Digital Rupee : ರಿಟೇಲ್‌ ಡಿಜಿಟಲ್‌ ರೂಪಾಯಿ ಇಂದಿನಿಂದ ಪ್ರಾರಂಭ; ಬೆಂಗಳೂರಿನಲ್ಲೂ ಲಭ್ಯ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಡಿಸೆಂಬರ್ 1 ರಿಂದು ರಿಟೇಲ್‌ ಡಿಜಿಟಲ್ ರೂಪಾಯಿ (Digital Rupee) ಅಥವಾ ಇ-ರೂಪಾಯಿಗಳ ಮೊದಲ ಪೈಲಾಟ್‌ ಅನ್ನು ಪ್ರಾರಂಭಿಸಲಿದೆ. ಇದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಯೆಸ್‌ ಬ್ಯಾಂಕ್‌ ಮತ್ತು IDFC ಫಸ್ಟ್ ಬ್ಯಾಂಕ್ ಸೇರಿದಂತೆ ನಾಲ್ಕು ಬ್ಯಾಂಕುಗಳ ಪಾಲುದಾರಿಕೆಯೊಂದಿಗೆ ಆರ್‌ಬಿಐ ಪ್ರಾರಂಭಿಸಲಿದೆ. ಮುಂಬೈ, ನವದೆಹಲಿ, ಬೆಂಗಳೂರು ಮತ್ತು ಭುವನೇಶ್ವರದಲ್ಲಿ ಇಂದು ಬಿಡುಗಡೆಯಾಗಲಿದೆ. ರಿಟೇಲ್‌ ಡಿಜಿಟಲ್‌ ರೂಪಾಯಿಗಳನ್ನು ಆರಂಭದಲ್ಲಿ ಕ್ಲೋಸ್ಡ್ ಯೂಸರ್ ಗ್ರೂಪ್ (ಸಿಯುಜಿ) ಗಳಲ್ಲಿನ ಗ್ರಾಹಕರು ಮತ್ತು ವ್ಯಾಪಾರಿಗಳು ಬಳಸಬಹುದಾಗಿದೆ ಎಂದು ಆರ್‌ಬಿಐ ಹೇಳಿದೆ.

ಡಿಜಿಟಲ್‌ ರೂಪಾಯಿ ಎಂದರೇನು?
ಆರ್‌ಬಿಐ ಹೇಳಿದಂತೆ ಡಿಜಿಟಲ್‌ ರೂಪಾಯಿಯು ಕಾನೂನಾತ್ಮಕ ರೀತಿಯ ಡಿಜಿಟಲ್‌ ಟೋಕನ್‌ನ ರೂಪವಾಗಿದೆ. ಇದು ಕ್ರಿಪ್ಟೋಕರೆನ್ಸಿಗಳಿಗಿಂತ ಭಿನ್ನವಾಗಿದೆ. ಡಿಜಿಟಲ್‌ ರೂಪಾಯಿಯು ನೋಟು ಮತ್ತು ನಾಣ್ಯಗಳಂತೆಯೇ ಇರುತ್ತದೆ.

ಡಿಜಿಟಲ್‌ ರೂಪಾಯಿ ಹೇಗೆ ಕೆಲಸ ಮಾಡುತ್ತದೆ?
ಗ್ರಾಹಕರು ಮತ್ತು ವ್ಯಾಪಾರಿಗಳಿಗೆ ಬ್ಯಾಂಕ್‌ಗಳಂತಹ ಮಧ್ಯವರ್ತಿಗಳ ಮೂಲಕ ಡಿಜಿಟಲ್ ರೂಪಾಯಿ ಅಥವಾ ಇ-ರೂಪಾಯಿ ವಿತರಿಸಲಾಗುವುದು ಎಂದು ಆರ್‌ಬಿಐ ವಿವರಿಸಿದೆ. ಅರ್ಹ ಬ್ಯಾಂಕ್‌ಗಳು ನೀಡುವ ಡಿಜಿಟಲ್‌ ವ್ಯಾಲೆಟ್‌ ಮೂಲಕ ಬಳಕೆದಾರರು ಇ-ರೂಪಾಯಿ ಅಥವಾ ಡಿಜಿಟಲ್‌ ರೂಪಾಯಿಯೊಂದಿಗೆ ವಹಿವಾಟು ನಡೆಸಬಹುದಾಗಿದೆ. ಡಿಜಿಟಲ್ ರೂಪಾಯಿಗಳ ವಹಿವಾಟನ್ನು ವ್ಯಕ್ತಿಯಿಂದ ವ್ಯಕ್ತಿಗೆ (P2P) ಮತ್ತು ವ್ಯಕ್ತಿಯಿಂದ ವರ್ತಕರ (P2M) ನಡುವೆ ಮಾಡಬಹುದಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಆನ್‌ಲೈನ್ ವಹಿವಾಟಿನಂತೆಯೇ ವ್ಯಾಪಾರಿ ಸ್ಥಳಗಳಲ್ಲಿ ಇರುವ QR ಕೋಡ್‌ಗಳನ್ನು ಬಳಸಿಕೊಂಡು ಬಳಕೆದಾರರು ಟಿಜಿಟಲ್‌ ರೂಪಾಯಿ ಮೂಲಕ ಪಾವತಿಗಳನ್ನು ಮಾಡಬಹುದಾಗಿದೆ.

ಅರ್ಹ ಬ್ಯಾಂಕ್‌ಗಳು ಮತ್ತು ನಗರಗಳ ಪಟ್ಟಿ:
ಡಿಜಿಟಲ್ ರೂಪಾಯಿಯ ಹಂತ ಹಂತವಾಗಿ ಪ್ರಾರಂಭಿಸಲಾಗುವುದು ಎಂದು ಸೆಂಟ್ರಲ್ ಬ್ಯಾಂಕ್ ಹೇಳಿದೆ. ಆರ್‌ಬಿಐ ಮೊದಲ ಹಂತದಲ್ಲಿ ನಾಲ್ಕು ಬ್ಯಾಂಕ್‌ಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಿಸುತ್ತಿದೆ. ಅದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ನಾಲ್ಕು ನಗರಗಳಲ್ಲಿ ಮುಂಬೈ, ನವದೆಹಲಿ, ಬೆಂಗಳೂರು ಮತ್ತು ಭುವನೇಶ್ವರ ಗಳಲ್ಲಿ ಆರಂಭವಾಗಲಿದೆ. ಆರ್‌ಬಿಐ ಹೇಳಿದಂತೆ ಮುಂದೆ ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಇನ್ನೂ ನಾಲ್ಕು ಬ್ಯಾಂಕ್‌ಗಳು ಪೈಲಾಟ್‌ಗೆ ಸೇರ್ಪಡೆಗೊಳ್ಳಲಿವೆ.

ಇದನ್ನೂ ಓದಿ : Digital Currency: ಭಾರತದಲ್ಲಿ ಪ್ರಾಯೋಗಿಕವಾಗಿ ಬಿಡುಗಡೆಯಾದ ಡಿಜಿಟಲ್‌ ರೂಪಾಯಿ; ಇದರಿಂದಾಗುವ ಲಾಭವೇನು…

ಇದನ್ನೂ ಓದಿ : Mutual Funds : ನಿಮಗೆ SIP ಬಗ್ಗೆ ಗೊತ್ತಾ? ಇದರ ಮೂಲಕವು ಲಕ್ಷಗಟ್ಟಲೇ ಹಣ ಗಳಿಸಬಹುದು.

(Retail Digital Rupee coming on December 1. How it works and where you can get it?)

Comments are closed.