ಶುಕ್ರವಾರ, ಜೂನ್ 6, 2025
HomebusinessBIG UPDATES : 500 ರೂಪಾಯಿ ನೋಟು ನಿಷೇಧ..!

BIG UPDATES : 500 ರೂಪಾಯಿ ನೋಟು ನಿಷೇಧ..!

RBI 2025ರ ಸೆಪ್ಟೆಂಬರ್‌ 30ರ ವೇಳೆಗೆ ಎಲ್ಲಾ ಎಟಿಎಂಗಳಲ್ಲಿ ಕನಿಷ್ಠ 75% ಒಂದು ಕ್ಯಾಸೆಟ್‌ನಿಂದ 100 ರೂಪಾಯಿ ಅಥವಾ 200 ರೂಪಾಯಿ ಮುಖಬೆಲೆಯ ನೋಟುಗಳನ್ನೇ ವಿತರಿಸಬೇಕು. 2026ರ ಮಾರ್ಚ್‌31ರ ವೇಳೆಗೆ ಎಲ್ಲಾ ಎಟಿಎಂಗಳಲ್ಲಿ ಶೇ.90ರಷ್ಟು ಕನಿಷ್ಠ ಒಂದು ಕ್ಯಾಸೆಟ್‌ನಲ್ಲಿ 100 ಅಥವಾ 200 ರೂಪಾಯಿ ಮುಖಬೆಲೆಯ ನೋಟುಗಳನ್ನು ವಿತರಿಸಬೇಕು ಎಂದಿದೆ

- Advertisement -

RBI ban 500 rupee note : ನಕಲಿ ನೋಟುಗಳ ಹಾವಳಿಯ ಜೊತೆಗೆ ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಭಾರತ ಸರಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ. ಆರ್‌ಬಿಐ 500 ರೂಪಾಯಿ ನೋಟುಗಳನ್ನು ನಿಷೇಧಿಸಲಿದೆ ಎಂದು ರಾಷ್ಟ್ರೀಯ ಕೆಲ ಮಾಧ್ಯಮಗಳು ವರದಿ ಮಾಡಿವೆ.

ಭ್ರಷ್ಟಾಚಾರ ನಿಯಂತ್ರಣದ ಸಲುವಾಗಿ 500 ರೂಪಾಯಿ ನೋಟುಗಳನ್ನು ವಾಪಾಸ್‌ ಪಡೆಯುವಂತೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದರು. ತೆಲುಗು ದೇಶಂ ಪಾರ್ಟಿ ಸದ್ಯ ಎನ್‌ಡಿಎ ಬಣದಲ್ಲಿದ್ದು, ಬಿಜೆಪಿಯ ಮಿತ್ರಪಕ್ಷವಾಗಿದೆ.

ಚಂದ್ರಬಾಬು ನಾಯ್ಡು ಅವರು ಕೇಂದ್ರ ಸರಕಾರವನ್ನು ಒತ್ತಾಯಿಸಿದ ಬೆನ್ನಲ್ಲೇ ಮೊತ್ತೊಂದು ಬೆಳವಣಿಗೆ ನಡೆದಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ಎಟಿಎಂಗಳ ಮೂಲಕ 100 ರೂಪಾಯಿ ಹಾಗೂ 200 ರೂಪಾಯಿ ಮುಖಬೆಲೆಯ ನೋಟುಗಳನ್ನೇ ವಿತರಣೆ ಮಾಡುವಂತೆ ಅಧಿಸೂಚನೆಯನ್ನು ಹೊರಡಿಸಿತ್ತು. ಅಷ್ಟಕ್ಕೂ ಆರ್‌ಬಿಸಿ ಹೊರಡಿಸಿದ ಆದೇಶದಲ್ಲಿ ಏನಿದೆ ಅಂತಾ ನೋಡೋದಾದ್ರೆ.

Also Read : Public Alert : ಜೂನ್ 1ರಿಂದ ಹೊಸ ರೂಲ್ಸ್‌ : ಗ್ಯಾಸ್‌, ಎಟಿಎಂ ಹಣ ತೆಗೆಯುವ ಮುನ್ನ ಈ ಸುದ್ದಿ ಓದಿ

2025ರ ಸೆಪ್ಟೆಂಬರ್‌ 30ರ ವೇಳೆಗೆ ಎಲ್ಲಾ ಎಟಿಎಂಗಳಲ್ಲಿ ಕನಿಷ್ಠ 75% ಒಂದು ಕ್ಯಾಸೆಟ್‌ನಿಂದ 100 ರೂಪಾಯಿ ಅಥವಾ 200 ರೂಪಾಯಿ ಮುಖಬೆಲೆಯ ನೋಟುಗಳನ್ನೇ ವಿತರಿಸಬೇಕು. 2026ರ ಮಾರ್ಚ್‌31ರ ವೇಳೆಗೆ ಎಲ್ಲಾ ಎಟಿಎಂಗಳಲ್ಲಿ ಶೇ.90ರಷ್ಟು ಕನಿಷ್ಠ ಒಂದು ಕ್ಯಾಸೆಟ್‌ನಲ್ಲಿ 100 ಅಥವಾ 200 ರೂಪಾಯಿ ಮುಖಬೆಲೆಯ ನೋಟುಗಳನ್ನು ವಿತರಿಸಬೇಕು ಎಂದಿದೆ.

ಆರ್‌ಬಿಐ ಹೊರಡಿಸಿರುವ ಈ ಅಧಿಸೂಚನೆ ಮತ್ತೊಮ್ಮೆ ಭಾರತದಲ್ಲಿ ನೋಟ್‌ ಬ್ಯಾನ್‌ ಆಗುವ ಸೂಚನೆ ನೀಡಿದಂತಿದೆ. 2016ರ ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಬ್ಯಾನ್‌ ಮಾಡಿದ್ದರು. ಭಾರತೀಯ ರಿಸರ್ವ್‌ ಬ್ಯಾಂಕ್‌ 2017ರಲ್ಲಿ 200 ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿತ್ತು.

ಇದೀಗ ಮತ್ತೆ 500 ರೂಪಾಯಿ ನೋಟ್‌ ಬ್ಯಾನ್‌ ಮಾಡುವ ಮೂಲಕ 100 ಮತ್ತು 200 ರೂಪಾಯಿ ಮುಖ ಬೆಲೆಯ ನೋಟುಗಳ ಮುದ್ರಣವನ್ನು ಹೆಚ್ಚಿಸುವ ಯೋಜನೆ ಸರಕಾರದ ಮುಂದಿದೆ ಎನ್ನಲಾಗುತ್ತಿದೆ. ಜೊತೆಗೆ ಡಿಜಿಟಲ್‌ ಪಾವತಿಗಳನ್ನು ಹೆಚ್ಚಿಸುವ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ. ಅಷ್ಟೇ ಅಲ್ಲಾ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಡಿಜಿಟಲ್‌ ಪಾವತಿಗಳಿಗೆ ಒಗ್ಗಿಕೊಂಡಿದ್ದಾರೆ.

Also Read : ಕರ್ನಾಟಕ ಬ್ಯಾಂಕ್ ನೇಮಕಾತಿ 2025: ಪದವಿಧರರಿಗೆ ಉದ್ಯೋಗ, ರೂ. 82920 ವೇತನ

ಶಾಪಿಂಗ್‌, ಖರೀದಿ, ಮಾಲ್‌, ಮಾರುಕಟ್ಟೆ, ಸಣ್ಣಪುಟ್ಟ ವ್ಯಾಪಾರಸ್ಥರು ಕೂಡ ಯುಪಿಐ ಬಳಕೆಯನ್ನು ಹೆಚ್ಚಿಸಿದ್ದು, ಗೂಗಲ್‌ ಪೇ, ಪೋನ್‌ ಪೇ, ಭಾರತ್‌ ಪೇ, ಪೇಟಿಯಂನಂತ ಡಿಜಿಟಲ್‌ ಪಾವತಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆರಂಭದಲ್ಲಿ ಎಟಿಎಂಗಳಲ್ಲಿ 500 ರೂಪಾಯಿಗೆ ಕಡಿವಾಣ ಹಾಕುವ ಮೂಲಕ ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶವಿದೆ ಎನ್ನಲಾಗುತ್ತಿದೆ.

RBI ban 500 rupee note Here is big update In Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular