ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ ಎರಡು ತಿಂಗಳು ಮುಂದೂಡಿಕೆ : ಬೇಸಿಗೆ ರಜೆ ಕಡಿತ

ಬೆಂಗಳೂರು : ಈ ಬಾರಿಯ ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆ ಎರಡು ತಿಂಗಳ ಕಾಲ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಪರೀಕ್ಷೆಗಳನ್ನು ನಡೆಸುವಂತೆ ಕೊರೊನಾ ತಾಂತ್ರಿಕ ಸಮಿತಿ ಸಲಹೆ ನೀಡಿದೆ.

ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯದಲ್ಲಿ ಮಾರ್ಚ್ ಹಾಗೂ ಎಪ್ರೀಲ್ ತಿಂಗಳಿನಲ್ಲಿ ಪರೀಕ್ಷೆಗಳನ್ನು ನಡೆಸಲು ಶಿಕ್ಷಣ ಇಲಾಖೆ ಸಿದ್ದತೆಗಳನ್ನು ಮಾಡಿಕೊಂಡಿತ್ತು. ಅಲ್ಲದೇ ಪರೀಕ್ಷಾ ವೇಳಾ ಪಟ್ಟಿಯನ್ನು ಸಿದ್ದಪಡಿಸಲು ಶಿಕ್ಷಣ ಇಲಾಖೆ ತಿಳಿಸಿತ್ತು. ಆದ್ರೀಗ ಫೆಬ್ರವರಿ ತಿಂಗಳಿನಲ್ಲಿ ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಸೃಷ್ಟಿಯಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪರೀಕ್ಷೆಗಳನ್ನು ಮಾರ್ಚ್, ಎಪ್ರೀಲ್ ತಿಂಗಳ ಬದಲಾಗಿ, ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ನಡೆಸಲು ಸಮಿತಿಯ ಸೂಚನೆಯನ್ನು ನೀಡಿದೆ.

ಕೊರೊನಾ ಅಲೆಯ ನಡುವಲ್ಲೇ ಪರೀಕ್ಷೆಗಳನ್ನು ನಡೆಸಿದ್ರೆ ಸೋಂಕು ಇನ್ನಷ್ಟು ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಪರೀಕ್ಷಾ ವೇಳಾಪಟ್ಟಿಯನ್ನು ಸಿದ್ದಪಡಿಸುವುದು ಬೇಡಾ ಎಂದು ಎಸ್ಎಸ್ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಮಂಡಳಿಗೆ ತಾಂತ್ರಿಕ ಸಮಿತಿ ಸೂಚನೆಯನ್ನು ನೀಡಿದೆ.

ಈ ಬಾರಿ ಇನ್ನೂ ಕೂಡ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗಿಲ್ಲ. ಅಲ್ಲದೇ ಪರೀಕ್ಷೆಗಳು ಎರಡು ತಿಂಗಳು ಪರೀಕ್ಷೆಗಳು ಕೂಡ ಮುಂದೂಡಿಕೆಯಾಗಿದೆ. ಈ ನಿಟ್ಟಿನಲ್ಲಿ ಈ ಭಾರಿಯ ಬೇಸಿಗೆ ರಜೆಯನ್ನು ಕಡಿತ ಮಾಡುವಂತೆಯೂ ಸೂಚಿಸಲಾಗಿದೆ. ತಾಂತ್ರಿಕ ಸಮಿತಿಯ ಸಲಹೆಯನ್ನು ಆಧರಿಸಿಯೇ ರಾಜ್ಯದಲ್ಲಿ ಶಾಲೆಗಳ ಆರಂಭವನ್ನು ಮುಂದೂಡಿಕೆ ಮಾಡಿದ್ದ ರಾಜ್ಯ ಸರಕಾರ ಇದೀಗ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಸಾಧ್ಯತೆಯಿದೆ.

Comments are closed.