ಬೆಂಗಳೂರು : ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ (Petrol Diesel Price) ಬಾರಿ ಏರಿಕೆ ಕಂಡಿದೆ. ಅದ್ರಲ್ಲೂ ಡಿಸೇಲ್ ಬೆಲೆಯಲ್ಲಿ (Diesel Rate) ಒಂದು ವಾರದ ಅವಧಿಯಲ್ಲಿ ಬರೋಬ್ಬರಿ 20 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ ಡಿಸೇಲ್ ವಾಹನ ಮಾಲೀಕರಿಗೆ ಶಾಕ್ ಕೊಟ್ಟಿದೆ. ಕೇವಲ ಒಂದೇ ವಾರದ ಅವಧಿಯಲ್ಲಿ ಡಿಸೇಲ್ ಬೆಲೆಯಲ್ಲಿ 20 ರೂಪಾಯಿ ಹೆಚ್ಚಳವಾಗಿದೆ.
ಬೆಂಗಳೂರಿನಲ್ಲಿ ಪ್ರತೀ ಲೀಟರ್ ಡೀಸೆಲ್ ಬೆಲೆ ರೂ.122ಕ್ಕೆ ಏರಿಕೆ ಕಂಡಿದ್ದರೆ, ಮುಂಬೈನಲ್ಲಿ ರೂ.130 ಹಾಗೂ ಚೆನ್ನೈನಲ್ಲಿ ರೂ.129ಕ್ಕೆ ತಲುಪಿದೆ. ಆದರೆ ಡಿಸೇಲ್ ಬೆಲೆ ಏರಿಕೆ ಆಗಿರುವುದು ಸರಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ ಅಲ್ಲ ಬದಲಾಗಿ, ಖಾಸಗಿ ಶೆಲ್ ಬಂಕ್‌ಗಳಲ್ಲಿ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 90 ಡಾಲರ್ ಗೆ ಏರಿಕೆಯಾಗಿದೆ.

ಈ ಹಿನ್ನೆಲೆಯಲ್ಲಿ ಖಾಸಗಿ ವಲಯದ ಶೆಲ್ ಬಂಕ್ ನಲ್ಲಿ ಡೀಸೆಲ್, ಪೆಟ್ರೋಲ್ ಬೆಲೆಯಲ್ಲಿ ಏರಿಕೆ ಕಂಡಿದೆ. ಖಾಸಗಿ ಸ್ವಾಮ್ಯದ ಶೇಲ್ ಬಂಕ್‌ಗಳಲ್ಲಿ ಪ್ರತೀ ಲೀಟರ್ ಡಿಸೇಲ್ ಬೆಲೆಯಲ್ಲಿ ಏರಿಕೆ ಆಗಿದೆ. ಆದರೆ ಸತತ 18 ತಿಂಗಳಿನಿಂದಲೂ ಸರಕಾರಿ ಬಂಕ್ ಗಳಲ್ಲಿ ಡಿಸೇಲ್ ದರ ಏರಿಕೆಯಾಗಿಲ್ಲ. ಹೀಗಾಗಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. ಬೆಂಗಳೂರಿನ ಸರಕಾರಿ ಸ್ವಾಮ್ಯದ ಬಂಕ್‌ಗಳಲ್ಲಿ 87.99 ರೂ. ಇದೆ.
