ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI)ಬ್ಯಾಂಕುಗಳ ಮೇಲೆ ನಿಯಂತ್ರಣ ಸಾಧಿಸುತ್ತದೆ. ಕಾಲ ಕಾಲಕ್ಕೆ ಹಲವು ನಿಯಮಗಳನ್ನು ಜಾರಿಗೆ ತರುತ್ತದೆ. ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳನ್ನು ಬ್ಯಾಂಕುಗಳು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿದೆ. ಒಂದೊಮ್ಮೆ ಆರ್‌ಬಿಐ ನಿಯಮ (RBI Rules) ಪಾಲನೆ ಮಾಡದ ಹಣಕಾಸು ಸಂಸ್ಥೆಗಳ ಮೇಲೆ ಆರ್‌ಬಿಐ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಇದೀಗ ಆರ್‌ಬಿಐ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡದೇ ಇರುವ ಕಾರಣಕ್ಕೆ ದೇಶದ ಪ್ರಮುಖ ಬ್ಯಾಂಕ್ ಹಾಗೂ ಫೈನಾನ್ಸ್ ಕಂಪೆನಿಗಳಿಗೆ ಬಾರೀ ದಂಡವನ್ನು ವಿಧಿಸಿದೆ. ಆರ್‌ಬಿಎಲ್ ಬ್ಯಾಂಕ್ (RBL Bank), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ಮತ್ತು ಬಜಾಜ್ ಫೈನಾನ್ಸ್‌ಗೆ (Bajaj Finance) ಭಾರತೀಯ ರಿಸರ್ವ್ ಬ್ಯಾಂಕ್ (Reserve Bank Of India) ಭಾರಿ ವಿಧಿಸುವ ಮೂಲಕ ವಾರ್ನಿಂಗ್ ಕೊಟ್ಟಿದೆ.

ಇದನ್ನೂ ಓದಿ : ಗೃಹಲಕ್ಷ್ಮಿ ಯೋಜನೆಯಿಂದ ಸಿಗುತ್ತೆ 4000ರೂ.: ದಸರಾ, ದೀಪಾವಳಿಗೆ ಬಿಗ್ ಗಿಫ್ಟ್
ಆರ್‌ಬಿಐ ಮಾರ್ಗಸೂಚಿಗಳನ್ನು (RBI Guidliness) ಅನುಸರಿಸದ ಕಾರಣಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಭಾರತ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವ ಆರ್‌ಬಿಎಲ್ ಬ್ಯಾಂಕ್ ಲಿಮಿಟೆಡ್‌ಗೆ 64 ಲಕ್ಷ ರೂಪಾಯಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ 1 ಕೋಟಿ ರೂಪಾಯಿ ಮತ್ತು ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ 8.50 ಲಕ್ಷ ರೂಪಾಯಿ ದಂಡ ವಿಧಿಸಿದೆ ಎಂದು ಮಿಂಟ್ ವರದಿ ಮಾಡಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೆಲವು ಯೋಜನೆಗಳಿಗೆ ಮೀಸಲಿಟ್ಟ ಬಜೆಟ್ ಸಂಪನ್ಮೂಲಗಳನ್ನು ಬಳಕೆ ಮಾಡುವುದನ್ನು ಬಿಟ್ಟು, ಕಾರ್ಪೋರೇಷನ್‌ಗೆ ಅವಧಿ ಸಾಲವನ್ನು ಬ್ಯಾಂಕ್ ಮಂಜೂರು ಮಾಡಿದೆ. ಆರ್‌ಬಿಐ ನಿಯಮ ಪಾಲಿಸದ ಕಾರಣಕ್ಕೆ ಯೂನಿಯನ್ ಬ್ಯಾಂಕ್‌ಗೆ ಬರೋಬ್ಬರಿ 1 ಕೋಟಿ ದಂಡವನ್ನು ವಿಧಿಸಲಾಗಿದೆ ಎಂದು ಆರ್‌ಬಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯಡಿ ರೈತರ ಖಾತೆಗೆ 8,000 ರೂ.: ಪ್ರಧಾನಿ ನರೇಂದ್ರ ಮೋದಿ ಬಿಗ್ ಗಿಫ್ಟ್
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯೋಜನೆಗಳ ಕಾರ್ಯ ಸಾಧ್ಯತೆ, ಬ್ಯಾಂಕಿಂಗ್ ಮೌಲ್ಯ ಮಾಪನಗಳನ್ನು ಮಾಡದೆಯೇ ಮೊತ್ತವನ್ನು ಮಂಜೂರು ಮಾಲಡಾಗಿದೆ. ಜೊತೆಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಯೋಜನೆಗಳ ಕಾರ್ಯ ಸಾಧ್ಯತೆಯನ್ನು ಮೌಲ್ಯಮಾಪನ ಮಾಡುವಲ್ಲಿಯೂ ವಿಫಲವಾಗಿದ ಎಂದು ತಿಳಿಸಿದೆ.

