Infinix Smart 7 : ಜಬರ್ದಸ್ತ್‌ ಬ್ಯಾಟರಿ ಇರುವ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ ಬಿಡುಗಡೆ; ಈ ದಿನದಿಂದ ಪ್ರಾರಂಭವಾಗಲಿದೆ ಸೇಲ್‌…

ಇನ್‌ಫಿನಿಕ್ಸ್‌ (Infinix) ಭಾರತದಲ್ಲಿ ತನ್ನ ಇತ್ತೀಚಿನ ಹೊಸ ಸ್ಮಾರ್ಟ್‌ಫೋನ್‌ (Smartphone) ಇನ್‌ಫಿನಿಕ್ಸ್‌ ಸ್ಮಾರ್ಟ್‌ 7 (Infinix Smart 7) ಅನ್ನು ಬಿಡುಗಡೆ ಮಾಡಿದೆ. ಇದು ಎಂಟ್ರೀ ಲೆವೆಲ್‌ ಸ್ಮಾರ್ಟ್‌ಫೋನ್‌ ಆಗಿದೆ. 6000mAh ನ ದೊಡ್ಡ ಬ್ಯಾಟರಿ ಹೊಂದಿರುವ ಫೋನ್‌ ಅನ್ನು RAM ಮತ್ತು ಶೇಖರಣಾ ರೂಪಾಂತರದಲ್ಲಿ ಪರಿಚಯಿಸಲಾಗಿದೆ. ಕಂಪನಿಯು ಹಲವಾರು ಬಣ್ಣ ಆಯ್ಕೆಗಳೊಂದಿಗೆ ಇದನ್ನು ಬಿಡುಗಡೆ ಮಾಡಿದೆ. ಇನ್ಫಿನಿಕ್ಸ್ ಸ್ಮಾರ್ಟ್ 7 ಅನ್ನು 7,500 ರೂ. ಕ್ಕಿಂತ ಕಡಿಮೆ ಬೆಲೆಗೆ ಪರಿಚಯಿಸಲಾಗಿದೆ. ಈ ಫೋನಿನ ನಿಜವಾದ ಬೆಲೆ, ವಿಶೇಷತೆಗಳು ಮತ್ತು ಲಭ್ಯತೆಯ ಬಗ್ಗೆ ಇಲ್ಲಿದೆ ಓದಿ.

ಇನ್‌ಫಿನಿಕ್ಸ್‌ ಸ್ಮಾರ್ಟ್‌7 ಸ್ಮಾರ್ಟ್‌ಫೋನ್‌ ಬೆಲೆ ಮತ್ತು ಲಭ್ಯತೆ:
ಇನ್‌ಫಿನಿಕ್ಸ್‌ ಸ್ಮಾರ್ಟ್‌7 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ 7,299 ರೂ.ಗಳಿಗೆ ಬಿಡುಗಡೆಮಾಡಲಾಗಿದೆ. ಆದರೆ ಈ ಫೋನ್‌ ಖರೀದಿಸಲು ಗ್ರಾಹಕರು ಕಾಯಬೇಕಾಗಿದೆ. ಇದರ ಮಾರಾಟವು ಫೆಬ್ರವರಿ 27 ರಂದು ಮಧ್ಯಾಹ್ನ 12 ಗಂಟೆಗೆ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗುತ್ತದೆ. ಈ ಫೋನ್‌ನಲ್ಲಿ 4GB RAM ಜೊತೆಗೆ 64GB ಆಂತರಿಕ ಸಂಗ್ರಹಣೆ ಇರುತ್ತದೆ. ಈ ಹ್ಯಾಂಡ್‌ಸೆಟ್ ಅನ್ನು ಮೂರು ಬಣ್ಣದ ಆಯ್ಕೆಗಳಲ್ಲಿ ಅಜೂರ್ ಬ್ಲೂ, ಎಮರಾಲ್ಡ್ ಗ್ರೀನ್ ಮತ್ತು ನೈಟ್ ಬ್ಲ್ಯಾಕ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಇನ್‌ಫಿನಿಕ್ಸ್‌ ಸ್ಮಾರ್ಟ್‌7 ಫೋನಿನ ವೈಶಿಷ್ಟ್ಯಗಳು :
ಡಿಸ್ಪ್ಲೇ : 6.6 -ಇಂಚಿನ HD+ IPS ಡಿಸ್ಪ್ಲೇ
ಬ್ಯಾಟರಿ : 6000mAh ಶಕ್ತಿಶಾಲಿ ಬ್ಯಾಟರಿ
RAM: 4GB RAM
ರಿಫ್ರೆಶ್ ದರ: 120Hz
ಹಿಂಬದಿಯ ಕ್ಯಾಮೆರಾ: 13MP ಮುಖ್ಯ ಕ್ಯಾಮೆರಾ
ಸೆಲ್ಫಿ ಕ್ಯಾಮೆರಾ: 5MP
ಸಂಪರ್ಕ: ಡ್ಯುಯಲ್ ಸಿಮ್ ಸ್ಲಾಟ್, USB-ಟೈಪ್ C ಪೋರ್ಟ್, ಡ್ಯುಯಲ್ 4G VoLTE, ಬ್ಲೂಟೂತ್ 4.2

