SBI FD Rates : ಗ್ರಾಹಕರಿಗೆ ದೀಪಾವಳಿ ಗಿಫ್ಟ್ : SBI FD ದರಗಳಲ್ಲಿ ಏರಿಕೆ

ನವದೆಹಲಿ : ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿದ್ದಂತೆಯೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(SBI FD Rates)ನ ಗ್ರಾಹಕರಿಗೆ ವಿಶೇಷ ಬಡ್ಡಿದರವನ್ನು ಘೋಷಣೆ ಮಾಡಿದೆ. ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ತನ್ನ ಗ್ರಾಹಕರಿಗೆ ಎಫ್‌ಡಿ (FD)ಗಳ ಮೇಲಿನ ಬಡ್ಡಿಯನ್ನು 80 ಬೇಸಿಸ್‌ ಪಾಯಿಂಟ್‌ಗಳವರೆಗೆ ಹೆಚ್ಚಳ ಮಾಡಿದೆ. ಅಕ್ಟೋಬರ್‌ 22ರಿಂದ ಅನ್ವಯವಾಗುವ ಈ ಹೊಸ ಬಡ್ಡಿದರವನ್ನು ಎಲ್ಲಾ ಅವಧಿಗಳಿಗೂ ನಿಗದಿಪಡಿಸಲಾಗಿದೆ. 2 ಕೋಟಿಗಿಂತ ಕಡಿಮೆ ಎಫ್‌ಡಿಗಳಿಗೆ ಹೊಸ ಬಡ್ಡಿ ದರಗಳು ಅನ್ವಯವಾಗುತ್ತದೆ. ಈ ಕುರಿತು ಬ್ಯಾಂಕ್ ತನ್ನ ವೆಬ್‌ಸೈಟ್‌ ಮೂಲಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಹೆಚ್ಚಳ ಬಡ್ಡಿದರಗಳಿಂದ ಹಿರಿಯ ನಾಗರಿಕರಿಗೆ ಹೆಚ್ಚಿನ ಲಾಭವಾಗಲಿದೆ.

SBI FD ಹೊಸ ಬಡ್ಡಿದರಗಳ ವಿವರ :

  • 5 ರಿಂದ 10 ವರ್ಷಗಳ ಎಫ್‌ಡಿಗಳ ಮೇಲೆ 6.10% ದರದಲ್ಲಿ ಬಡ್ಡಿಯನ್ನು ನೀಡುತ್ತದೆ.
  • 3 ರಿಂದ 5 ವರ್ಷಗಳ ಎಫ್‌ಡಿಗಳ ಮೇಲೆ 6.10% ದರದಲ್ಲಿ ಬಡ್ಡಿ ಲಭ್ಯವಿರುತ್ತದೆ.
  • 2 ರಿಂದ 3 ವರ್ಷಗಳ ಎಫ್‌ಡಿಗಳ ಮೇಲೆ 5.65% ಬದಲಿಗೆ 6.25% ಬಡ್ಡಿಯಲ್ಲಿ ಹೆಚ್ಚಳವನ್ನು ಪಡೆಬಹುದಾಗಿದೆ.
  • 1 ರಿಂದ 2 ವರ್ಷಗಳ ಎಫ್‌ಡಿಗಳ ಮೇಲೆ 5.60 ರ ಬದಲಿಗೆ 6.10% ಬಡ್ಡಿಯಲ್ಲಿ ಹೆಚ್ಚಳವನ್ನು ಪಡೆಬಹುದಾಗಿದೆ.
  • 211 ದಿನಗಳಿಂದ 1 ವರ್ಷದವರೆಗಿನ FD ಗಳ ಮೇಲಿನ ಬಡ್ಡಿಯನ್ನು 4.70% ರಿಂದ 5.50% ಕ್ಕೆ ಹೆಚ್ಚಿಸಲಾಗಿದೆ.
  • 180 ರಿಂದ 210 ದಿನಗಳ ಎಫ್‌ಡಿಗಳ ಮೇಲೆ 4.65% ಬದಲಿಗೆ 5.25% ದರದಲ್ಲಿ ಬಡ್ಡಿ ಲಭ್ಯವಿರುತ್ತದೆ.
  • 46 ರಿಂದ 179 ದಿನಗಳ ಎಫ್‌ಡಿಗಳ ಮೇಲೆ 4.50% ದರದಲ್ಲಿ ಬಡ್ಡಿಯನ್ನು ಪಡೆಯಬಹುದಾಗಿದೆ.
  • 7 ದಿನದಿಂದ 45 ದಿನಗಳ ಎಫ್‌ಡಿಗಳ ಮೇಲೆ ಶೇಕಡಾ 3 ರ ದರದಲ್ಲಿ ಬಡ್ಡಿ ಸಿಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ.