ಇದನ್ನೂ ಓದಿ : ಗೃಹಲಕ್ಷ್ಮೀ 2ನೇ ಕಂತಿನ ಹಣ ಎಲ್ಲರಿಗೂ ಸಿಗಲ್ಲ ! ಯಾವುದಕ್ಕೂ ಒಮ್ಮೆ ಸ್ಟೇಟಸ್ ಚೆಕ್ ಮಾಡಿ
ಕಚ್ಚಾ ತೈಲ ಬೆಲೆಯಲ್ಲಿ 3 ಡಾಲರ್ ಇಳಿಕೆ
ಒಂದೆಡೆ ಖಾಸಗಿ ಕಂಪೆನಿಗಳು ತೈಲ ಬೆಲೆಯಲ್ಲಿ ಬಾರಿ ಏರಿಕೆ ಮಾಡಿದ್ದರೂ ಕೂಡ ಜಾಗತಿಕ ಆರ್ಥಿಕ ಕುಸಿತದ ಭೀತಿಯ ನಡುವೆ ಕಚ್ಚಾ ತೈಲ ಬೆಲೆ ಬ್ಯಾರೆಲ್‌ಗೆ 3 ಡಾಲರ್‌ಗಿಂತ ಹೆಚ್ಚು ಕುಸಿದಿದೆ. ಈ ಮೂಲಕ ಅಕ್ಟೋಬರ್ 5 ರಂದು ಪ್ರತಿ ಬ್ಯಾರೆಲ್ ಬೆಲೆ 86 ಡಾಲರ್‌ಗೆ ಇಳಿದಿದೆ. ಡಿಸೆಂಬರ್ ವರೆಗೆ ಕಚ್ಚಾ ತೈಲ ಉತ್ಪಾದನೆಯನ್ನು ಕಡಿತಗೊಳಿಸುವುದಾಗಿ ಸೌದಿ ಅರೇಬಿಯಾ ಮತ್ತು ರಷ್ಯಾ ಘೋಷಣೆ ಮಾಡಿದೆ. ಇದರ ನಡುವಲ್ಲೇ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಂಡಿದೆ.

ಇನ್ನು ಕಚ್ಚಾ ತೈಲ ಬೆಲೆ ಒಂದೇ ದಿನದಲ್ಲಿ ಶೇ. 5 ರಷ್ಟು ಕುಸಿತ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಇದು ಕನಿಷ್ಠ ಮಟ್ಟದ ಕುಸಿತ ಎನ್ನಲಾಗುತ್ತಿದೆ. ಕಳೆದ ವರ್ಷ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯ ಹಾದಿಯನ್ನು ಕಂಡಿತ್ತು. ಕಳೆದ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇ. 9 ರಷ್ಟು ಏರಿಕೆಯಾಗಿತ್ತು.
ಇದನ್ನೂ ಓದಿ : ಅಕ್ಟೋಬರ್‌ನಲ್ಲಿ 18 ದಿನ ಬ್ಯಾಂಕ್ ರಜೆ : ಬ್ಯಾಂಕ್ ಕೆಲಸವನ್ನು ಶೀಘ್ರವಾಗಿ ಮುಗಿಸಿ
ಆದರೆ ಅಕ್ಟೋಬರ್ ಆರಂಭದಿಂದಲೇ ಕಚ್ಚಾ ತೈಲದ ಬೆಲೆಯಲ್ಲಿ ಇಳಿಕೆ ಕಾಣಲು ಆರಂಭಿಸಿದೆ. ಸದ್ಯ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರಲ್‌ಗೆ $ 90 ರಷ್ಟಿದೆ. ಸೌದಿ ಅರೇಬಿಯಾ ಮತ್ತು ರಷ್ಯಾ ಸೇರಿದಂತೆ ಪ್ರಮುಖ ತೈಲ ಉತ್ಪಾದನಾ ರಾಷ್ಟ್ರಗಳು ಕಚ್ಚಾ ತೈಲ ಬೆಲೆಯನ್ನು ಹೆಚ್ಚಿಸಲು ಉತ್ಪಾದನೆಯನ್ನು ಕಡಿತಗೊಳಿಸಿವೆ.
ಇನ್ನೊಂದೆಡೆ ಎನರ್ಜಿ ಇನ್ಫಾರ್ಮೇಶನ್ ಅಡ್ಮಿನಿಸ್ಟ್ರೇಷನ್ (ಇಐಎ) ದತ್ತಾಂಶದ ಪ್ರಕಾರ, ಗ್ಯಾಸೋಲಿನ್ ಸ್ಟಾಕ್ಗಳು ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು 65 ಲಕ್ಷ ಬ್ಯಾರೆಲ್ಗಳನ್ನು ತಲುಪಿದೆ. ಕಳೆದ ಎರಡು ವರ್ಷಗಳಲ್ಲಿ ಇದು ಗರಿಷ್ಠ ಮಟ್ಟದ ಸಂಗ್ರಹವಾಗಿದೆ. ಪರಿಣಾಮವಾಗಿ, ಗ್ಯಾಸೋಲಿನ್ ಬೆಲೆಗಳು ಒಂಬತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿವೆ ಮತ್ತು ಕಳೆದ 3 ವಾರಗಳಲ್ಲಿ 3% ರಷ್ಟು ಕುಸಿದಿದೆ.
Petrol Diesel Price Today Diesel Rate Increased By Rs 20