Vodafone Idea Share: ವೊಡಾಫೋನ್- ಐಡಿಯಾ 35.8% ಷೇರು ಸರ್ಕಾರಕ್ಕೆ: ಕಂಪನಿ ಆಡಳಿತ ಮಂಡಳಿ ನಿರ್ಧಾರ

ನವದೆಹಲಿ: ತರಂಗಾಂತರ(Teleservices) ಖರೀದಿಯ ಕಂತುಗಳ ಮೇಲಿನ ಬಡ್ಡಿ(Interest)ಯನ್ನು ಪಾವತಿಸಲು ವಿಫಲವಾಗಿರುವ ವೊಡಾಫೋನ್-ಐಡಿಯಾ ಕಂಪನಿ (Vi) (Vodafone Idea Limited)16 ಸಾವಿರ ಕೋಟಿ ರೂಪಾಯಿ ಮೌಲ್ಯದ (10 ರೂ. ನಂತೆ 1.600 ಕೋಟಿ ಷೇರು) ಷೇರುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ. ಆದರೆ, ಈ ಬಗ್ಗೆ ದೂರಸಂಪರ್ಕ ಇಲಾಖೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಂದು ವೇಳೆ ಸರ್ಕಾರ ಪ್ರಸ್ತಾವನೆ ಒಪ್ಪಿದರೆ ವಿಐಎಲ್‌ ನಲ್ಲಿ ಸರ್ಕಾರದ ಷೇರು (Vodafone Idea Share) ಶೇ.35.8ರಷ್ಟಾಗುತ್ತದೆ. ಈ ಮೂಲಕ ಕಂಪನಿಯಲ್ಲಿ ಅತ್ಯಧಿಕ ಷೇರನ್ನು ಸರ್ಕಾರವೇ ಹೊಂದಿದಂತೆ ಆಗುತ್ತದೆ.

ವೊಡಾಫೋನ್ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಒಟ್ಟು ಪಾಲು ಶೇಕಡಾ 71.2ರಿಂದ ಶೇಕಡಾ 46.3ಕ್ಕೆ ತಗ್ಗಲಿದ್ದು, ಸಾರ್ವಜನಿಕ ಹೂಡಿಕೆದಾರರ ಪಾಲು ಶೇಕಡಾ 27.9ರಿಂದ ಶೇಕಡಾ 17.9ಕ್ಕೆ ಕುಗ್ಗಲಿದೆ.

16 ಸಾವಿರ ಕೋಟಿ ರೂಪಾಯಿ ಬಡ್ಡಿಯ ಹೊರತಾಗಿ ವಿಐಎಲ್ ಹೊಂದಾಣಿಕೆ ಮಾಡಿದ ಒಟ್ಟು ಆದಾಯದ ಬಾಕಿ (ಎಜಿಆರ್) 1.95 ಲಕ್ಷ ಕೋಟಿ ರೂಪಾಯಿಯನ್ನು ಪಾವತಿಸ ಬೇಕಿದೆ. ಕಂಪನಿ ನಷ್ಟದಲ್ಲಿರುವ ಕಾರಣ ಇದಕ್ಕೆ 4 ವರ್ಷಗಳ ಮೊರಟೋರಿಯಂ (ಸಾಲ ತಿರುವಳಿಗೆ ಕಾಲಾವಕಾಶ) ಪಡೆದುಕೊಂಡಿದೆ.
ವಿಐಎಲ್ ಈ ಪ್ರಸ್ತಾವನೆ ಮಾಡುತ್ತಿದ್ದಂತೆ ಅದರ ಷೇರು ಮೌಲ್ಯ ಶೇ. 21 ಇಳಿಕೆ ಆಗಿದೆ. ಷೇರುಪೇಟೆ ವಹಿವಾಟು ಆರಂಭವಾದಾಗ ಶೇ. 20.54ರಷ್ಟು ಮೌಲ್ಯ ತಗ್ಗಿತು. ಪ್ರತಿ ಷೇರಿನ ಮೌಲ್ಯ 11.80 ರೂ.ಗೆ ಕುಸಿಯುತು. ತತ್ಪರಿಣಾಮ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು 8,764 ರೂ.ಗೆ ಇಳಿಕೆಯಾಗಿ 33,907 ಕೋಟಿ ರೂ.ಗೆ ತಗ್ಗಿದೆ.

ಟಾಟಾ ಟೆಲಿಸರ್ವೀಸಸ್‌ನಿಂದಲೂ ಸರ್ಕಾರಕ್ಕೆ ಷೇರು ಮಾರಾಟ:
ಎಜಿಆರ್ ಮೇಲೆ 850 ಕೋಟಿ ರೂಪಾಯಿ ಬಡ್ಡಿಯನ್ನು ಬಾಕಿ ಉಳಿಸಿಕೊಂಡಿರುವ ಟಾಟಾ ಟೆಲಿಸರ್ವೀಸಸ್ (ಮಹಾರಾಷ್ಟ್ರ) ಕಂಪನಿ ಕೂಡ ಬಡ್ಡಿಯ ಮೊತ್ತಕ್ಕೆ ಸಮನಾದ ಷೇರುಗಳನ್ನು ಸರ್ಕಾರಕ್ಕೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಪ್ರಸ್ತಾವನೆಗೆ ಸರ್ಕಾರ ಸಮ್ಮತಿಸಿದೆ. ಶೇ. 9.5ರಷ್ಟು ಪಾಲನ್ನು ಸರ್ಕಾರ ಈ ಕಂಪನಿಯಲ್ಲಿ ಹೊಂದಿದಂತೆ ಆಗುತ್ತದೆ.

ಇದನ್ನೂ ಓದಿ: Motorola Razr 5G : ಮತ್ತೆ ಲಾಂಚ್ ಆಗಲಿದೆ ಮೊಟೊರೋಲಾ ರೇಜರ್ 3: ಇದು ಮಡಚಬಹುದಾದ ಸ್ಮಾರ್ಟ್‌ಫೋನ್!

(Vodafone Idea decided to transfer 35.8% Share to Government)

Comments are closed.