ಗಗನಮುಖಿಯಾಗುತ್ತಿದೆ ಪೆಟ್ರೋಲ್, ಡೀಸೆಲ್ ಬೆಲೆ

0

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಆರ್ಭಟದ ನಡುವಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಜನತೆಗೆ ಬರೆ ಎಳೆದಿದೆ. ದೇಶದಲ್ಲಿ ಸತತ 21ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್‍ಗೆ 25 ಪೈಸೆ ಹಾಗೂ ಡೀಸೆಲ್‍ಗೆ 21 ಪೈಸೆ ಏರಿಕೆಯಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರತೀ ಲೀಟರ್ ಪೆಟ್ರೋಲ್ ಗೆ 80.38 ರೂ. ಹಾಗೂ ಡೀಸೆಲ್ ಬೆಲೆ ಗರಿಷ್ಠ 80.40 ರೂ.ಗೆ ಮಾರಾಟ ಮಾಡಲಾಗುತ್ತಿದೆ. ದೆಹಲಿಯಲ್ಲಿ ವ್ಯಾಟ್ ಹೆಚ್ಚಳ ಮಾಡಿರುವುದರಿಂದಾಗಿ ಪೆಟ್ರೋಲ್ ಬೆಲೆಗಿಂತ ಡಿಸೇಲ್ ದುಬಾರಿಯಾಗಿದೆ.

ಯಾವ ನಗರದಲ್ಲಿ ಎಷ್ಟಿದೆ ದರ :
ಬೆಂಗಳೂರಿನಲ್ಲಿ ಪೆಟ್ರೋಲ್‍ ಪ್ರತಿ ಲೀಟರ್ ಗೆ 82.99 ರೂ. ಇದ್ದರೆ, ಡೀಸೆಲ್ ಬೆಲೆ 76.45 ರೂ. ಆಗಿದೆ. ಮುಂಬೈನಲ್ಲೂ ಪೆಟ್ರೋಲ್ ಬೆಲೆ 87 ರೂ. ಗಡಿ ದಾಟಿದೆ. ಇಂದು ಪ್ರತಿ ಲೀಟರ್ 87.14 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 82.05 ರೂ. ಹಾಗೂ ಡೀಸೆಲ್ ದರ 75.52 ರೂ. ಇದೆ. ಚೆನ್ನೈನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 83.59 ರೂ. ಇದ್ದರೆ, ಬೆಲೆ 77.44 ರೂ. ಆಗಿದೆ.

Leave A Reply

Your email address will not be published.