Hair Straightening Product : ಹೇರ್‌ ಸ್ಟ್ರೈಟ್ನಿಂಗ್ ಮಾಡಿದ್ರೆ ಮಹಿಳೆಯರಿಗೆ ಗರ್ಭಗೋಶ ಕ್ಯಾನ್ಸರ್

ಮಹಿಳೆಯರ ಸೌಂದರ್ಯದಲ್ಲಿ ಬಹು ಪಾಲು ಮಹತ್ವ ಅವರ ತಲೆ ಕೂದಲು (Hair Straightening Product) ವಹಿಸಿಕೊಳ್ಳುತ್ತದೆ. ಅದರಲ್ಲೂ ಆಧುನಿಕ ಕಾಲಕ್ಕೆ ಮಾರು ಹೋದ ಮಹಿಳೆಯರು ಸಹಜವಾಗಿ ಬೆಳೆದಿರುವ ತಮ್ಮ ಕೂದಲನ್ನು ಅಲಂಕರಿಸಿಕೊಳ್ಳಲು ಸಲುವಾಗ ವಿವಿಧ ರೀತಿ ಉತ್ಪನ್ನಗಳನ್ನು ಬಳಸುತ್ತಾರೆ. ಸೋಪು, ಶಾಂಪು, ಹೇರ್‌ ಕಲರ್‌, ಹೇರ್‌ ಸ್ಟ್ರೈಟನಿಂಗ್‌ ಸೇರಿದಂತೆ ಅನೇಕ ಉತ್ಪನ್ನಗಳನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಕೂದಲನ್ನು ನೇರವಾಗಿಸಿಕೊಳ್ಳುವುದಕ್ಕಾಗಿ ಹೇರ್‌ ಸ್ಟ್ರೈಟಲಿಂಗ್‌ ಉತ್ಪನ್ನಗಳನ್ನು ಹೆಚ್ಚು ಹೆಚ್ಚಾಗಿ ಬಳಸುತ್ತಿದ್ದಾರೆ. ಈ ಕುರಿತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್‌ನ (NIH) ಹೊಸ ಅಧ್ಯಯನದ ಪ್ರಕಾರ, ಮಹಿಳೆಯರು ತಮ್ಮ ಕೂದಲು ನೇರಗೊಳಿಸುವ ಉತ್ಪನ್ನಗಳಲ್ಲಿ ರಾಸಾಯನಿಕ ಅಂಶವಿರುವುದರಿಂದ ಗರ್ಭಾಶಯದ ಕ್ಯಾನ್ಸರ್‌ಗೆ ತುತ್ತಾದ ಮಹಿಳೆಯರಿಗಿಂತ ಹೆಚ್ಚಿನ ಅಪಾಯವನ್ನು ಈ ಮಹಿಳೆಯರು ಹೊಂದಿರುತ್ತಾರೆ ಎಂದು ಹೇಳಿದ್ದಾರೆ.

ಉತ್ತರ ಕೆರೊಲಿನಾದ ರಿಸರ್ಚ್ ಟ್ರಯಾಂಗಲ್ ಪಾರ್ಕ್‌ನಲ್ಲಿರುವ NIEHS ಎನ್ವಿರಾನ್‌ಮೆಂಟ್ ಮತ್ತು ಕ್ಯಾನ್ಸರ್ ಎಪಿಡೆಮಿಯಾಲಜಿ ಗುಂಪಿನ ಮುಖ್ಯಸ್ಥರಾದ ಅಲೆಕ್ಸಾಂಡ್ರಾ ವೈಟ್, ಪಿಎಚ್‌ಡಿ ಪ್ರಮುಖ ಲೇಖಕರು ಪತ್ರಿಕೆಯೊದರಲ್ಲಿ ಹೀಗೆ ತಿಳಿಸಿದ್ದಾರೆ. “ಈ ದ್ವಿಗುಣಗೊಳಿಸುವ ದರವು ಸಂಬಂಧಿಸಿದೆ” “ಈ ಮಾಹಿತಿಯನ್ನು ಸಂದರ್ಭಕ್ಕೆ ಸೇರಿಸುವುದು ಮುಖ್ಯವಾಗಿದೆ, ಗರ್ಭಾಶಯದ ಕ್ಯಾನ್ಸರ್ ಹೆಚ್ಚಾಗಿ ಅಪರೂಪದ ಕ್ಯಾನ್ಸರ್‌ನಲ್ಲಿ ಒಂದಾಗಿದೆ ಎಂದು ಅಲೆಕ್ಸಾಂಡ್ರಾ ವೈಟ್ ಹೇಳಿದ್ದಾರೆ.

