ಭಾನುವಾರ, ಏಪ್ರಿಲ್ 27, 2025
Homebusinessಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ : ರೈತರಿಗೆ ಸಿಗಲಿದೆ ದುಪ್ಪಟ್ಟು ಹಣ

ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ : ರೈತರಿಗೆ ಸಿಗಲಿದೆ ದುಪ್ಪಟ್ಟು ಹಣ

- Advertisement -

Pradhan Mantri Kisan Samman Nidhi Yojana: : ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯ ಮೂಲಕ ಕೇಂದ್ರ ಸರಕಾರ ರೈತರಿಗೆ ಗುಡ್‌ನ್ಯೂಸ್‌ ಕೊಟ್ಟಿದೆ. ಅನ್ನದಾತರಿಗೆ ನೀಡಲಾಗುತ್ತಿರುವ ಕಿಸಾನ್‌ ಸಮ್ಮಾನ್‌ ಯೋಜನೆಯ (PM Kissan) ನಿಧಿಯನ್ನು ಏರಿಕೆ ಮಾಡಲು ಸಿದ್ದತೆ ನಡೆಸಿದೆ. ಯಾವಾಗ ಕಿಸಾನ್‌ ಸಮ್ಮಾನ್‌ ಏರಿಕೆ ಆಗಲಿದೆ ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ಬಾರಿಯ ಬಜೆಟ್‌ನಲ್ಲಿ ಕೇಂದ್ರ ಸರಕಾರ ಭರ್ಜರಿ ಕೊಡುಗೆಗಳನ್ನು ನೀಡಲಿದೆ. ಅದ್ರಲ್ಲೂ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೃಷಿ ಮಹಿಳೆಯರಿಗೆ ಆರ್ಥಿಕ ನೆರವು ದ್ವಿಗುಣಗೊಳ್ಳಬಹುದು ಎಂದು ಹೇಳಲಾಗುತ್ತದೆ. ಅಲ್ಲದೇ ಈ ಬಾರಿಯ ಬಜೆಟ್‌ನಲ್ಲಿ ಹೊಸ ಯೋಜನೆಗಳ ಘೋಷಣೆ ಆಗುವ ಸಾಧ್ಯತೆಯಿದೆ.

Pradhan Mantri Kisan Samman Nidhi Yojana Farmers will get double money
Image Credit to Original Source

ಬಜೆಟ್‌ನಲ್ಲಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ ಕಿಸಾನ್ ಯೋಜನೆ) ಮಹಿಳಾ ಫಲಾನುಭವಿಗಳಿಗೆ ಆರ್ಥಿಕ ಸಹಾಯವನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ. ಫೆಬ್ರವರಿ 1 ರಂದು ಬಜೆಟ್ ಮಂಡನೆಯಾಗಲಿದ್ದು, ಜನವರಿ 31 ರಿಂದ ಫೆಬ್ರವರಿ 9 ರವರೆಗೆ ಬಜೆಟ್ ಅಧಿವೇಶನ ನಡೆಯಲಿದೆ. ಜನವರಿ 31 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ : ಯುವನಿಧಿಗೆ ಸರ್ಕಾರಿ ನಿಯಮಗಳೇ ಅಡ್ಡಿ: ಇದುವರೆಗೂ ಸಲ್ಲಿಕೆಯಾದ ಅರ್ಜಿ ಎಷ್ಟು ಗೊತ್ತಾ ?

ಮಧ್ಯಂತರ ಬಜೆಟ್‌ನಲ್ಲಿ ಪ್ರಮುಖ ಘೋಷಣೆಗಳ ಸಾಧ್ಯತೆ ಕಡಿಮೆ ಇದ್ದರೂ ಕೂಡ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಅಡಿಯಲ್ಲಿ ಕೃಷಿ ಮಹಿಳೆಯರಿಗೆ ಆರ್ಥಿಕ ನೆರವು ದ್ವಿಗುಣಗೊಳ್ಳಬಹುದು ಎಂದು ಹೇಳಲಾಗುತ್ತದೆ. ಫೆಬ್ರವರಿ 1ರ ಬಜೆಟ್ ನಲ್ಲಿ ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.

ಪಿಎಂ ಕಿಸಾನ್ ಯೋಜನೆಯಡಿ ಈಗ ವಾರ್ಷಿಕ ರೂ 6,000 ನೀಡಲಾಗುತ್ತಿದೆ. ಮಹಿಳಾ ರೈತರಿಗೆ ಇದು 12,000 ರೂ.ಗೆ ಹೆಚ್ಚಾಗಬಹುದು. ಅಂದರೆ, ಭೂಮಿ ಹೊಂದಿರುವ ಮಹಿಳೆಯರು ಹೆಚ್ಚಿನ ಹಣವನ್ನು ಪಡೆಯಬಹುದು. ಇದಲ್ಲದೇ ಮಧ್ಯಂತರ ಬಜೆಟ್ ನಲ್ಲಿ ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ.

ಇದನ್ನೂ ಓದಿ : ಯುವನಿಧಿಗೆ ಸಲ್ಲಿಕೆಯಾದ ಅರ್ಜಿಗಳೆಷ್ಟು ? ಜಿಲ್ಲಾವಾರು ಅಂಕಿ-ಅಂಶ ಇಲ್ಲಿದೆ

Pradhan Mantri Kisan Samman Nidhi Yojana Farmers will get double money
Image Credit to Original Source

ಮಾಧ್ಯಮಗಳ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯಲ್ಲಿ ಹಣವನ್ನು ಹೆಚ್ಚಿಸಲು ಸರ್ಕಾರ ಯೋಜಿಸಿದೆ ಎಂದು ಹೇಳಲಾಗಿದೆ. 6,000 ಅನುದಾನದ ಮೊತ್ತವನ್ನು 8,000 ರೂ.ಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ. ಬಜೆಟ್ ಮಂಡನೆಗೆ ಒಂದು ದಿನ ಮುಂಚಿತವಾಗಿ ಅಂದರೆ ಜನವರಿ 31 ರಂದು ಬಜೆಟ್ ಅಧಿವೇಶನ ಪ್ರಾರಂಭವಾಗುತ್ತದೆ.

ಇದನ್ನೂ ಓದಿ : 10 ಲಕ್ಷ ಸಾಲ 3 ಲಕ್ಷ ಸಬ್ಸಿಡಿ, ಅತ್ಯಂತ ಕಡಿಮೆ ಬಡ್ಡಿಗೆ PM ನರೇಂದ್ರ ಮೋದಿ ಸರಕಾರದಿಂದ ಹೊಸ ಯೋಜನೆ

ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಮರುದಿನ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಇಂಡಿಯಾ ಟುಡೇ ವರದಿ ಪ್ರಕಾರ ಫೆಬ್ರವರಿ 9ರವರೆಗೆ ಬಜೆಟ್ ಅಧಿವೇಶನ ನಡೆಯಲಿದ್ದು, ಜನವರಿ 31ರಿಂದ 11 ದಿನಗಳ ಕಾಲ ಅಧಿವೇಶನ ನಡೆಯುವ ಸಾಧ್ಯತೆ ಇದೆ.

Pradhan Mantri Kisan Samman Nidhi Yojana: Farmers will get double money

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular