ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರನ್ನು ಮೋಡಿ ಮಾಡಲು ಬಿಡುಗಡೆಯಾಗಲಿದೆ REDMI MI 11


ದೇಶದ ಪ್ರಮುಖ ಸ್ಮಾರ್ಟ್ ಪೋನ್ ತಯಾರಿಕಾ ಕಂಪೆನಿ ಶಿಯೋಮಿ ರೆಡ್ಮಿ ಎಂಐ 11 ಪೋನ್ ಬಿಡುಗಡೆಗೆ ಸಿದ್ದವಾಗಿದೆ ಈಗಾಗಲೇ ಜಗತ್ತಿನಾದ್ಯಂತ ಎಂಐ ಸೀರೀಸ್ ಪೋನ್ ಗಳು ವಿಶ್ವದ ಮಾರುಕಟ್ಟೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ.

iದೀಗ ಮುಂದುವರಿದ ಭಾಗವಾಗಿ ಹಲವು ವಿಶಿಷ್ಟತೆಗಳಿಂದ ಕೂಡಿರುವ ಎಂಐ 11 ಸೀರೀಸ್ ಬಿಡುಗಡೆಗೆ ಸಜ್ಜಾಗಿದೆ. ಶೀಯೋಮಿ ಎಂಐ 11 ಸ್ಮಾರ್ಟ್ ಪೋನ್ ನಲ್ಲಿ  ಹೊಸದಾಗಿ ಕ್ವಾಲ್ಕಂ ಪರಿಚಯಿಸಿದ ಸ್ನ್ಯಾಪ್‌ಡ್ರ್ಯಾಗನ್ 888 ಪ್ರೊಸೆಸರ್ ಅಳವಡಿಸಲಾಗಿದ್ದು, ಗ್ರಾಹಕರಿಗೆ ಹೊಸ ಅನುಭವವನ್ನು ಉಣಬಡಿಸಲಿದೆ.

ಮೊದಲ ಬಾರಿಗೆ ಶಿಯೋಮಿ ರೆಡ್ಮಿ ಮತ್ತು ಎಂಐ ಪ್ರೀಮಿಯಂ ಫೋನ್‌ಗಳಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ ಪ್ರೊಸೆಸರ್ ಬಳಸಲಾಗುತ್ತದೆ. ಜೊತೆಗೆ ಹೊಸ ರೀತಿಯ ಪ್ರೊಸೆಸರ್ ಸಹಿತ ಶಿಯೋಮಿ ಫ್ಲ್ಯಾಗ್‌ಶಿಪ್ ಫೋನ್ ಬಿಡುಗಡೆಯಾಗಲಿದೆ. ಅಲ್ಲದೆ, 5G ಫೋನ್ ಇದಾಗಿರುವುದರಿಂದ, ಪ್ರೀಮಿಯಂ ಫೀಚರ್ಸ್ ನ್ನು ಗ್ರಾಹಕರು ನಿರೀಕ್ಷಿಸಬಹುದಾಗಿದೆ.

ಶಿಯೋಮಿ ಕಂಪೆನಿ ಈಗಾಗಲೇ ಎಂಐ 10 ಆವೃತ್ತಿ ಮೊಬೈಲ್ ಗಳನ್ನು ಬಿಡುಗಡೆ ಮಾಡಿದ್ದು, ಎಂಐ 10ನ್ನು ಸ್ವಲ್ಪ ಪ್ರಮಾಣದಲ್ಲಿ ಪರಿಷ್ಕೃತ ಮಾಡಿ ಎಂಐ 11 ಆವೃತ್ತಿಯನ್ನು ಸಿದ್ದಪಡಿಸಲಾಗಿದೆ. ಶಿಯೋಮಿ ಎಂಐ11 ನಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್ 888 5G ಪ್ರೊಸೆಸರ್ ಬಳಸಲಾಗಿದ್ದು, 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಕ್ಯಾಮರಾ ಮತ್ತು ಕನಿಷ್ಠ 6 GB RAM ಹೊಂದಿರುತ್ತದೆ ಎನ್ನಲಾಗಿದೆ.

ಇಷ್ಟೇ ಅಲ್ಲಾಶವೋಮಿ ಎಂಐ 11ನಲ್ಲಿ QHD+ ಡಿಸ್‌ಪ್ಲೇ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಒದಗಿಸಲಿದೆ. ಸ್ನ್ಯಾಪ್ ಡ್ರಾಗನ್ 865 ಪರ್ಫಾಮೆನ್ಸ್ ಒಳಗೊಂಡಿದ್ದು, 128 ಜಿಬಿ ಸ್ಟೋರೇಜ್ ಜೊತೆಗೆ 108+13+2+2 ಮೆಗಾ ಫಿಕ್ಸೆಲ್ ಕ್ಯಾಮರಾವನ್ನೊಳಗೊಂಡಿದೆ.

ದೀರ್ಘ ಕಾಲದ ವರೆಗೆ ಬಾಳಿಕೆ ಬರುವ 4780ಎಂಎಎಚ್ ಬ್ಯಾಟರಿಯನ್ನು ಅಳವಡಿಸಲಾಗಿದೆ. 6.67″ (16.94 ಸೆಂ.ಮೀ) ಡಿಸ್ಪೈ ಹಾಗೂ 8 ಜಿಬಿ RAM ಒಳಗೊಂಡಿದ್ದು ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲಿದೆ.

Comments are closed.