High Court whips : ಮೇಕೆದಾಟು ಪಾದಯಾತ್ರೆ ವಿರುದ್ದ ಸರಕಾರಕ್ಕೆ ಹೈಕೋರ್ಟ್‌ ಚಾಟಿ : ಕೆಪಿಸಿಸಿಗೆ ಶೋಕಾಸ್‌ ನೋಟಿಸ್‌ ಜಾರಿ

ಬೆಂಗಳೂರು : ಒಂದೆಡೆ ಎಫ್ ಆಯ್ ಆರ್ ದಾಖಲಿಸಿದ್ರೂ ಪಾದಯಾತ್ರೆ ನಿಲ್ಲಿಸದೇ ಮುಂದುವರೆಸುತ್ತಿರುವ ಕಾಂಗ್ರೆಸ್ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದೆ. ಮೇಕೆದಾಟು ಪಾದಯಾತ್ರೆ ಪ್ರಶ್ನಿಸಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಸರ್ಕಾರವನ್ನು ತರಾಟೆಗೆ (High Court whips)ತೆಗೆದುಕೊಂಡಿರುವ ಹೈಕೋರ್ಟ್ ಸರ್ಕಾರ ರ್ಯಾಲಿ ತಡೆಯಲು ಅಸಮರ್ಥವಾಗಿದೆಯೇ ಎಂದು ಪ್ರಶ್ನಿಸಿದೆ.

ಕೋವಿಡ್ ಹೆಚ್ಚುತ್ತಿರುವ ವೇಳೆ ರ್ಯಾಲಿ ನಡೆಸಲು‌ನೀವು ಅನುಮತಿ ಪಡೆದಿದ್ದೀರಾ ಎಂದು ಹೈಕೋರ್ಟ್ ನೇರವಾಗಿ ಕೆಪಿಸಿಸಿಯನ್ನು ಪ್ರಶ್ನೆ ಮಾಡಿದ್ದು, ಈ ಪ್ರಶ್ನೆಗೆ ಉತ್ತರಿಸಲು ನಾಳೆಯವರೆಗೆ ಕಾಲಾವಕಾಶ ನೀಡಿದೆ. ಇನ್ನೊಂದೆಡೆ ಕಾಂಗ್ರೆಸ್ ಪಾದಯಾತ್ರೆಗೆ ಹೆಚ್ಚುತ್ತಿರುವ ಕೋವಿಡ್ ನಡುವೆಯೂ ಅನುಮತಿ ನೀಡಿದ್ದೀರಾ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿರುವ‌ ಹೈಕೋರ್ಟ್ ಒಂದೊಮ್ಮೆ ಅನುಮತಿ ನೀಡಿಲ್ಲ ಎಂದಾದರೇ ಮತ್ತೆ ಯಾರಿಗಾಗಿ‌ಕಾಯುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದೆ. ಅಲ್ಲದೇ ಕರ್ನಾಟಕದಲ್ಲಿ ಕೊರೋನಾ ಹೆಚ್ಚುತ್ತಿರುವಾಗಲೇ ನಡೆಯುತ್ತಿರುವ ಪಾದಯಾತ್ರೆಯನ್ನು ನಡೆಯಲು ಅಸಮರ್ಥವಾಗಿರುವ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಈ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಎಎಜೆ ಸರ್ಕಾರ ಕೊರೋನಾ ನಿಯಮ ಉಲ್ಲಂಘನೆಯಡಿ ಈಗಾಗಲೇ ಪಾದಯಾತ್ರೆ ಹೊರಟವರ ಮೇಲೆ ಮೂರು ಎಫ್ ಆಯ್ ಆರ್ ದಾಖಲಿಸಲಾಗಿದೆ ಎಂಬ ಮಾಹಿತಿ ನೀಡಿದೆ. ಇನ್ನು ಕೊರೋನಾ ವೇಳೆ ಪಾದಯಾತ್ರೆ ನಡೆಸುತ್ತಿರುವ ಕಾಂಗ್ರೆಸ್ ನಡೆಗೆ ಆಕ್ಷೇಪ ವ್ಯಕ್ತಪಡಿಸಿರುವ ನ್ಯಾಯಾಲಯ ಕೆಪಿಸಿಸಿಗೆ ಉತ್ತರಿಸಲು ನಾಳೆಯವರೆಹೆ ಕಾಲಾವಕಾಶ ನೀಡಿದ್ದು ಪ್ರಕರಣದ ವಿಚಾರಣೆಯನ್ನು ಜನವರಿ 14 ಕ್ಕೆ ಮುಂದೂಡಿಕೆ ಮಾಡಿದೆ.

ಅಲ್ಲದೇ ಸರ್ಕಾರದ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿರುವ ಹೈಕೋರ್ಟ್ , ನ್ಯಾಯಾಲಯದ ನಿರ್ದೇಶನದವರೆಗೂ ನೀವು ಕ್ರಮಕೈಗೊಳ್ಳುವುದಿಲ್ಲವೇ? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ಪಾದಯಾತ್ರೆ ನಡೆದಿರುವಾಗಲೂ ನೀವು ಸುಮ್ಮನಿರುವುದು ಯಾಕೆ? ಎಸ್ ಓಪಿ ಜಾರಿಗೊಳಿಸಲು ನೀವು ಕೈಗೊಳ್ಳುವ ಕ್ರಮವೇನು ಈ ಬಗ್ಗೆ ಉತ್ತರಿಸುವಂತೆ ಸರ್ಕಾರಕ್ಕೂ ಸೂಚಿಸಿದ್ದು ನಾಳೆ ಸಂಜೆಯವರೆಗೂ ಕಾಲಾವಕಾಶ ನೀಡಿದೆ.

ಹೆಚ್ಚುತ್ತಿರುವ ಕರೋನಾ ನಡುವೆಯೂ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ಪ್ರಶ್ನಿಸಿ ನ್ಯಾಯವಾದಿ ಶ್ರೀಧರ ಪ್ರಭು ಎಂಬುವವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ಕೊರೋನಾದಿಂದ ಜನರು ಸಂಕಷ್ಟದಲ್ಲಿರುವ ಜನರಿಗೆ ಸರ್ಕಾರ ನಿಯಮ ರೂಪಿಸಿದೆ. ಆದರೆ ರಾಜಕಾರಣಿಗಳು ಪಾದಯಾತ್ರೆ ಕೈಗೊಳ್ಳುತ್ತಿದ್ದು ಈ ಬಗ್ಗೆ ತುರ್ತು ವಿಚಾರಣೆ ನಡೆಸಿ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಪ್ರಭು ಮನವಿ ಮಾಡಿದ್ದರು.

ಇದನ್ನೂ ಓದಿ : ಕೊರೋನಾ ನಿಯಂತ್ರಣ ಜಿಲ್ಲಾಧಿಕಾರಿಗಳ ಹೆಗಲಿಗೆ : ಹೊರಬಿತ್ತು ಸರ್ಕಾರದ ಪರಿಷ್ಕೃತ ಮಾರ್ಗಸೂಚಿ

ಇದನ್ನೂ ಓದಿ : ಕಾಂಗ್ರೆಸ್ ಪಾದಯಾತ್ರೆಗೆ‌ ಮತ್ತೊಂದು ಸಂಕಷ್ಟ: ಡಿಕೆಶಿ ವಿರುದ್ಧ ಮಕ್ಕಳ ಹಕ್ಕು ಆಯೋಗದಿಂದ‌ ಕೇಸ್

(High Court whips govt against mekedatu padayatra, show cause notice to KPCC)

Comments are closed.