ಹಿರಿಯ ನಾಗರಿಕರಿಗೆ SBI FD ಬಡ್ಡಿದರಗಳ ವಿವರ :

  • 5 ರಿಂದ 10 ವರ್ಷಗಳವರೆಗಿನ ಎಫ್‌ಡಿಗಳ ಮೇಲೆ 6.90% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿದೆ.
  • 3 ರಿಂದ 5 ವರ್ಷಗಳ ಎಫ್‌ಡಿಗಳ ಮೇಲೆ ಶೇಕಡಾ 6.60 ರ ದರದಲ್ಲಿ ಬಡ್ಡಿ ಲಭ್ಯವಿದೆ.
  • 2 ರಿಂದ 3 ವರ್ಷಗಳ ಎಫ್‌ಡಿಗಳ ಮೇಲೆ 6.15% ಬದಲಿಗೆ 6.75% ಬಡ್ಡಿಯನ್ನು ಹೆಚ್ಚಳ ಮಾಡಲಾಗಿದೆ.
  • 1 ರಿಂದ 2 ವರ್ಷಗಳ ಎಫ್‌ಡಿ ಮೇಲಿನ ಬಡ್ಡಿ ದರವನ್ನು 6.10% ರಿಂದ 6.60% ಕ್ಕೆ ಹೆಚ್ಚಿಸಲಾಗಿದೆ.
  • 211 ದಿನಗಳಿಂದ 1 ವರ್ಷದವರೆಗಿನ FD ಗಳ ಮೇಲೆ ಶೇಕಡಾ 6 ರ ದರದಲ್ಲಿ ಬಡ್ಡಿ ಸಿಗುತ್ತದೆ.
  • 46 ರಿಂದ 179 ದಿನಗಳ ಎಫ್‌ಡಿ ಮೇಲಿನ ಬಡ್ಡಿಯು 4.5% ರಿಂದ 5% ಕ್ಕೆ ಏರಿಕೆಯಾಗಿದೆ.
  • 7 ರಿಂದ 45 ದಿನಗಳ ಎಫ್‌ಡಿಗಳ ಮೇಲೆ 3.50% ಬಡ್ಡಿಯನ್ನು ಮೊದಲಿನಂತೆ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ

ಇದನ್ನೂ ಓದಿ : Pradhan Mantri Vaya Vandana Yojana : ಒಮ್ಮೆ ಹಣ ಹೂಡಿಕೆ ಮಾಡಿ, ಪ್ರತಿ ತಿಂಗಳು 10,000 ರೂ. ಪಡೆಯಿರಿ

ಇದನ್ನೂ ಓದಿ : Senior Citizen FD Interest Rates 2022: ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳ ಮೇಲೆ ಯಾವ ಬ್ಯಾಂಕ್‌ ಎಷ್ಟು ಬಡ್ಡಿದರ ನೀಡುತ್ತದೆ ಗೊತ್ತಾ

ಇದನ್ನೂ ಓದಿ : Bank Holidays : ದೇಶದಲ್ಲಿ 21 ದಿನ, ಕರ್ನಾಟಕದಲ್ಲಿ 11 ದಿನ ಬ್ಯಾಂಕ್‌ ರಜೆ

ಎಸ್‌ಬಿಐ ಬ್ಯಾಂಕ್‌ ತನ್ನ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಶೇಕಡಾ 1 ರಷ್ಟು ಹೆಚ್ಚುವರಿ ಎಫ್‌ಡಿ ಬಡ್ಡಿಯನ್ನು ನೀಡುತ್ತದೆ. SBI ಪಿಂಚಣಿದಾರರು 5 ರಿಂದ 10 ವರ್ಷಗಳ FD ಮೇಲೆ 7.65% ಬಡ್ಡಿಯನ್ನು ಪಡೆಯುತ್ತಿದ್ದಾರೆ.

SBI FD Rates: SBI give Diwali Gift to customer; increased FD rates

Comments are closed.