ಇನ್ನು ಆರ್‌ಬಿಎಲ್ ಬ್ಯಾಂಕ್ ಆರ್‌ಬಿಐ ನಿಯಮವನ್ನು ಉಲ್ಲಂಘನೆ ಮಾಡಿದೆ. ಪ್ರಮುಖವಾಗಿ RBL ಬ್ಯಾಂಕ್ ತನ್ನ ಪ್ರಮುಖ ಷೇರುದಾರರೊಬ್ಬರಿಂದ B ಫಾರ್ಮ್‌ನಲ್ಲಿ ವಾರ್ಷಿಕ ಘೋಷಣೆಯನ್ನು ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ದಂಡವನು ವಿಧಿಲಸಾಗಿದೆ.ಕಳೆದ ಮೂರು ವರ್ಷಗಳ ಹಣಕಾಸು ವರ್ಷದಲ್ಲಿ ( FY 19, FY20 ಮತ್ತು FY21) ಘೋಷಣೆ ಪಡೆಯಲು ಬ್ಯಾಂಕ್ ವಿಫಲವಾಗಿದೆ.
ಇದನ್ನೂ ಓದಿ : ಒಂದೇ ಹೆಣ್ಣು ಮಗಳಿರುವ ದಂಪತಿಗಳಿಗೆ ಸಿಗುತ್ತೆ 2 ಲಕ್ಷ ರೂ.: ಸರಕಾರದಿಂದ ಘೋಷಣೆಯಾಯ್ತು ಹೊಸ ಯೋಜನೆ
ಇನ್ನು ಖಾಸಗಿ ಫೈನಾನ್ಸ್ ಕಂಪೆನಿಯಾಗಿರುವ ಬಜಾಜ್ ಫೈನಾನ್ಸ್ ಲಿಮಿಟೆಡ್‌ಗೆ ಕೂಡ ಆರ್‌ಬಿಐ ದಂಡ ವಿಧಿಸಿದೆ. ಪ್ರಮುಖವಾಗಿ ಬಜಾಜ್ ಫೈನಾನ್ಸ್ ಆರ್‌ಬಿಐ ನಿಯಮಗಳನ್ನು ಪಾಲನೆ ಮಾಡುವಲ್ಲಿ ವಿಫಲವಾಗಿದೆ. ಇದೇ ಕಾರಣಕ್ಕೆ 8.50 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಆರ್‌ಬಿಐ ನಿಯಮ ಪಾಲನೆ ಮಾಡದೇ ಇರುವುದರ ಜೊತೆಗೆ ಕೆಲವು ವಂಚನೆಗಳ ಕುರಿತು ಆರ್‌ಬಿಐಗೆ ವರದಿ ಮಾಡುವಲ್ಲಿ ವಿಫಲವಾಗಿದೆ.
Reserve Bank of India Huge Penalties on RBL Bank, Union Bank of India, Bajaj Finance for RBI non-compliance of guidelines