ಈ ಕುರಿತು ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ (NIH) ನಡೆಸಿದ ಸಂಶೋಧನೆಯ ಪ್ರಕಾರ ವಿಜ್ಞಾನಿಗಳು ಯುಎಸ್‌ನಲ್ಲಿ 33,497 ಮಹಿಳೆಯರಲ್ಲಿ ಸುಮಾರು 35 ರಿಂದ 74 ವಯಸ್ಸಿನ 33,497 ಮಹಿಳೆಯರಿಂದ ಡೇಟಾವನ್ನು ಕಲೆ ಹಾಕಿದ್ದಾರೆ. ಅದರಲ್ಲಿ ಹನ್ನೊಂದು ವರ್ಷದಿಂದ ಹೇರ್‌ ಸ್ಟ್ರೈಟಲಿಂಗ್‌ ಉತ್ಪನ್ನಗಳನ್ನು ಬಳಸುತ್ತಿದ್ದ ಮಹಿಳೆಯರಲ್ಲಿ ಸುಮಾರು 378 ಗರ್ಭಾಶಯದ ಕ್ಯಾನ್ಸರ್ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. “ಹೇರ್‌ ಸ್ಟ್ರೈಟಲಿಂಗ್‌ ಉತ್ಪನ್ನಗಳನ್ನು ಬಳಸದೇ ಇರುವ 1.64% ಮಹಿಳೆಯರು 70 ವರ್ಷದೊಳಗಿನ ಮಹಿಳೆಯರು ಗರ್ಭಾಕೋಶ ಕ್ಯಾನ್ಸರ್‌ನಿಂದ ದೂರ ಉಳಿಯುತ್ತಾರೆ. ಆದರೆ ಇದನ್ನು ಆಗಾಗ್ಗ ಬಳಸುವ ಶೇ. 4.05% ಮಹಿಳೆಯರಲ್ಲಿ ಪ್ರಕರಣಗಳು ಹೆಚ್ಚಾಗಲಿದೆ ಎಂದು NIEHS ನ ಮುಖ್ಯಸ್ಥ ಅಲೆಕ್ಸಾಂಡ್ರಾ ವೈಟ್, PhD ತಿಳಿಸಿದ್ದಾರೆ.

ಇದನ್ನೂ ಓದಿ : Sore Throat : ಚಳಿಗಾಲದಲ್ಲಿ ಉಂಟಾಗುವ ಸಾಮಾನ್ಯ ಗಂಟಲು ನೋವಿಗೆ ಈ ಮನೆಮದ್ದುಗಳೇ ಉತ್ತಮ ಪರಿಹಾರ

ಇದನ್ನೂ ಓದಿ : Protect your Skin Winter Season: ಚಳಿಗೆ ಚರ್ಮ ಒಡೆಯದಂತೆ ರಕ್ಷಿಸಿಕೊಳ್ಳಲು ಸುಲಭ ಪರಿಹಾರ

ಇದನ್ನೂ ಓದಿ : Diabetes : ಡಯಾಬಿಟೀಸ್‌ ನಿಯಂತ್ರಣದಲ್ಲಿ ತರಕಾರಿಗಳ ಮಹತ್ವ: ಈ 5 ತರಕಾರಿಗಳು ನಿಮ್ಮನ್ನು ಡಯಾಬಿಟೀಸ್‌ನಿಂದ ಕಾಪಾಡಬಲ್ಲದು

ವರದಿ ಪ್ರಕಾರ, ಹೇರ್ ಸ್ಟ್ರೈಟನಿಂಗ್ ಉತ್ಪನ್ನಗಳನ್ನು ಬಳಕೆ ಮಾಡುವ ಮಹಿಳೆಯರು ಗರ್ಭಾಕೋಶ ಕ್ಯಾನ್ಸರ್‌ಗೆ ತುತ್ತಾಗಿರುವ ಮಹಿಳೆಯರಿಗಿಂತ ಎರಡು ಪಟ್ಟು ಹೆಚ್ಚು ಅಪಾಯವನ್ನು ತಂದುಕೊಳ್ಳುತ್ತಿದ್ದಾರೆ ಎಂದು ಅಲೆಕ್ಸಾಂಡ್ರಾ ವೈಟ್‌ ಹೇಳಿದ್ದಾರೆ. ಮಹಿಳೆಯರು ಬಳಸುವ ಕೂದಲನ್ನು ನೇರಗೊಳಿಸುವ ಉತ್ಪನ್ನಗಳಲ್ಲಿ ಪ್ಯಾರಾಬೆನ್‌ಗಳು, ಬಿಸ್ಫೆನಾಲ್‌ ಎ, ಲೋಹಗಳು ಮತ್ತು ಫಾರ್ಮಾಲ್ಡಿಹೈಡ್‌ನಂತಹ ರಾಸಾಯನಿಕಗಳು ಇರುವುದರಿಂದ ಗರ್ಭಾಶಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಪತ್ರಿಕೆಗಳು ವರದಿ ಮಾಡಿದೆ. ಅಲೆಕ್ಸಾಂಡ್ರಾ ವೈಟ್‌ ” ಗರ್ಭಾಕೋಶದಲ್ಲಿ ಆಗುವ ಅಸಮಾನತೆಗೆ ಕೂದಲಿಗೆ ಬಳಸುವ ಉತ್ಪನ್ನಗಳು ಕಾರಣವೇ ಎಂದು ನಿರ್ಧರಿಸಲು ಇದರ ಬಗ್ಗೆ ಹೆಚ್ಚಿನ ಸಂಶೋಧನೆ ಮೂಲಕ ಇದನ್ನು ದೃಢಿಕರಿಸಬೇಕಾಗಿದೆ ಎಂದು ಹೇಳಿದ್ದಾರೆ.

Hair Straightening Product Cervical cancer for women if hair straightening is done

Comments are closed.