Royal Enfield Price Hike: ಬೈಕ್ ಪ್ರಿಯರೇ, ಇತ್ತ ಗಮನಿಸಿ; ರಾಯಲ್ ಎನ್‌ಫೀಲ್ಡ್ ಬೆಲೆ ಹೆಚ್ಚಳ

ದ್ವಿಚಕ್ರ ವಾಹನ ತಯಾರಕ ಕಂಪೆನಿ ರಾಯಲ್ ಎನ್‌ಫೀಲ್ಡ್ (Royal Enfield Price Hike) ಭಾರತದಲ್ಲಿ ತನ್ನ ಕೆಲವು ಪ್ರಮುಖ ಮಾಡೆಲ್ ಗಳ ಬೆಲೆಗಳನ್ನು ಹೆಚ್ಚಿಸಿದೆ. ಈ ಹೊಸ ಬೆಲೆಗಳು ಜನವರಿಯಿಂದ ಜಾರಿಗೆ ಬಂದಿವೆ. ಕ್ಲಾಸಿಕ್ 350, ಮೆಟಿಯರ್ 350 ಮತ್ತು ಹಿಮಾಲಯನ್ ಮೋಟಾರ್‌ಸೈಕಲ್‌ಗಳಂತಹ ಜನಪ್ರಿಯ ಮಾದರಿಗಳ ಮೇಲೆ ಈ ಹೊಸ ಬೆಲೆಗಳು ಪರಿಣಾಮ ಬೀರುತ್ತವೆ. ಇತ್ತೀಚಿನ ವರದಿಗಳ ಪ್ರಕಾರ ಕ್ಲಾಸಿಕ್ 350 ಮಾಡೆಲ್ (Royal Enfield Classic 350) ಬ್ರ್ಯಾಂಡ್‌ನಿಂದ ಹೆಚ್ಚು ಮಾರಾಟವಾಗುವ ಮೋಟಾರ್‌ಸೈಕಲ್ ಆಗಿದೆ.

ಹೆಚ್ಚು ಬೆಲೆ ಏರಿಕೆಯು ಹಿಮಾಲಯ ಶ್ರೇಣಿಯ ಬೈಕ್‌ಗಳಲ್ಲಿ ಕಂಡುಬರುತ್ತದೆ. ಇದರ ಬೆಲೆ ಸುಮಾರು 4000ದಷ್ಟು ಹೆಚ್ಚಿದೆ. ರಾಯಲ್ ಎನ್‌ಫೀಲ್ಡ್ ಮೆಟಿಯರ್ 350 ಫೈರ್‌ಬಾಲ್ ಶ್ರೇಣಿಯ ಬೆಲೆಗಳನ್ನು ₹2,511 ಹೆಚ್ಚಿಸಲಾಗಿದೆ. ಈ ಬೈಕ್‌ಗಳ ಬೆಲೆ ಈಗ ₹2.01 ಲಕ್ಷದಿಂದ (ಎಕ್ಸ್ ಶೋ ರೂಂ) ಪ್ರಾರಂಭವಾಗುತ್ತದೆ ಮತ್ತು ₹2.03 ಲಕ್ಷದವರೆಗೆ (ಎಕ್ಸ್ ಶೋರೂಂ) ವರೆಗೆ ಇರುತ್ತದೆ. ಮೆಟಿಯರ್ 350 ಶ್ರೇಣಿಯಲ್ಲಿನ ಸ್ಟೆಲ್ಲಾರ್ ಶ್ರೇಣಿಯ ಬೈಕ್‌ಗಳು ಪ್ರತಿ ವೇರಿಯಂಟ್‌ನಲ್ಲಿ ₹2.601 ಹೆಚ್ಚಳವನ್ನು ಪಡೆದಿವೆ. ಮೆಟಿಯರ್ 350 ನ ಸ್ಟೆಲ್ಲರ್ ಶ್ರೇಣಿಯ ಬೆಲೆ ಈಗ ₹2.07 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತದೆ ಮತ್ತು ₹2.09 ಲಕ್ಷದವರೆಗೆ (ಎಕ್ಸ್-ಶೋರೂಮ್) ವರೆಗೆ ಇರುತ್ತದೆ.

