Hurricane of the Philippines: ಫಿಲಿಪೈನ್ಸ್​ನಲ್ಲಿ ಚಂಡಮಾರುತದ ಆರ್ಭಟ; ಸಾವಿನ ಸಂಖ್ಯೆ 208ಕ್ಕೆ ಏರಿಕೆ

ಫಿಲಿಪೈನ್ಸ್​ನಲ್ಲಿ(Hurricane of the Philippines) ಅಪ್ಪಳಿಸಿದ ಪ್ರಬಲ ಚಂಡಮಾರುತದಿಂದಾಗಿ ಬರೋಬ್ಬರಿ 208 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ಇಂದು ಮಾಹಿತಿ ನೀಡಿದ್ದಾರೆ. ಇದು ಇತ್ತೀಚಿನ ವರ್ಷಗಳಲ್ಲಿ ಫಿಲಿಪೈನ್ಸ್​ಗೆ ಅಪ್ಪಳಿಸಿದ ಅತ್ಯಂತ ಮಾರಣಾಂತಿಕ ಚಂಡಮಾರುತಗಳಲ್ಲಿ ಒಂದಾಗಿದೆ ಎನ್ನಲಾಗಿದೆ.

ಗುರುವಾರ ಸಂಭವಿಸಿದ ಚಂಡಮಾರುತದಲ್ಲಿ ಫಿಲಿಪೈನ್ಸ್​ನ ದಕ್ಷಿಣ ಹಾಗೂ ಮಧ್ಯ ಪ್ರದೇಶಗಳು ಸಂಪೂರ್ಣ ಹಾನಿಗೊಳಗಾಗಿದೆ. ರೈ ಚಂಡಮಾರುತದ ರುದ್ರ ನರ್ತನ ದಿಂದಾಗಿ 239 ಮಂದಿ ಗಾಯಗೊಂಡಿದ್ದರೆ 52 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ರೈ ಚಂಡಮಾರುತವು ಗಂಟೆಗೆ 195 ಕಿಮೀ/ ಗಂಟೆ ವೇಗದಲ್ಲಿ ಅಪ್ಪಳಿಸಿದೆ. ರೆಡ್​ ಕ್ರಾಸ್​ ಕರಾವಳಿ ಪ್ರದೇಶದಲ್ಲಿ ಸೂಪರ್​ ಟೈಫೂನ್​ನಿಂದ ಅತೀ ಹೆಚ್ಚಿನ ಹಾನಿ ಉಂಟಾಗಿದೆ. ಮುಂಜಾಗ್ರತಾ ಕ್ರಮವಾಗಿ ಕರಾವಳಿ ಪ್ರದೇಶದಲ್ಲಿ ವಾಸವಿದ್ದ 3 ಲಕ್ಷಕ್ಕೂ ಅಧಿಕ ಜನರು ತಮ್ಮ ಮನೆ ಹಾಗೂ ಬೀಚ್ ಫ್ರಂಟ್​ ರೆಸಾರ್ಟ್​ ತೊರೆದಿದ್ದಾರೆ.

ಇನ್ನು ಈ ವಿಚಾರವಾಗಿ ಮಾತನಾಡಿದ ಫಿಲಿಪೈನ್ಸ್​​ ರೆಡ್​ಕ್ರಾಸ್​ ಅಧ್ಯಕ್ಷ ರಿಚರ್ಡ್ ಗಾರ್ಡನ್​ ರೈ ಚಂಡಮಾರುತದಿಂದಾಗಿ ಮನೆ, ಆಸ್ಪತ್ರೆ, ಶಾಲೆ, ವಿದ್ಯುತ್​ ಕಂಬಗಳು, ಸಮುದಾಯ ಕಟ್ಟಡಗಳು ಚೂರು ಚೂರಾಗಿದೆ. ಅನೇಕ ಸ್ಥಳಗಳಲ್ಲಿ ಸಂಪರ್ಕ ಕಡಿತಗೊಂಡಿದೆ.ಗ್ರಾಮೀಣ ಭಾಗಗಳು ಜಲಾವೃತವಾಗಿದೆ. ಭೂಕುಸಿತದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ನಿರೀಕ್ಷಿಸಲಾಗಿದೆ. ನಷ್ಟದ ಪ್ರಮಾಣವನ್ನು ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ರೈ ಚಂಡಮಾರುತವು ಫಿಲಿಪೈನ್ಸ್​ನ್ನು ಸಂಪೂರ್ಣವಾಗಿ ಹಾನಿಗೊಳಪಡಿಸಿದೆ. ಪ್ರವಾಹ , ಭೂಕುಸಿತದಿಂದಾಗಿ ರಕ್ಷಣಾ ಕಾರ್ಯಕ್ಕೂ ಅಡ್ಡಿಯಾಗಿದೆ. ಗ್ರಾಮಗಳ ನಡುವಿನ ಸಂಪರ್ಕ ಕಡಿತಗೊಂಡಿದೆ. ಎಲ್ಲಾ ಕಡೆಗಳಲ್ಲಿ ವಿದ್ಯುತ್​ ಸಂಪರ್ಕ ಇಲ್ಲದಾಗಿದೆ. ರಕ್ಷಣಾ ಕಾರ್ಯಕ್ಕೆಂದು ಅಗ್ನಿಶಾಮಕ ದಳ, ಕೋಸ್ಟ್​ ಗಾರ್ಡ್​, ನೌಕಾ ಪಡೆ ಹೀಗಾ ಎಲ್ಲರನ್ನೂ ನಿಯೋಜಿಸಲಾಗಿದೆ. ಮರಗಳು, ವಿದ್ಯುತ್​ ಕಂಬಗಳು ಹಾಗೂ ಕಟ್ಟಡಗಳು ಧರಾಶಾಹಿಯಾಗಿರುವ ಪರಿಣಾಮ ರಸ್ತೆ ಸಂಪರ್ಕ ಅನೇಕ ಕಡೆಗಳಲ್ಲಿ ಕಡಿತಗೊಂಡಿದೆ.

ಇದನ್ನು ಓದಿ :Aadhaar Card for Babies: ಹುಟ್ಟಿದ ತಕ್ಷಣವೇ ಮಗುವಿಗೆ ಆಧಾರ್ ಕಾರ್ಡ್‌

ಇದನ್ನೂ ಓದಿ :Aishwarya Rai Bachchan: ನಟಿ ಐಶ್ವರ್ಯಾ ರೈ ಬಚ್ಚನ್‌ ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯ

ಇದನ್ನೂ ಓದಿ : ಯುಎಇನಲ್ಲಿ ಓಮಿಕ್ರಾನ್‌ ಭೀತಿ, ಸಪ್ಟೆಂಬರ್‌ನಿಂದ ಕೋವಿಡ್‌ ಹೆಚ್ಚಳ

Hurricane of the Philippines; Death toll rises to 208

Comments are closed.