Delhi’s Mohalla clinic : ದೆಹಲಿ ಮೊಹಲ್ಲಾ ಕ್ಲಿನಿಕ್​ನಲ್ಲಿ ಔಷಧಿ ಸೇವಿಸಿದ ಮೂವರು ಮಕ್ಕಳು ಸಾವು..!

ರಾಜ್ಯದ ಜನತೆಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಅರವಿಂದ ಕೇಜ್ರಿವಾಲ್​ ನೇತೃತ್ವದ ಆಪ್​ ಸರ್ಕಾರವು ಮೊಹಲ್ಲಾ ಕ್ಲಿನಿಕ್​​ನ್ನು ದೆಹಲಿ (Delhi’s Mohalla clinic) ರಾಜ್ಯದಾದ್ಯಂತ ತೆರೆದಿದೆ. ಆದರೆ ಇದೇ ಮೊಹಲ್ಲಾ ಕ್ಲಿನಿಕ್​ ಒಂದರಲ್ಲಿ ನೀಡಲಾದ ಕಫ್​ ಸಿರಪ್​ ಸೇವಿಸಿದ ಪರಿಣಾಮ ಮೂವರು ಮಕ್ಕಳು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಈ ಸಂಬಂಧ ತನಿಖೆ ನಡೆಸುವಂತೆ ಆರೋಗ್ಯ ಇಲಾಖೆ ಆದೇಶ ನೀಡಿದೆ. ಮೂವರು ಮಕ್ಕಳು ಮೊಹಲ್ಲಾ ಕ್ಲಿನಿಕ್​ನಲ್ಲಿ ಸೂಚಿಸಲಾದ ಸಿರಪ್​ ಸೇವಿಸಿದ ತಕ್ಷಣವೇ ಸಾವನ್ನಪ್ಪಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.

ಒಟ್ಟು 16 ಮಕ್ಕಳನ್ನು ಕಲಾವತಿ ಸರಣ್​ ಮಕ್ಕಳ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಇದರಲ್ಲಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿರುವ ಕಲಾವತಿ ಸರಣ್​ ಮಕ್ಕಳ ಆಸ್ಪತ್ರೆಯಲ್ಲಿ 16 ಡೆಕ್ಸ್ಟ್ರೋಮೆಥೋರ್ಫಾನ್ ವಿಷದ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಮೂವರು ಮಕ್ಕಳು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಎಲ್ಲಾ ಮಕ್ಕಳಿಗೆ ದೆಹಲಿ ರಾಜ್ಯ ಸರ್ಕಾರ ನಡೆಸುತ್ತಿರುವ ಮೊಹಲ್ಲಾ ಕ್ಲಿನಿಕ್​ನಲ್ಲಿ ಡೆಕ್ಸ್ಟ್ರೋಮೆಥೋರ್ಫಾನ್ ಔಷಧಿ ಸೇವಿಸುವಂತೆ ವೈದ್ಯರು ಸೂಚನೆ ನೀಡಿದ್ದರು. ಆದರೆ ಈ ಔಷಧಿಗಳು ಮಕ್ಕಳಿಗೆ ನೀಡಬಾರದು. ಆದರೂ ಇದನ್ನು ಮಕ್ಕಳಿಗೆ ನೀಡಲಾಗಿದೆ ಎಂದು ವಿಚಾರಣಾ ವರದಿಯು ಹೇಳಿದೆ.

ಪತ್ರದಲ್ಲಿ ಡಿಜಿಹೆಚ್​ಎಸ್​ ಎಲ್ಲಾ ಮೊಹಲ್ಲಾ ಕ್ಲಿನಿಕ್​ಗಳಲ್ಲಿ ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಡೆಕ್ಸ್ಟ್ರೋಮೆಥೋರ್ಫಾನ್ ವೈದ್ಯರು ಶಿಫಾರಸು ಮಾಡದಂತೆ ಸೂಚನೆ ನೀಡಿ ಎಂದು ದೆಹಲಿ ಸರ್ಕಾರಕ್ಕೆ ಹೇಳಿದ್ದಾರೆ. ಇನ್ನು ಈ ವಿಚಾರವಾಗಿ ಮಾತನಾಡಿದ ಪಾಟ್ನಾದ ಮಕ್ಕಳ ವೈದ್ಯರ ಡಾ. ಚಂದ್ರ ಮೋಹನ್​ ಕುಮಾರ್​, ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳಿಗೆ ಈ ಔಷಧಿಯನ್ನು ನೀಡದಂತೆ ಸೂಚನೆ ಇದ್ದರೂ ಸಹ ಇದನ್ನು ಬಳಕೆ ಮಾಡಲಾಗುತ್ತಿದೆ. ಈ ಔಷಧಿ ಸೇವನೆಯಿಂದ ಮಕ್ಕಳಲ್ಲಿ ಅರೆನಿದ್ರಾವಸ್ಥೆ, ಕಿರಿಕಿರಿ ಸೇರಿದಂತೆ ವಿವಿಧ ಅಡ್ಡಪರಿಣಾಮಗಳು ಉಂಟಾಗುತ್ತದೆ ಎಂದು ಹೇಳಿದರು.

ಇದನ್ನು ಓದಿ: Golden Temple: ಗೋಲ್ಡನ್​​ ಟೆಂಪಲ್​ನಲ್ಲಿ ಕೊಲೆ ಪ್ರಕರಣದ ತನಿಖೆಗೆ ಎಸ್​ಐಟಿ ರಚನೆ..!

ಇದನ್ನೂ ಓದಿ : Aadhaar Card for Babies: ಹುಟ್ಟಿದ ತಕ್ಷಣವೇ ಮಗುವಿಗೆ ಆಧಾರ್ ಕಾರ್ಡ್‌

ಇದನ್ನೂ ಓದಿ : jio ₹1 Prepaid Plan : ಕೇವಲ 1 ರೂಪಾಯಿಯ ಪ್ರೀಪೇಯ್ಡ್​ ಪ್ಲಾನ್​ ಪರಿಚಯಿಸಿದ ರಿಲಯನ್ಸ್​ ಜಿಯೋ

ಇದನ್ನೂ ಓದಿ : Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ

3 kids die after taking ‘cough syrup’ at Delhi’s Mohalla clinic, 13 hospitalized

Comments are closed.