ಮೆಟಿಯರ್ 350 ಶ್ರೇಣಿಯಲ್ಲಿನ ಟಾಪ್-ಸ್ಪೆಕ್ ಮಾಡೆಲ್ ಸೂಪರ್ನೋವಾ ಅತಿ ದೊಡ್ಡ ಬೆಲೆ ಏರಿಕೆಯನ್ನು ಪಡೆದುಕೊಂಡಿದೆ. ಪ್ರತಿ ವೇರಿಯಂಟ್ ₹ 2,752 ಹೆಚ್ಚಳದ ನಂತರ, ಈ ಶ್ರೇಣಿಯ ಬೆಲೆ ಈಗ ₹ 2.17 ಲಕ್ಷದಿಂದ ಪ್ರಾರಂಭವಾಗುತ್ತದೆ ಮತ್ತು ₹ 2.19 ಲಕ್ಷಕ್ಕೆ (ಎಕ್ಸ್-ಶೋರೂಮ್) ವರೆಗೆ ಹೋಗುತ್ತದೆ.

ಕ್ಲಾಸಿಕ್ 350 ಶ್ರೇಣಿಯ ಬೈಕ್‌ಗಳು ವೇರಿಯಂಟ ಆಧಾರದ ಮೇಲೆ ₹2,872 ಮತ್ತು ₹3,332 ರ ನಡುವೆ ಬೆಲೆ ಏರಿಕೆಯನ್ನು ಪಡೆದಿವೆ. ಎಂಟ್ರಿ-ಲೆವೆಲ್ ರೇಡಿಚ್ ಕ್ಲಾಸಿಕ್ 350 ಈಗ ₹1.87 ಲಕ್ಷ (ಎಕ್ಸ್ ಶೋ ರೂಂ) ಬೆಲೆಯಾದರೆ ಟಾಪ್-ಸ್ಪೆಕ್ ಕ್ರೋಮ್ ಕ್ಲಾಸಿಕ್ 350 ಬೆಲೆ ₹2.18 ಲಕ್ಷ (ಎಕ್ಸ್ ಶೋ ರೂಂ). ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ರೇಂಜ್‌ನಲ್ಲಿರುವ ಎಲ್ಲಾ ಬೈಕ್‌ಗಳು ₹4,000 ಕ್ಕಿಂತ ಹೆಚ್ಚು ಬೆಲೆ ಏರಿಕೆಯನ್ನು ಪಡೆದಿವೆ. ಗೋಲ್ಡ್ ಮತ್ತು ಗ್ರೇ ಹಿಮಾಲಯನ್ ಬೆಲೆ ಈಗ ₹ 2.14 ಲಕ್ಷ (ಎಕ್ಸ್-ಶೋರೂಂ) ನಿಂದ ಪ್ರಾರಂಭವಾಗಲಿದೆ ಮತ್ತು ಕಪ್ಪು ಮತ್ತು ಹಸಿರು ಹಿಮಾಲಯನ್ ಬೆಲೆ ₹ 2.22 ಲಕ್ಷ (ಎಕ್ಸ್-ಶೋರೂಮ್) ಹೆಚ್ಚಳವಾಗಿದೆ. ಈ ಮೂರು ಶ್ರೇಣಿಯ ಮೋಟಾರ್‌ಸೈಕಲ್‌ಗಳ ಹೊರತಾಗಿ, ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್, ಕಾಂಟಿನೆಂಟಲ್ ಜಿಟಿ ಮತ್ತು ಬುಲೆಟ್ ಅನ್ನು ಒಳಗೊಂಡಿರುವ ಇತರ ಮೂರು ಮಾದರಿಗಳನ್ನು ಮಾರಾಟ ಮಾಡುತ್ತದೆ. ಆದಾಗ್ಯೂ, ಈ ಮೋಟಾರ್‌ಸೈಕಲ್‌ಗಳ ಬೆಲೆಗಳು ಸದ್ಯಕ್ಕೆ ಬದಲಾಗದೆ ಉಳಿದಿವೆ.

ಇದನ್ನೂ ಓದಿ: National Youth Day 2022: ಸ್ಮಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವದಿನ ಎಂದು ಆಚರಿಸಲು ಕಾರಣವೇನು?

ಇದನ್ನೂ ಓದಿ: Opinion: ಡಿ ಕೆ ಶಿವಕುಮಾರ್ ಅವರು ಪಾದಯಾತ್ರೆಯ ವೇಳೆ ತೂರಾಡಲು Vertigo ಸಮಸ್ಯೆಯೂ ಕಾರಣವಾಗಿರಬಹುದು

(Royal Enfield Price Hike on Classic 350 Himalayan and Meteor models)

Comments are closed.