ಸಾಧಿಸಿದ ಯೇನಪೋಯ, ಯುನೈಟೆಡ್ ತಂಡ

ಸಂದೇಶ ತಲುಪಿದ ತಕ್ಷಣದಲ್ಲೇ ಪತ್ನಿ ಹಾಗೂ ಸಂಬಂಧಿಕರು ಹುಡುಕಾಟ ಆರಂಭಿಸಿದ್ದು, ಟೋಲ್‌ ಗೇಟ್‌ ಹಿಂಬದಿಯೆ ಸರಕಾರಿ ಹಾಡಿಯಲ್ಲಿನ ಸುರೇಶ್‌ ಮೃತದೇಹ ಗೇರು ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಲಸಕ್ಕೆಂದು ನಿತ್ಯ ಅಲೆದಾಟ ಮಾಡುತ್ತಿದ್ದ ಸುರೇಶ್‌ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kambala racer committed suicide: A Kambala racer committed suicide because of losing his job

Comments are closed.