ಇನ್‌ಫಿನಿಕ್ಸ್‌ ಸ್ಮಾರ್ಟ್‌7 ಫೋನ್‌ 1612 x 720 ಪಿಕ್ಸೆಲ್ ರೆಸಲ್ಯೂಶನ್ ಮತ್ತು 500 nits ಗರಿಷ್ಠ ಬ್ರೈಟ್ನೆಸ್‌ ಜೊತೆಗೆ 6.6-ಇಂಚಿನ HD + IPS ಡಿಸ್ಪ್ಲೇ ಹೊಂದಿದೆ. ಇದು Unisoc Spreadtrum SC9863A ಪ್ರೊಸೆಸರ್ ನಿಂದ ವೇಗ ಪಡೆದುಕೊಳ್ಳಲಿದೆ. ವಿಶೇಷವೆಂದರೆ ಈ ಫೋನ್‌ 4GB RAM ಜೊತೆಗೆ 64GB ಸಂಗ್ರಹಣೆ ಹೊಂದಿದೆ. ಇದನ್ನು ಮೈಕ್ರೋ SD ಕಾರ್ಡ್ ಸಹಾಯದಿಂದ 2TB ವರೆಗೆ ಹೆಚ್ಚಿಸಬಹುದಾಗಿದೆ. ಇದರ RAM ಅನ್ನು 3GB ವರೆಗೆ ಹೆಚ್ಚಿಸಿಕೊಳ್ಳಬಹುದಾಗಿದೆ. ಇನ್‌ಫಿನಿಕ್ಸ್‌ ಸ್ಮಾರ್ಟ್‌ 7 ಆಂಡ್ರಾಯ್ಡ್ 12 ಆಧಾರಿತ XOS 12 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 3D ಟೆಕ್ಸ‌್ಚರ್‌ ಡಿಸೈನ್‌ ಹೊಂದಿದ್ದು, ವಿಶಿಷ್ಟವಾದ ಅನುಭವ ನೀಡಲಿದೆ.

ಇದನ್ನೂ ಓದಿ : Tecno Pop 7 Pro : ಬಜೆಟ್‌ ಫ್ರೆಂಡ್ಲೀ ಸ್ಮಾರ್ಟ್‌ಫೋನ್‌ ಟೆಕ್ನೊ ಪಾಪ್‌ 7 ಪ್ರೋ ಬಿಡುಗಡೆ; ಇದರ ಬೆಲೆ, ವೈಶಿಷ್ಟ್ಯ, ಲಭ್ಯತೆ ಹೀಗಿದೆ…

ಇದನ್ನೂ ಓದಿ : WhatsApp Latest Feature : ಇನ್ಮುಂದೆ ವಾಟ್ಸಪ್‌ನಲ್ಲಿ ಒರಿಜನಲ್‌ ಕ್ವಾಲಿಟಿಯಲ್ಲೇ ಫೋಟೋ ಶೇರ್‌ ಮಾಡಬಹುದು; ಹೇಗೆ ಗೊತ್ತಾ…

(Infinix Smart 7 launched in India. 6000mah battery, 4gb ram, and more in just rs 7,299)

Comments are closed.